ಇಡೀ ದೇಶಾದ್ಯಂತ ಏಕ ಕಾಲಕ್ಕೆ ರಾಮ ಮಂದಿರ ನಿರ್ಮಾಣದ ಪ್ರಯುಕ್ತ ವಂತಿಗೆ ಸಂಗ್ರಹ ಆರಂಭಿಸಿರುವ ಸಂಘ ಪರಿವಾರದ ವಿವಿಧ ಸಂಘಟನೆಗಳು ನಿತ್ಯವೂ ವಂತಿಗೆ ಸಂಗ್ರಹದಲ್ಲಿ ತೊಡಗಿವೆ. ವಂತಿಗೆ ಸಂಗ್ರಹದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಳ್ಳುತಿದ್ದು ಸದ್ದಿಲ್ಲದೆ ಬೃಹತ್ ಮೊತ್ತ ಸಂಗ್ರಹವಾಗುತ್ತಿದೆ. ಮಕ್ಕಳು ಮಹಿಳೆಯರೆನ್ನದೆ ರಾಮಮಂದಿರ ನಿರ್ಮಾಣ ವಂತಿಗೆ ಸಂಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ದೆಹಲಿಯಲ್ಲಿ ಈಗ ಮೈಕೊರೆಯುವ ಛಳಿ ಇದ್ದು ಬೆಳಿಗ್ಗೆ ಮತ್ತು ಸಂಜೆ ವಂತಿಗೆ ಸಂಗ್ರಹದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಎಲ್ಲರೂ ಕೇಸರಿ ಶಾಲುಗಳು , ಟೊಪ್ಪಿಗಳು ಅದರ ಮೇಲೆ , ಜೈ ಶ್ರೀ ರಾಮ್ ಎಂದು ಬರೆದಿರುವ ಟೊಪ್ಪಿಗಳನ್ನು ಧರಿಸಿ ಸಂಗ್ರಹಾತಿಯಲ್ಲಿ ತೊಡಗಿದ್ದಾರೆ. ಈ ಕಾರ್ಯಕರ್ತರು 20 ರಿಂದ 25 ಜನರ ತಂಡವನ್ನು ಮಾಡಿಕೊಂಡಿದ್ದು ವಿಹೆಚ್‌ಪಿ ಈ ಅಭಿಯಾನವನ್ನು ಮುನ್ನಡೆಸುತಿದ್ದು, ಆರ್‌ಎಸ್‌ಎಸ್ ಸದಸ್ಯರು ಸಂಖ್ಯೆಯನ್ನು ಹೆಚ್ಚಿಸಲು ಅವರ ಜತೆ ಸೇರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತು ಮಾತನಾಡಿದ ವಿಹೆಚ್‌ಪಿ ಮುಖಂಡ ದಿನೇಶ ಠಾಕೂರ್ ಅವರು ನಾವು ಪ್ರತಿ ಮನೆಗೂ ಹೋಗುತ್ತಿದ್ದೇವೆ. ಪ್ರತಿದಿನ, ಬೆಳಿಗ್ಗೆ ಮತ್ತು ಸಂಜೆ ನಾವು ಶ್ರೀರಾಮನ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ ಫೆಬ್ರವರಿ 28 ರೊಳಗೆ ವಿಎಚ್‌ಪಿ ದೆಹಲಿ ಹೊರವಲಯದ ನಾರೈನಾ ಪ್ರದೇಶದಲ್ಲಿ 16,500 ಮನೆಗಳನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಸ್ವಯಂಸೇವಕರು ತಮ್ಮ ದಿನವನ್ನು ಕರಪತ್ರಗಳನ್ನು ವಿತರಿಸುವ ಮೂಲಕ ಪ್ರಾರಂಭಿಸುತ್ತಾರೆ. ಈ ಕರಪತ್ರದಲ್ಲಿ ಈ ದೇವಾಲಯಕ್ಕಾಗಿ, ಹಿಂದೂ ಸಮಾಜವು 492 ವರ್ಷಗಳಿಂದ ಹೋರಾಡಬೇಕಾಯಿತು ಮತ್ತು 76 ಯುದ್ಧಗಳನ್ನು ಮಾಡಿದೆ. ಇದಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ಸ್ವಯಂ ಸೇವಕರು ತೆರಳುತ್ತಿರುವ ವಾಹನಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸಲಾಗಿದ್ದು ಶೀಘ್ರದಲ್ಲೇ ʼಹಮ್ಮೆ ಅಯೋಧ್ಯೆ ಜಾನೆ ಕಾ, ಮಂದಿರ ಗಜಾಬ್ ಬನಾನಾ ಹೈʼ (ನಾವು ಅಯೋಧ್ಯೆಗೆ ಹೋಗಿ ಒಂದು ಅದ್ಭುತವಾದ ದೇವಾಲಯವನ್ನು ನಿರ್ಮಿಸಬೇಕು), ʼಭಾರತ್ ಮಾತಾ ಕಿ ಜೈʼ ಮತ್ತುʼ ಜೈ ಶ್ರೀ ರಾಮ್ʼ ಮುಂತಾದ ಘೋಷಣೆಗಳು ಮೊಳಗುತ್ತಿವೆ. ದೆಹಲಿ ಮೆಟ್ರೊದ ಕಾರ್ಯನಿರ್ವಾಹಕ ಎಂಜಿನಿಯರ್ ಕೃತೇಶ್ ರಾಯ್ ಅವರು ಒಂದು ತಂಡವನ್ನು ಮುನ್ನಡೆಸುತಿದ್ದು ರಾಮ ಮಂದಿರವನ್ನು ನಿರ್ಮಿಸಲಾಗುತ್ತಿರುವುದು ಬಹಳ ಹೆಮ್ಮೆಯ ವಿಷಯ. ನಾನು ಅದರ ಭಾಗವಾಗಿದ್ದೇನೆ ಎಂದು ನನಗೆ ಸಂತೋಷವಾಗಿದೆ ಎಂದು ಹೇಳುತ್ತಾರೆ. ಮನೆಯೊಂದರಲ್ಲಿ 14 ವರ್ಷದ ಆರ್ನಾ ತನ್ವಾರ್ ಎಂಬ ಬಾಲಕಿ ತಾನು ಬಹಳ ದಿನಗಳಿಂದ ಗೋಲಕದಲ್ಲಿ ಕೂಡಿಟ್ಟಿದ್ದ 750 ರೂಪಾಯಿಗಳನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾಳೆ. ನಾನು ನನ್ನ ಜನ್ಮ ದಿನದಿಂದ ಹಣ ಉಳಿಸುತ್ತಿದ್ದೇನೆ. ನಾನು ಯಾವುದೇ ಹಣವನ್ನು ಖರ್ಚು ಮಾಡಲಿಲ್ಲ ಮತ್ತು ಈಗ ಇದನ್ನು ದೇವಸ್ಥಾನಕ್ಕೆ ನೀಡಲು ಬಯಸುತ್ತೇನೆ, ಎಂದು ಅವಳು ಹೇಳಿದಳು. ಮತ್ತೊಂದು ಮನೆಯಲ್ಲಿ ಮಾತನಾಡಿದ ಮಾಧವಿ ತಿವಾರಿ ಎಂಬ ಗೃಹಿಣಿ ನನ್ನ ತಂದೆ ಮತ್ತು ಸಹೋದರರು ಆರ್‌ಎಸ್‌ಎಸ್ ನ ಭಾಗವಾಗಿದ್ದಾರೆ, ಆರ್‌ಎಸ್‌ಎಸ್ ನನ್ನ ರಕ್ತದಲ್ಲಿದೆ ಎಂದು ಹೇಳಿ 500 ರೂಪಾಯಿಗಳ ವಂತಿಗೆ ನೀಡಿದರು.

ಚಿತ್ರ; ದಿ ಪ್ರಿಂಟ್
ಒಂದು ದಿನದಲ್ಲಿ, ತಂಡವು ಐದರಿಂದ 20 ಮನೆಗಳಿಗೆ ಭೇಟಿ ನೀಡುತಿದ್ದು ಒಬ್ಬರಿಂದ 10, 100 ಮತ್ತು 1,000 ರೂಪಾಯಿಗಳ ಟೋಕನ್‌ಗಳನ್ನು ನೀಡುತ್ತದೆ. 1,000 ರೂ.ಗಿಂತ ಹೆಚ್ಚು ದೇಣಿಗೆ ನೀಡಿದವರಿಗೆ ರಶೀದಿ ನೀಡಲಾಗುತ್ತದೆ.ಪ್ರತಿದಿನ ಬೆಳಿಗ್ಗೆ ಹಣವನ್ನು ನಿಗದಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಠಾಕೂರ್ ಹೇಳುತ್ತಾರೆ. ಯಾರೂ ಹಣವನ್ನು 24 ಅಥವಾ 48 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ. ವಿಎಚ್‌ಪಿ ನಿಧಿ ಸಂಗ್ರಹವನ್ನು ಮೇಲ್ವಿಚಾರಣೆ ಮಾಡಲು ಒಂದು ಅಪ್ಲಿಕೇಶನ್ ಅನ್ನು ಸಹ ಹೊಂದಿದೆ ಎಂದು ಅವರು ಹೇಳುತ್ತಾರೆ. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಅವರು ಜನವರಿ 15 ರಂದು ನಿಧಿ ಸಂಗ್ರಹಕ್ಕಾಗಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಜಾಗೃತಿ ಅಭಿಯಾನದಲ್ಲಿ ವಿಎಚ್‌ಪಿ ಮತ್ತು ಭಜರಂಗದಳದ ಕಾರ್ಯಕರ್ತರು ಬೈಕ್‌ಗಳಲ್ಲಿ ಸುತ್ತಾಡಿಕೊಂಡು ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆಯುತಿದ್ದಾರೆ. ಭಾರತದಲ್ಲಿ ಫೆಬ್ರವರಿ 27 ರವರೆಗೆ ರಾಮ ಮಂದಿರ ವಂತಿಗೆ ಸಂಗ್ರಹಣೆ ಮುಂದುವರಿಯುತ್ತದೆ ಎಂದು ಕುಮಾರ್ ಹೇಳುತ್ತಾರೆ.
