ಇಂಥ ಘಟನೆಗಳನ್ನ ಸಾಮಾನ್ಯವಾಗಿ ಸಿನಿಮಾಗಳಲ್ಲಿ(cinema) ನೋಡಿರ್ತೀವಿ. ಬಾಲ್ಯದಲ್ಲಿ ಎಂದೋ ಬೇರೆ ಬೇರೆಯಾದ ಗೆಳೆಯರು(friends) ಅಥವಾ ಪ್ರೇಮಿಗಳು(lovers) ಎಷ್ಟೋ ವರ್ಷಗಳ ನಂತರ ಮತ್ತೆ ಒಂದಾದ ಕಥೆಗಳನ್ನ ನೋಡಿರ್ತೀವಿ, ಓದಿರ್ತಿವಿ. ಆದ್ರೆ ಇಲ್ಲಿ ನಿಜ ಜೀವನದಲ್ಲಿ ಅಂತಹ ಅಪರೂಪದ ಘಟನೆಯೊಂದು ನಡೆದಿದೆ. ಸ್ನೇಹ-ಗೆಳೆತನ (friendship) ಅನ್ನೋದು ವಯಸ್ಸು,ಜಾತಿ,ಗಡಿ, ಎಲ್ಲವನ್ನೂ ಮೀರಿದ್ದು ಮತ್ತು ಚಿರ ಶಾಶ್ವತವಾದದ್ದು ಅಂತ ಈ ಗೆಳೆಯರು ನಿರೂಪಿಸಿದ್ದಾರೆ.

1947ರಲ್ಲಿ ಭಾರತ-ಪಾಕ್ (India-Pakistan) ವಿಭಜನೆಯಾದಾಗ ಲಕ್ಷಾಂತರ ಜನ ಕೊಲ್ಲಲ್ಪಟ್ಟರು ಮತ್ತು ಸ್ಥಳಾಂತರಗೊಂಡರು . ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಸ್ನೇಹಿತರು(friends) ಹಾಗೂ ಕುಟುಂಬವನ್ನ(family) ಶಾಶ್ವತವಾಗಿ ಕಳೆದುಕೊಂಡರು..ಇದೇ ರೀತಿ ಬೇರ್ಪಟ್ಟ ಇಬ್ಬರು ಬಾಲ್ಯದ ಆತ್ಮೀಯ ಸ್ನೇಹಿತರು ಯುಎಸ್ನಲ್ಲಿ (u.s)ಹಲವಾರು ವರ್ಷಗಳ ನಂತರ ಭೇಟಿಯಾಗಿದ್ದಾರೆ.

ಮೇಗನ್ ಕೊಠಾರಿ (megan kotari) ಎಂಬ ಯುವಕ ತನ್ನ ಅಜ್ಜ ಸುರೇಶ್ ಕೊಠಾರಿಯನ್ನು (suresh kotari) ಅವರ ಬಾಲ್ಯದ ಆತ್ಮೀಯ ಸ್ನೇಹಿತ ಎಜಿ ಶಾಕಿರ್ (AG Sharik) ಅವರೊಂದಿಗೆ ಮತ್ತೆ ಸೇರಿಸುವ ಕ್ಷಣವನ್ನ ಸೆರೆಹಿಡಿದಿದ್ದಾರೆ. ಈ ಇಬ್ಬರೂ ಗುಜರಾತ್ನ (gujurat) ಡೀಸಾದಲ್ಲಿ ಬಾಲ್ಯದಿಂದ ಒಟ್ಟಿಗೆ ಬೆಳೆದವರು . ನಂತರ 1947 ರಲ್ಲಿ ಸುಮಾರು 12 ವರ್ಷದವರಾಗಿದ್ದಾಗ ಬೇರ್ಪಟ್ಟರು ದೇಶ (nation) ವಿಭಜನೆಯಿಂದ ಬೇರ್ಪಟ್ಟಿದ್ದರು.

