ತಮಿಳುನಾಡಿನಲ್ಲಿ NEET ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ಐದು ದಿನಗಳಲ್ಲಿ ಮೂರನೇ ಸಾವು ಸಂಭವಿಸಿದೆ, 17 ವರ್ಷದ ವಿದ್ಯಾರ್ಥಿನಿ ಸೌಂದರ್ಯ ಟಿ, ಸೆ 12ರಂದು ನಡೆದ NEET ಪರೀಕ್ಷೆ ಮುಗಿದು ಮೂರು ದಿನಗಳ ನಂತರ ಅಂದರೆ ಸೆಪ್ಟೆಂಬರ್ 15ರ ಬುಧವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯ ವರದಿಗಳ ಪ್ರಕಾರ, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟಪಾಡಿ ಸಮೀಪದ ತಲೆಯರಂಪಟ್ಟು ಗ್ರಾಮದ ವಿದ್ಯಾರ್ಥಿನಿ ಸೌಂದರ್ಯ, ಸೆಪ್ಟೆಂಬರ್ 12, ಭಾನುವಾರ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಅನುತ್ತೀರ್ಣವಾಗುವ ಭಯದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಎನ್ನಲಾಗಿದೆ.
ತೊಟ್ಟಪಾಳ್ಯಂ ಶಾಲೆಯ ವಿದ್ಯಾರ್ಥಿನಿ ಸೌಂದರ್ಯ ತನ್ನ 12ನೇ ತರಗತಿಯಲ್ಲಿ ಒಟ್ಟು 600 ಕ್ಕೆ 510 ಅಂಕಗಳನ್ನು ಪಡೆದುಕೊಂಡಿದ್ದಾಳೆ ಮತ್ತು ಕಿಂಗ್ಸ್ಟನ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ NEET ಪರೀಕ್ಷೆ ಬರೆದಿದ್ದಳು. ಸ್ಥಳೀಯ ವರದಿಯ ಪ್ರಕಾರ, ಆಕೆ NEET ಪರೀಕ್ಷೆಯಲ್ಲಿ ಫೇಲ್ ಅಗುವ ಭಯವಿದೆ ಎಂದು ತನ್ನ ಹೆತ್ತವರಿಗೆ ಹೇಳಿಕೊಂಡಿದ್ದಾಳೆ ಮತ್ತು ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ ಎಂದು ಅವಳು ತನ್ನ ಕುಟುಂಬ ಮತ್ತು ಸ್ನೇಹಿತರಲ್ಲಿ ಪರೀಕ್ಷೆ ಬರೆದ ನಂತರ ಹೇಳಿಕೊಂಡಿದ್ದಳು ಎಂದು ಅಕೆಯ ತಂದೆ ತಾಯಿ ಹೇಳಿದ್ದಾರೆ.
ಪರೀಕ್ಷೆಯ ನಂತರ ಮನೆಗೆ ಮರಳಿದ ಸೌಂದರ್ಯ ಬೆಸರದಿಂದ ತನ್ನ ತಾಯಿಗೆ ಪೇಪರ್ ಕಠಿಣವಾಗಿತ್ತು ಮತ್ತು ತಾನು ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಪರೀಕ್ಷೆಯ ದಿನ ಅವಳು ಬಹಳ ವಿಚಲಿತಳಾಗಿದ್ದಳು. ಸೆಪ್ಟೆಂಬರ್ 15ರ ಬೆಳಿಗ್ಗೆ, ಆಕೆಯ ಪೋಷಕರು ಎಂದಿನಂತೆ ಕೆಲಸಕ್ಕೆ ಹೊರಟಿದ್ದಾರೆ ಮತ್ತೆ ಕೆಲಸದಿಂದ ಮರಳಿ ಬಂದು ಅವರು ತನ್ನ ಮಗಳ ಕೋಣೆಯಲ್ಲಿ ಮೃತದೇಹವನ್ನು ಕಂಡ ತಾಯಿ ಸ್ಥಳಿಯರ ಸಹಾಯಾದಿಂದ ಆಕೆಯ ದೇಹವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಪ್ರಸ್ತುತವಾಗಿ ಕಟಪಾಡಿ DSP ಮತ್ತು ಕಂದಾಯ ನಿರೀಕ್ಷಕರು ತನಿಖೆ ನಡೆಸುತ್ತಿದ್ದಾರೆ. ಸೌಂದರ್ಯ ಅವರ ಪೋಷಕರು ದಿನಗೂಲಿ ಮಾಡುತ್ತಾ ಜೀವನ ನಡೆಸುತ್ತಿದರು. ಇಂದು ಮಗಳ ಸಾವಿನಿಂದ ಬಹಳ ನೊಂದಿದ್ದಾರೆ.
ಶನಿವಾರ, NEET ಪರೀಕ್ಷೆಯ ಒಂದು ದಿನ ಮೊದಲು, 20 ವರ್ಷದ ಸೇಲಂ ಯುವಕ ಧನುಷ್ ಮೂರನೇ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ, ಅರಿಯಲೂರು ಜಿಲ್ಲೆಯ ಸತ್ತಂಪಾಡಿ ಗ್ರಾಮದ 17 ವರ್ಷದ ಕನಿಮೊಳಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. NEET ಭಯದಲ್ಲಿ ಕಳೆದ ಐದು ದಿನಗಳಲ್ಲಿ ಒಟ್ಟು ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.