ಆದರೆ ವಿಹೆಚ್‌ಪಿ ದೆಹಲಿ ಘಟಕವು ಫೆಬ್ರವರಿ 20 ರೊಳಗೆ ನಿಧಿ ಸಂಗ್ರಹ ಪೂರ್ಣಗೊಳಿಸುವ ಯೋಜನೆಯಲ್ಲಿದೆ. ಈ ಬೃಹತ್ ವಂತಿಗೆ ಸಂಗ್ರಹವು ದೇಶದಲ್ಲೆ ಮೊದಲಾಗಿದ್ದು ಈತನಕವೂ ಯಾವುದೇ ಸಂಘಟನೆಯು ದೇಶದ 13 ಕೋಟಿ ಮನೆಗಳನ್ನು ತಲುಪಿಲ್ಲ ಎಂದು ಅವರು ಹೇಳಿದರು. ಈ ವಂತಿಗೆ ಸಂಗ್ರಹದಲ್ಲಿ ಸಹಾಯ ಮಾಡಲು ಮಹಿಳೆಯರ ತಂಡವನ್ನೂ ರಚಿಸಲಾಗಿದೆ. ದಕ್ಷಿಣ ದೆಹಲಿಯ ಆರ್.ಕೆ.ಪುರಂನ ಸೆಕ್ಟರ್ 6 ರಲ್ಲಿ, ಅಂತಹ ಒಂದು ತಂಡವು ದೇವಾಲಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದೆ. ಮಹಿಳೆಯರ ನೇತೃತ್ವವನ್ನು ವಿಎಚ್‌ಪಿಯ ದೆಹಲಿ ಸಂಚಾಲಕಿ ಸುನೀತಾ ಶುಕ್ಲಾ ವಹಿಸಿದ್ದಾರೆ. ವಿಎಚ್‌ಪಿಯ ಮಹಿಳಾ ಘಟಕಗಳಾದ ದುರ್ಗಾ ವಾಹಿನಿ ಮತ್ತು ಮಾತೃಶಕ್ತಿಯ ಕೆಲಸವನ್ನೂ ಅವರು ನೋಡಿಕೊಳ್ಳುತ್ತಾರೆ. 1992 ರಲ್ಲಿ ಕರ ಸೇವಕರ ಜನಸಮೂಹವು ಬಾಬರಿ ಮಸೀದಿಯನ್ನು ಕೆಡವಿದಾಗ ತಾನು ಅಯೋಧ್ಯೆಯಲ್ಲಿದ್ದೆ ಎಂದು ಶುಕ್ಲಾ ಹೇಳುತ್ತಾರೆ.

ಚಿತ್ರ; ದಿ ಪ್ರಿಂಟ್
ತುಂಬಾ ಹೋರಾಟದ ನಂತರವೇ ನಾವು ಈ ದಿನವನ್ನು ಕಂಡಿದ್ದೇವೆ. ನಾವು ಇಂದು ಜೀವಂತವಾಗಿದ್ದರೆ, ಅದು ಶ್ರೀರಾಮನ ಕಾರಣದಿಂದಾಗಿ ಎಂದು ಅವರು ಹೇಳುತ್ತಾರೆ. ನಾವು ಹಣ ಸಂಗ್ರಹಿಸಲು ಪ್ರತಿ ಮನೆಗೆ ಹೋಗುತ್ತೇವೆ. ರಾಮ ದೇವಾಲಯವು ತಮ್ಮದು ಎಂದು ಎಲ್ಲರೂ ಭಾವಿಸಬೇಕು ಎಂದು ಅವರು ಹೇಳಿದರು. ಎಲ್ಲ ಮಹಿಳಾ ತಂಡವು 20 ರ ಹರಯದ ಯುವತಿಯರು ಮತ್ತು ವಯಸ್ಸಾದ ಮಹಿಳೆಯರನ್ನು ಒಳಗೊಂಡಿದೆ. ಇತ್ತೀಚೆಗಷ್ಟೆ ಮಹಿಳೆಯೊಬ್ಬರು ದೆಹಲಿಯಲ್ಲಿ ವಂತಿಗೆ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ವೀಡಿಯೋ ಮಾಡಿದ್ದರು. ಅದು ವೈರಲ್ ಆಗಿತ್ತು. ಆದರೆ ಈಗ ವಂತಿಗೆ ಸಂಗ್ರಹವು ಭರದಿಂದ ಸಾಗುತ್ತಿದೆ.
ಮೂಲ; the print