1947ರಲ್ಲಿ ಹೀಗೆ ಅನಿರೀಕ್ಷಿತವಾಗಿ ಈ ಇಬ್ಬರು ಗೆಳೆಯರು ಬೇರ್ಪಟ್ಟ ಮೇಲೆ, ಒಬ್ಬರು ಮತ್ತೊಬ್ಬರನ್ನ ಸಂಪರ್ಕಿಸಲು ಎಲ್ಲಾ ರೀತಿಯ ಪ್ರಯತ್ನ ಪಟ್ಟಿದ್ದರು. ಪತ್ರಗಳನ್ನ (letters) ಬರೆದಿದ್ದರು. ತಮ್ಮ ತಮ್ಮ ವಿಳಾಸಗಳನ್ನ (address)ಕಳುಹಿಸಿಕೊಟ್ಟಿದ್ದರು. ಆದ್ರೆ ಆಗ ಎರಡು ದೇಶಗಳ ನಡುವೆಯಿದ್ದ ಉಧ್ವಿಗ್ನತೆಯಿಂದಾಗಿ ಯಾವುದೇ ಸಂಪರ್ಕ ಸಾಧಿಸಲು ಅಥವಾ ಪರಸ್ಪರ ಸಂಪರ್ಕ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹಾಗೇ ಕಾದೂ ಕಾದೂ ದಶಕಗಳೇ (decads) ಉಳುರಿ ಹೋಗಿದ್ದವು. ಕೊನೆಗೂ ಬಾಲ್ಯದಲ್ಲಿ ಬೇರ್ಪಟ್ಟಿದ್ದ ಗೆಳೆಯರು ವೃದ್ಧಾಪ್ಯದಲ್ಲಿ ಒಂದಾಗಿದ್ದಾರೆ.

1947ರಲ್ಲಿ ಬೇರಾದ ಈ ಜೋಡಿ 1981ರ ವರೆಗೂ ಒಬ್ಬರನ್ನೊಬ್ಬರು ಸಂಪರ್ಕಿಸಲು ಸಾಧ್ಯವಾಗ್ಲೇ ಇಲ್ಲ. ಆದ್ರೆ ಕೊನೆಗೂ 1982ರಲ್ಲಿ ಸ್ನೇಹಿತರೊಬ್ಬರ ಸಹಾಯದಿಂದ ಈ ಇಬ್ಬರು ಭೇಟಿಯಾಗಿದ್ರಂತೆ. ಅದೇ ಕೊನೆ . ನಂತರ ಮತ್ತೆ 41 ವರ್ಷಗಳ (41 years) ಕಾಲ ಮತ್ತೆ ಸಂಪರ್ಕವೇ ಇಲ್ಲ. ಇದೀಗ ಅಂತಿಮವಾಗಿ ನ್ಯೂಯಾರ್ಕ್ (Newyork) ನಲ್ಲಿ ಈ ಗೆಳೆಯರು ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾಗಿದ್ದು ಇಬ್ಬರ ಸಂತೋಷದ ಕ್ಷಣಗಳನ್ನೂ ಮೇಗನ್ ಕೊಟಾರಿ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ.
ಗಡಿ ಮತ್ತು ರಾಜಕೀಯ (Borders & Politics) ಅಡೆತಡೆಗಳ ಹೊರತಾಗಿಯೂ ಅವರು ಇನ್ನೂ ಪರಸ್ಪರ ಹೊಂದಿದ್ದ ಪ್ರೀತಿ, ಸ್ನೇಹ ಆಳವಾಗಿದೆ. ಯಾವುದೇ ಸರ್ಕಾರ ಅಥವಾ ಗಡಿಗಳು ಮಾನವ ಸಂಬಂಧವನ್ನು (Relationships) ದೂರ ಮಾಡಲು ಸಾಧ್ಯವಿಲ್ಲ ಎಂದು ಈ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ.
ಈ ಭಾವನಾತ್ಮಕ ವೀಡಿಯೊವನ್ನು ನೋಡಿದ ಇಂಟರ್ನೆಟ್ (internet) ಬಳಕೆದಾರರು ಈ ಇಬ್ಬರು ಸ್ನೇಹಿತರ ಗೆಳೆತನಕ್ಕೆ ಫಿದಾ ಆಗಿ ನಾನಾ ರೀತಿಯ ಮೆಚ್ಚುಗೆಯ ಕಮೆಂಟ್ಸ್ಗಳನ್ನ ಪೋಸ್ಟ್ ಮಾಡಿದ್ದಾರೆ.






