ಕಳೆದ 5 ವರ್ಷಗಳ ಅವಧಿಯಲ್ಲಿ 13 ಸಾವಿರಕ್ಕೂ ಹೆಚ್ಚು ಎಸ್ ಸಿ ಎಸ್ಟಿ ಮತ್ತು ಒಬಿಸಿ ಸಮುದಾಯದ ಐಐಟಿ, ಐಐಎಂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಟಿಎಂಸಿ ಸಂಸದ ರಿತೇಶ್ ಪಾಂಡೆ ಲೋಕಸಭಾ ಕಲಾಪದಲ್ಲಿ ಚರ್ಚೆಗೆ ತಂದಿದ್ದು, ಕೇಂದ್ರದ ಈ ಸರ್ವಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡ್ತಿದ್ದ ಈ ಸಮುದಾಯಗಳ ವಿದ್ಯಾರ್ಥಿಗಳ ನಡೆ ಅಚ್ಚರಿ ಮತ್ತು ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತು. ಈ ಪ್ರಕಾರ ಐಐಟಿಗಳಲ್ಲಿನ 2,066 OBC, 1,068 SC, and 408 ST ವಿದ್ಯಾರ್ಥಿಗಳು ಮತ್ತು ಐಐಎಂಗಳಲ್ಲಿ 163 OBC, 188 SC, and 91 ST ವಿದ್ಯಾರ್ಥಿಗಳು ಅರ್ಧಕ್ಕೆ ತಮ್ಮ ವ್ಯಾಸಂಗವನ್ನ ಮೊಟಕುಗೊಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಖಾತೆಯ ರಾಜ್ಯಸಚಿವ ಸುಭಾಷ್ ಸರ್ಕಾರ್ , ಒಟ್ಟು 4,596 OBC, 2,424 SC ಮತ್ತು 2,622 ST ವಿದ್ಯಾರ್ಥಿಗಳು ಕಾರಣಾಂತರಗಳಿಂದ ತಾವೇ ಆಯ್ದುಕೊಂಡ ಕೋರ್ಸ್ ಗಳಿಂದ ಬೇರೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರು ಬೇರೆ ಸಂಸ್ಥೆಗಳಲ್ಲಿ ಮುಂದುವರಿದ್ರೆ ಇನ್ನೂ ಹಲವರು ಇದೇ ಸಂಸ್ಥೆಗಳಲ್ಲಿ ವ್ಯಾಸಂಗ ಮುಂದುವರಿಸಿದ್ದಾರೆ ಅಂತ ಮಾಹಿತಿ ನೀಡಿದ್ರು. ಇನ್ನು ಮೀಸಲಾತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿಯೇ ಕಡಿಮೆ ಪ್ರವೇಶ ಶುಲ್ಕ, ಸ್ಕಾಲರ್ ಶಿಪ್ ಸೇರಿದಂತೆ ಸಾಕಷ್ಟು ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂದ್ರು.