ಜಾತಿ ಜನಗಣತಿ ಸ್ವೀಕಾರ ಮಾಡಲಾಗಿದೆ. ಆದರೆ ಜಾತಿ ಗಣತಿಯನ್ನು ಕ್ಯಾಬಿನೆಟ್ ಮುಂದಿಟ್ಟು, ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಕ್ಕೆ ಕಾಂಗ್ರೆಸ್‌ನಲ್ಲೇ ಅಪಸ್ವರ ಕೇಳಿ ಬಂದಿದೆ. ಲಿಂಗಾಯತ ಸಮುದಾಯದ ಶಾಮನೂರು ವಿರೋಧದ ಬಳಿಕ ಒಕ್ಕಲಿಗ ಸಮುದಾಯ ಡಿಕೆ ಸುರೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದರು. ಈ ಬಗ್ಗೆ ಪರಮೇಶ್ವರ್ ಮಾತನಾಡಿ, ಎಲ್ಲರಿಗೂ ಕೌಂಟರ್ ಕೊಡುವ ಕೆಲಸ ಮಾಡಿದ್ದಾರೆ.
ಸರ್ಕಾರದ ಪಾಲಿಕೆ ಇದೊಂದು ವಿಚಿತ್ರ ಸಂದರ್ಭ, ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದ್ರೆ ಮಾಡಿಲ್ಲ ಅಂತಾರೆ. ಜಾತಿ ಗಣತಿ ಸ್ವೀಕಾರ ಮಾಡಿದ್ರೆ ಈಗ ಯಾಕೆ ಮಾಡುತ್ತೀರಿ ಅಂಥ ವ್ಯಾಖ್ಯಾನ ಮಾಡ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ..? ಬೇಡವಾ..? ಅಂತಾ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಎಂದಿದ್ದಾರೆ.
ಇನ್ನು ಕೇಂದ್ರ ಕೂಡ ಜಾತಿ ಜನಗಣತಿ ಆಗಲಿದೆ. ಒಂದು ವೇಳೆ ವರದಿಯಲ್ಲಿ ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆ ಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ ಉಪಯೋಗಿಸುತ್ತಾರೆ ಎಂದಿದ್ದಾರೆ.
ಒಂದು ಸಾರಿ ಕ್ಯಾಬಿನೆಟ್‌ಗೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ, ರಾಜ್ಯ ಸರ್ಕಾರ 160 ಕೋಟಿ ಖರ್ಚು ಮಾಡಿದೆ ಅದಕ್ಕೂ ಲೆಕ್ಕ ಕೊಡಬೇಕು. ಮುಂದಿನ ದಿನಗಳಲ್ಲಿ ಸಿಎಜಿ ಕೂಡ ಆಕ್ಷೇಪ ಮಾಡಬಹುದು. ಹೀಗಾಗಿ ರಾಜ್ಯದ ಜಾತಿ ಜನಗಣತಿ ಕ್ಯಾಬಿನೆಟ್‌ಗೆ ತರುತ್ತೇವೆ ಎಂದಿದ್ದಾರೆ.