• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪ್ರತಿದಿನ ಮಧ್ಯಪ್ರದೇಶದಲ್ಲಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗುತ್ತಿದ್ದಾರೆ: NGO ವರದಿ

Any Mind by Any Mind
May 23, 2022
in ದೇಶ
0
ಪ್ರತಿದಿನ ಮಧ್ಯಪ್ರದೇಶದಲ್ಲಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗುತ್ತಿದ್ದಾರೆ: NGO ವರದಿ
Share on WhatsAppShare on FacebookShare on Telegram

2021 ರಲ್ಲಿ ಮಧ್ಯಪ್ರದೇಶದಲ್ಲಿ ಪ್ರತಿದಿನ ಸರಾಸರಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಾಣೆಯಾಗಿದ್ದಾರೆ. ಕ್ರೈ (Child Rights and You- Cry) ಎನ್‌ಜಿಒ ತಯಾರಿಸಿದ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ವರದಿಯ ಪ್ರಕಾರ, ಉತ್ತರ ಭಾರತದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ADVERTISEMENT

ದೆಹಲಿಯ ಎಂಟು ಪೊಲೀಸ್ ಜಿಲ್ಲೆಗಳಲ್ಲಿ, 2021 ರಲ್ಲಿ ಪ್ರತಿದಿನ ಐದು ಮಕ್ಕಳು ಕಾಣೆಯಾಗಿದ್ದಾರೆ. ಉತ್ತರ ಪ್ರದೇಶದ 58 ಜಿಲ್ಲೆಗಳಲ್ಲಿ ಪ್ರತಿ ದಿನ ಸರಾಸರಿ ಎಂಟು ಮಕ್ಕಳು (ಆರು ಹುಡುಗಿಯರು ಮತ್ತು ಇಬ್ಬರು ಗಂಡು ಮಕ್ಕಳು) ಕಾಣೆಯಾಗುತ್ತಿದ್ದಾರೆ ಎಂದು CRY ಯ ‘ಕಾಣೆಯಾದ ಮಕ್ಕಳ ಸ್ಥಿತಿ ವರದಿ’ (Status Report on Missing Children) ಹೇಳಿದೆ.

2021 ರಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಣೆಯಾದ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ಐದು ಪಟ್ಟು ಹೆಚ್ಚು ಎಂದು ವರದಿ ಹೇಳಿದೆ. ರಾಷ್ಟ್ರೀಯ ಅಪರಾಧ ಬ್ಯೂರೋದ (NCB) 2020 ರ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದಲ್ಲಿ 8,751 ಮತ್ತು ರಾಜಸ್ಥಾನದಲ್ಲಿ 3,179 ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿವೆ. ಅದೇ ವೇಳೆ, 2021 ರಲ್ಲಿ ಮಧ್ಯಪ್ರದೇಶದಲ್ಲಿ 10,648 ಮತ್ತು ರಾಜಸ್ಥಾನದಲ್ಲಿ 5,354 ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರಗಳು ವರದಿ ಮಾಡಿದೆ.

RTI ಅರ್ಜಿಗಳ ಮೂಲಕ ಸಂಗ್ರಹಿಸಿದ ಮಾಹಿತಿಯು ಮಧ್ಯಪ್ರದೇಶದ ಇಂದೋರ್, ಭೋಪಾಲ್, ಧಾರ್, ಜಬಲ್ಪುರ್ ಮತ್ತು ರೇವಾ ಜಿಲ್ಲೆಗಳಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ತೋರಿಸಿದೆ.

“ಮಧ್ಯಪ್ರದೇಶದಿಂದ ಪ್ರತಿದಿನ 24 ಹುಡುಗಿಯರು ಮತ್ತು ಐದು ಹುಡುಗರು ಸೇರಿದಂತೆ ಸರಾಸರಿ 29 ಮಕ್ಕಳು ಕಾಣೆಯಾಗುತ್ತಾರೆ” ಎಂದು ವರದಿ ಹೇಳಿದೆ.

2021 ರಲ್ಲಿ ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಒಟ್ಟು 2,998 ಮಕ್ಕಳು (835 ಗಂಡು ಮತ್ತು 2,163 ಹುಡುಗಿಯರು) ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಕಾಣೆಯಾದ ಮಕ್ಕಳ ಪೈಕಿ ಶೇ.88.9ರಷ್ಟು ಮಕ್ಕಳು 12-18 ವರ್ಷ ವಯಸ್ಸಿನವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಮೊದಲ ಐದು ಜಿಲ್ಲೆಗಳಲ್ಲಿ ಲಕ್ನೋ, ಮೊರಾದಾಬಾದ್, ಕಾನ್ಪುರ್ ನಗರ, ಮೀರತ್ ಮತ್ತು ಮಹಾರಾಜ್‌ಗಂಜ್ ಸೇರಿವೆ ಎಂದು ಅಂಕಿ ಅಂಶ ತೋರಿಸಿದೆ.

