ಮಠದ ವಸತಿ ನಿಲಯದಲ್ಲಿ ವಾಸವಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳ ಪ್ರಕರಣದಿಂದ ಹಿಂದೆ ಸರಿಯುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶುಗೆ 3 ಕೋಟಿ ರೂಪಾಯಿಗಳ ಆಮಿಷ ಒಡ್ಡಾಲಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಒಡನಾಡಿ ಸಂಸ್ಥೆಯ ಪರಶರುರಾಮ್ ಸಂತ್ರಸ್ತ ಮಕ್ಕಳು ತಮ್ಮಗಾದ ಅನ್ಯಾಯದ ಬಗ್ಗೆ ಗೋಳಾಡುತ್ತಿದ್ದಾರೆ. ಆದರೆ, ನಾಚಿಕೆಯಿಲ್ಲದ ನಾಯಕರೊಬ್ಬರು ಹಣದ ಸ್ವಾಮೀಜಿ ಪರವಾಗಿ ಹಣದ ಆಮಿಷ ಒಡ್ಡಿದ್ದರು ಎಂದು ಕಿಡಿಕಾರಿದ್ದಾರೆ.
ಕಳೆದ 25 ವರ್ಷಗಳಿಂದ 3-16 ಪ್ರಾಯದ ಸುಮಾರು 23ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹೆಣ್ಣು ಮಗಳೊಬ್ಬಳು ನಮ್ಮ ಬಳಿ ತನ್ನ ಕಷ್ಟವನ್ನ ಹೇಳಿಕೊಂಡು ಮುರುಘಾ ಶ್ರೀ ಮಾಡಿದ ನೀಚ ಕೃತ್ಯವನ್ನ ಹೇಳಿಕೊಂಡಳು. ನಾವು ಜವಾಬ್ದಾರಿಯುತ ಸ್ಥಾನದಲ್ಲಿದುಕೊಂಡು ಮೌನ ವಹಿಸುವುದು ಹೇಗೆ ನಮ್ಮ ಜೀವ ಇರುವವರೆಗೂ ಮಕ್ಕಳ ಪರ ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.
