ಬ್ಯಾಂಡ್ ಧರಿಸಿದ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು ಓರ್ವ ವಿದ್ಯಾರ್ಥಿಯ ಸಾವಿನಲ್ಲಿ ಅಂತ್ಯ ಕಂಡ ಘಟನೆ ತಮಿಳುನಾಡಿಬ ತಿರುನಲ್ವೇಲಿ ಅಂಬಸಮುದ್ರಂನಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದು ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
17 ವರ್ಷದ ಬಾಲಕ ಮೂವರು ವಿದ್ಯಾರ್ಥಿಗಳು ಕೈಗೆ ಬ್ಯಾಂಡ್ ಧರಿಸಿದ್ದನ್ನು ಪ್ರಶ್ನಿಸಿದ್ದಾನೆ ಇದು ಒಂದು ನಿರ್ದಿಷ್ಟ ಜಾತಿಯ ಗುರುತಾಗಿರುವುದರಿಂದ ತೆಗೆಯುವಂತೆ ಹೇಳಿದ್ದಾನೆ ಇದಕ್ಕೊಪ್ಪದ ಮೂವರು ವಿದ್ಯಾರ್ಥಿಗಳು ಜಗಳಕ್ಕಿಳಿದಿದ್ದಾರೆ.
ನಂತರ ಮೂವರು ವಿದ್ಯಾರ್ಥಿಗಳು ಸೇರಿ ಓರ್ವ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಕಾರಣ ವಿದ್ಯಾರ್ಥಿ ತೀವ್ರ ಅಸ್ವಸ್ಥನಾಗಿದ್ದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನಪ್ಪಿದ ವಿದ್ಯಾರ್ಥಿಯು ಹಿಂದುಳಿದ ಜನಾಂಗಕ್ಕೆ ಸೇರಿದವನಾಗಿದ್ದು ಇನ್ನು ಮೂವರು ವಿದ್ಯಾರ್ಥಿಗಳು ಅನ್ಯ ಧರ್ಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಇಟ್ಟಿಗೆಯಿಂದ ಹಲ್ಲೆ ನಡೆಸಿದ ಕಾರಣ ವಿದ್ಯಾರ್ಥಿಯ ತಲೆ ಹಾಗು ಎಡ ಕಿವಿ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣ ಬದುಕುಳಿಯಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತ್ತು ಮತ್ತು ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಹಾಗು ಗ್ರಾಮಸ್ಥರು ರಸ್ತೆ ತಡೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.