ದೆಹಲಿಯ ಎಂಟು ಪೊಲೀಸ್ ಜಿಲ್ಲೆಗಳಲ್ಲಿ, 2021 ರಲ್ಲಿ ಒಟ್ಟು 1641 ಮಕ್ಕಳು ನಾಪತ್ತೆಯಾಗಿದ್ದಾರೆ, ಅಂದರೆ ಪ್ರತಿದಿನ ಸರಾಸರಿ ಐದು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿ ಹೇಳುತ್ತದೆ. ದೆಹಲಿಯಲ್ಲಿ ಕಾಣೆಯಾದ ಶೇ.85ರಷ್ಟು ಮಕ್ಕಳು 12-18 ವರ್ಷ ವಯಸ್ಸಿನವರಾಗಿದ್ದಾರೆ.

ರಾಜಸ್ಥಾನದಲ್ಲಿ ಒಟ್ಟು 5,354 ಮಕ್ಕಳು (4,468 ಹುಡುಗಿಯರು ಮತ್ತು 886 ಹುಡುಗರು) ನಾಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ರಾಜಸ್ಥಾನದಲ್ಲಿ ಪ್ರತಿದಿನ 12 ಹುಡುಗಿಯರು ಮತ್ತು ಇಬ್ಬರು ಹುಡುಗರು ಸೇರಿದಂತೆ ಸರಾಸರಿ 14 ಮಕ್ಕಳು ಕಾಣೆಯಾಗುತ್ತಾರೆ.

ಈ ಅಂಕಿಅಂಶಗಳನ್ನು 2020 ಕ್ಕೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿ ಮಕ್ಕಳ ಕಾಣೆಯಾದ ಪ್ರಕರಣಗಳಲ್ಲಿ ಸುಮಾರು 26 ಪ್ರತಿಶತ ಮತ್ತು ರಾಜಸ್ಥಾನದಲ್ಲಿ 41 ಪ್ರತಿಶತದಷ್ಟು ಹೆಚ್ಚಳವನ್ನು ಸೂಚಿಸುತ್ತವೆ.

ಅದರ ಪ್ರಕಾರ, 2020 ರಲ್ಲಿ 2,222 ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗಿದೆ ಮತ್ತು ರಾಜಸ್ಥಾನದಿಂದ ಅತಿ ಹೆಚ್ಚು ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗಿದೆ.

ಉತ್ತರ ಪ್ರದೇಶದ 58 ಜಿಲ್ಲೆಗಳು ಮಾತ್ರ ಡೇಟಾವನ್ನು ಒದಗಿಸಿವೆ. ಅದೇ ರೀತಿ, ದೆಹಲಿಯ ಎಲ್ಲಾ ಪೊಲೀಸ್ ಜಿಲ್ಲೆಗಳು ಅಂಕಿಅಂಶಗಳನ್ನು ನೀಡಿಲ್ಲ. ಮತ್ತೊಂದೆಡೆ, ಆರ್‌ಟಿಐ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ಹರಿಯಾಣ ಪ್ರತಿಕ್ರಿಯಿಸಲಿಲ್ಲ.

CRY (ಉತ್ತರ) ಪ್ರಾದೇಶಿಕ ನಿರ್ದೇಶಕರಾದ ಸೋಹಾ ಮೊಯಿತ್ರಾ, “ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 2021 ರಲ್ಲಿ ಕಾಣೆಯಾದ ಮಕ್ಕಳ ಪೈಕಿ 83 ಪ್ರತಿಶತಕ್ಕಿಂತ ಹೆಚ್ಚು ಹೆಣ್ಣುಮಕ್ಕಳು. ಕಳೆದ ವರ್ಷ ಮಧ್ಯಪ್ರದೇಶದಲ್ಲಿ 8,876 ಮತ್ತು ರಾಜಸ್ಥಾನದಲ್ಲಿ 4,468 ಹುಡುಗಿಯರು ನಾಪತ್ತೆಯಾಗಿದ್ದಾರೆ.” ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ನಾಪತ್ತೆಯಾಗಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಅವರು ಹೇಳೀದ್ದಾರೆ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿಮಧ್ಯಪ್ರದೇಶರಾಜಸ್ಥಾನ
Previous Post

ಶಾಲಾ ಪಠ್ಯಗಳು  ಸಾಂಸ್ಕೃತಿಕ ಸಂಘರ್ಷದ ನೆಲೆಯಾಗಬಾರದು

Next Post

ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಸಾಧ್ಯತೆ!

Related Posts

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
0

ನವದೆಹಲಿ: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ...

Read moreDetails
400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

February 1, 2026
Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

February 1, 2026
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
Next Post
ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ : ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ!

ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಸಾಧ್ಯತೆ!

Please login to join discussion

Recent News

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

by ಪ್ರತಿಧ್ವನಿ
February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
Top Story

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

by ಪ್ರತಿಧ್ವನಿ
February 1, 2026
400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?
Top Story

400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

by ಪ್ರತಿಧ್ವನಿ
February 1, 2026
ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?
Top Story

ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!