ಇಂದಿನ ದಿನಮಾನದ ಟೆನಿಸ್ ಲೋಕದ ಬಿಗ್-3 ಪುರುಷರ ಗ್ರಾನ್ ಸ್ಲಾಂ ಡಾಮಿನೇಷನ್ ಮುಂದುವರೆದಿದ್ದು, ಸರ್ಬಿಯಾದ ನೋವಾಕ್ ಜೋಕೋವಿಚ್ ದಾಖಲೆಯ ಎಂಟನೇ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ವೃತ್ತಿ ಬದುಕಿನ 17ನೇ ಗ್ರಾನ್ ಸ್ಲಾಂಅನ್ನು ಜೋಕೋವಿಚ್ ತಮ್ಮದಾಗಿಸಿಕೊಂಡಿದ್ದಾರೆ.
ರಾಡ್ ಲೆವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಫೇವರಿಟ್ ಆಗಿ ಕಣಕ್ಕಿಳಿದಿದ್ದ ಡೊಮಿನಿಕ್ ಥೀಮ್, ಮೊದಲ ಮೂರು ಸೆಟ್‌ಗಳ ಬಳಿಕ ಈ ನಿರೀಕ್ಷೆಗಳನ್ನು ಇನ್ನಷ್ಟು ಬಲಗೊಳಿಸಿದ್ದರು.
ಬಿಗ್-3 (ರೋಜರ್ ಫೆಡರರ್, ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್) ಮೇಲಾಟಕ್ಕೊಂದು ಅಂತ್ಯ ಹಾಡಬಲ್ಲ ಸಮರ್ಥರಲ್ಲಿ ಒಬ್ಬರೆಂದು ಹೇಳಲಾದ ಆಸ್ಟ್ರಿಯಾದ 26ರ ಹರೆಯದ ಥೀಮ್, 4-6, 6-4 & 6-2 ರಲ್ಲಿ ಮೊದಲ ಮೂರು ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರು.
ಆದರೆ, ಇದೇ ಸಂದರ್ಭಕ್ಕೆಂದೇ ತಮ್ಮ ಅತ್ಯುತ್ತಮ ಆಟವನ್ನು ಕಾಯ್ದುಕೊಂಡಂತೆ ಕಂಡ ಜೋಕೋವಿಚ್ ತಾವೇಕೆ 16 ಗ್ರಾನ್ ಸ್ಲಾಮ್‌ಗಳ ಒಡೆಯ ಎಂದು ತೋರುವ ಆಟವನ್ನಾಡಿ, ಮಿಕ್ಕ ಎರಡು ಸೆಟ್‌ಗಳಲ್ಲಿ ಅದ್ಭುತ come back ಮಾಡಿ, 6-3, 6-4ರಲ್ಲಿ ಸತತ ಸೆಟ್‌ಗಳನ್ನು ಗೆಲ್ಲುವ ಮೂಲಕ, 5 ಸೆಟ್‌ಗಳ ಪಂದ್ಯವನ್ನು ರೋಚಕವಾಗಿ ತಮ್ಮದಾಗಿಸಿಕೊಂಡಿದ್ದಾರೆ.
ಒಂದು ನಿಮಿಷ ಕೊರೆ, ನಾಲ್ಕು ಗಂಟೆಗಳ ಕಾಲ ನಡೆದ ಈ ಕಾದಾಟದಲ್ಲಿ ಇಬ್ಬರೂ ಆಟಗಾರರ stamina, mental strength ಹಾಗೂ determinationಗಳನ್ನು ಪರೀಕ್ಷಿಸಿದ ಈ ಪಂದ್ಯದಲ್ಲಿ ಅಂತಿಮ ನಗೆ ಚೆಲ್ಲಿದ ಜೋಕೋವಿಚ್ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ತಮ್ಮ ಅಜೇಯ ಓಟ ಮುಂದುವರೆಸಿದ್ದಲ್ಲದೇ, ಸ್ಪೇನ್‌ನ ರಾಫೆಲ್ ನಡಾಲ್‌ರನ್ನು ಹಿಂದಿಕ್ಕಿ ಪುರುಷರ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ.
ITF ಇತಿಹಾಸದಲ್ಲೇ ಅತ್ಯಂತ ಹೆಚ್ಚು, 20 ಗ್ರಾನ್ ಸ್ಲಾಂಗಳನ್ನು ಗೆದ್ದಿರುವ ಸ್ವಿಸ್ ಸೆನ್ಸೇಷನ್ ರೋಜರ್ ಫೆಡರರ್ ದಾಖಲೆಯ ಸರಿಗಟ್ಟಲು ಜೋಕೋವಿಚ್‌ಗೆ ಇನ್ನು ಮೂರು ಪ್ರಶಸ್ತಿಗಳು ಬೇಕಿವೆ. ಕಳೆದ 13 ಗ್ರಾನ್ ಸ್ಲಾಂಗಳ, ಪುರುಷ ಸಿಂಗಲ್ಸ್ ಪ್ರಶಸ್ತಿಗಳನ್ನು, ಜೋಕೋವಿಚ್, ಫೆಡರರ್ ಹಾಗೂ ನಡಾಲ್‌ರೇ ತಮ್ಮಲ್ಲೇ ಹಂಚಿಕೊಂಡಿದ್ದಾರೆ.
ಟೂರ್ನಿಯ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಪಂದ್ಯಗಳಲ್ಲಿ ರಾಫೇಲ್ ನಡಾಲ್ ಹಾಗೂ ಅಲೆಕ್ಸಾಂಡರ್ ಝ್ವರೆವ್‌ರನ್ನು ಮಣಿಸಿ ಬಂದಿದ್ದ ಡೊಮಿನಿಕ್ ಥೀಮ್ ಪ್ರಶಸ್ತಿ ಸುತ್ತಿನ ರೋಚಕ ಘಟ್ಟದಲ್ಲಿ, ತಮಗಿಂತ ಸುಪೀರಿಯರ್ ರ್ಯಾಂಕ್‌ನ ಆಟಗಾರನ ಮುಂದೆ battle of temperamentನಲ್ಲಿ ಕೊಂಚ ಹಿನ್ನಡೆ ಕಂಡರೂ ಸಹ ಸಾಕಷ್ಟು ಭರವಸೆ ಮೂಡಿಸಿದ್ದಾರೆ.
ಡೊಮಿನಿಕ್ ಥೀಮ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಝ್ವರೆವ್ ಈ ಬಿಗ್-3 ಪ್ರಾಬಲ್ಯದ ಕೋಟೆಯನ್ನು ಭೇದಿಸುವ ಲಕ್ಷಣಗಳನ್ನು ತೋರುತ್ತಿದ್ದು, 2020ರ ಮೊದಲಾರ್ಧದಲ್ಲಿ ಟೆನಿಸ್ ಲೋಕಕ್ಕೆ ಮತ್ತೆರಡು ಸೂಪರ್ ಸ್ಟಾರ್‌ಗಳ ಪರಿಚಯವಾಗಬಹುದು