ಕೇಂದ್ರ ಸರ್ಕಾರ ಇಂದು ಮಂಗಳವಾರ ಫೆಬ್ರವರಿ 1 ರಂದು 2022-23ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ 2019, 2020, 2021ರಲ್ಲಿ ಬಜೆಟ್ ಮಂಡಿಸಿದ್ದರು. ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು ಅದರ ಪ್ರಮುಖ ಅಂಶಗಳು ಈ ಕೆಳಗಿನಂತಿದೆ.
- ‘ದೇಶದಾದ್ಯಂತದ ವಿದ್ಯಾ ರ್ಥಿಗಳಿಗೆ ಅವರ ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವ ದರ್ಜೆಯ ಗುಣಮಟ್ಟದ ಸಾರ್ವತ್ರಿ ಕ ಶಿಕ್ಷಣದ ಪ್ರವೇಶವನ್ನು ಒದಗಿಸಲು ಡಿಜಿಟಲ್ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗುವುದು’ – (01 :15PM)
- ರೈತರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷ 5 ಸಾವಿರ ಕೋಟಿ ರೂಪಾಯಿ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ MSP 2.42 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷ ಎಂಎಸ್‌ಪಿ ಬಲೆ 2.37 ಕೋಟಿ ರೂ. ಇಳಿಕೆ ಮಾಡಲಾಗುವುದು. – (12:55 PM)
- ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ , ಡಿಜಿಟಲ್ ಆಸ್ತಿ ವರ್ಗಾವಣೆಯ ಮೇಲೆ 30% ತೆರಿಗೆ. – (12:50PM)
- ಬರುವ ಮೂರು ವರ್ಷಗಳಲ್ಲಿ ಉತ್ತಮ ದಕ್ಷತೆಯ ೪೦೦ ಆಧುನಿಕ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. – (12:48PM)
- 2022-23ರ ಒಳಗೆ 5G ಮೊಬೈಲ್ ಸೇವೆಗಳು ಬಿಡುಗಡೆ. – (12: 45PM)
- ಪಾಲಿಶ್ ಮಾಡಿದ ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ಅಬಕಾರಿ ಸುಂಕವನ್ನು ಶೇ 5ರಷ್ಟು ಕಡಿತಗೊಳಿಸಲಾಗಿದೆ. ಇದೇ ವರ್ಷ ಜೂನ್ ತಿಂಗಳಿನಿಂದ ಇ-ಕಾಮರ್ಸ್ ವೇದಿಕೆಗಳ ಮೂಲಕ ವಜ್ರದ ರಫ್ತಿಗೆ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಸರಳ ನಿಯಮಗಳನ್ನು ರೂಪಿಸಲಾಗುವುದು ಎಂದು ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು. – (12:40 PM)
- ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ಹೂಡಿಕೆಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆಯಲ್ಲಿ ಶೇ 14ರ ಮಿತಿ ಸಿಗಲಿದೆ. – (12: 37PM)
- 2022ರ ಜನವರಿ ತಿಂಗಳ ಒಟ್ಟು 1,40,986 ಕೋಟಿ ರೂಪಾಯಿ GST ಸಂಗ್ರಹವಾಗಿದೆ, ಇದು GST ಪ್ರಾರಂಭವಾದ ದಿನದಿಂದ ಇದೇ ಮೊದಲಬಾರಿ ಇಷ್ಟು ದೊಡ್ಡ ಮಟ್ಟದ ತೆರಿಗೆ ಸಂಗ್ರಹವಾಗಿದೆ. – (12:33PM)
- ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. – (12:28PM)
- 2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು 48,000 ಕೋಟಿ ರೂ ಮಂಜೂರು ಮಾಡಲಾಗಿದೆ. – (12:22PM)
- ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ. 60 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಗೆ ಅವಕಾಶ ನೀಡಲಾಗಿದೆ – (12:15PM)
- ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಕಾವೇರಿ–ಪೆನ್ನಾರ್, ಕೃಷ್ಣಾ–ಪೆನ್ನಾರ್, ನರ್ಮದಾ–ಗೋದಾವರಿ ಹಾಗೂ ಗೋದಾವರಿ–ಕೃಷ್ಣ ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಗಾಗಿ ಬಜೆಟ್ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. – (12:11PM)
- ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ. – (11:57AM)
- ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕ ಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ವನ್ ಕ್ಲಾ ಸ್ ವನ್ ಟಿವಿ’ ಆರಂಭಿಸಲಾಗುವುದು. ಪ್ರಧಾನಿ ‘ಇ-ವಿದ್ಯಾ ’ ಯೋಜನೆ ಅಡಿಯಲ್ಲಿ 200 ಚಾನೆಲ್ಗಳು ಅಸ್ತಿತ್ವ ಕ್ಕೆ ಬರಲಿವೆ ಎಂದು ಸಚಿವೆ ತಿಳಿಸಿದ್ದಾರೆ. – (11:43AM)
- ಆರ್ಥಿಕ ಪ್ರಗತಿಗೆ ಅತ್ಯಗತ್ಯವಾಗಿ ಬೇಕಿರುವ ಕಾರ್ಗೊ ಟರ್ಮಿನಲ್ಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ 100 ಕಾರ್ಗೋ ಟರ್ಮಿನಲ್ಗಳನ್ನು ನಿರ್ಮಿಸಲಾಗುವುದು ಎಂದು ಸಚಿವೆ ನಿರ್ಮಲಾ ತಿಳಿಸಿದರು. – (11:20 AM)
- ನಾವು ಓಮಿಕ್ರಾನ್ ಅಲೆಯ ಮಧ್ಯೆ ಇದ್ದೇವೆ, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. ‘ಸಬ್ಕಾ ಪ್ರಯಾಸ್’, ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ. – (11:12AM)
- ಭಾರತದ ಬೆಳವಣಿಗೆ 9.27% ಎಂದು ಅಂದಾಜಿಸಲಾಗಿದೆ: ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ – (11:08 AM)












