ಉತ್ತರಾಖಂಡ: ರಾಜ್ಯದಲ್ಲಿ ಅಕ್ರಮ ಮದರಸಾಗಳನ್ನು ಗುರುತಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ಮೇರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಉತ್ತರಾಖಂಡ ಪೊಲೀಸರ ಸ್ಥಳೀಯ ಗುಪ್ತಚರ ಘಟಕ (LIU)ಗೆ ಜಿಲ್ಲಾಧಿಕಾರಿಗಳ ಸಹಯೋಗದಲ್ಲಿ ಜವಾಬ್ದಾರಿ ವಹಿಸಲಾಗಿದ್ದು, 190 ಮದರಸಾಗಳು ಅಕ್ರಮವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ನೈನಿತಾಲ್‌ನ ಉಧಮ್ ಸಿಂಗ್ ನಗರದಲ್ಲಿ 129 ಅಕ್ರಮ ಮದರಸಾಗಳು ಪತ್ತೆಯಾಗಿದ್ದು, ಸಾವಿರಾರು ಮಂದಿ ದಾಖಲಾತಿ ಹೊಂದಿದ್ದಾರೆ ಎಂದು ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಹಲ್ದ್ವಾನಿಯಲ್ಲಿ ಸುಮಾರು 26 ಮದರಸಾಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಸ್ಥೆಗಳು ನೋಂದಣಿಯಾಗಿಲ್ಲ ಅಥವಾ ಅಲ್ಪಸಂಖ್ಯಾತ ಇಲಾಖೆಗೆ ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಉತ್ತರ ಪ್ರದೇಶ ಮತ್ತು ನೆರೆಯ ರಾಜ್ಯಗಳಿಂದ ಬಂದವರು.ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದ್ದು, ಈಗ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಕುಮಾರ್ ಹೇಳಿದರು.

ವಿಕಾಸ್ ನಗರದಲ್ಲಿ 18, ಡೆಹ್ರಾಡೂನ್ ನಗರದಲ್ಲಿ 10, ದೋಯಿವಾಲಾದಲ್ಲಿ ಆರು ಮತ್ತು ಕಲ್ಸಿಯಲ್ಲಿ 1 ಸೇರಿದಂತೆ ಡೆಹ್ರಾಡೂನ್‌ನಲ್ಲಿ ಇದುವರೆಗೆ 35 ಅಕ್ರಮ ಮದರಸಾಗಳು ಪತ್ತೆಯಾಗಿವೆ. ಅವರು 3,000 ವಿದ್ಯಾರ್ಥಿಗಳ ಸಂಚಿತತೆಯನ್ನು ಹೊಂದಿದ್ದಾರೆ.
ರಾಜ್ಯದಲ್ಲಿನ ಮದರಸಾಗಳ ಪರಿಶೀಲನೆಗೆ ಆದೇಶ ನೀಡಿದ ಅವರು, “ಅಕ್ರಮ ಮದರಸಾಗಳಾಗಲಿ ಅಥವಾ ಅಕ್ರಮ ಅತಿಕ್ರಮಣವಾಗಲಿ, ಉತ್ತರಾಖಂಡದಲ್ಲಿ ಅವಕಶವಿಲ್ಲ ಅತಿಕ್ರಮಣ ಮತ್ತು ಮದರಸಾಗಳ ಪರಿಶೀಲನೆಗೆ ಆದೇಶ ನೀಡಲಾಗಿದೆ. ಅಲ್ಪಸಂಖ್ಯಾತ ಇಲಾಖೆ ಇದನ್ನು ನೋಡಿಕೊಳ್ಳುತ್ತದೆ. ಡಿಎಂ ಮತ್ತು ಎಸ್‌ಪಿ ಕೂಡ ಪರಿಶೀಲನೆ ನಡೆಸಲಿದ್ದಾರೆ ಎಂದು ಧಮಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.






