ಈಗ ಏನೇ ಇದ್ರು ಮೊಬೈಲ್ (mobile) ಜಮಾನಾ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲಾರೂ ಮೊಬೈಲ್ ಬಳಸೋದು ಸರ್ವೇ ಸಾಮಾನ್ಯವಾಗಿ ಹೋಗಿದೆ, ಇವತ್ತು ಸಾಕಷ್ಟು ಜನರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಒಂದು ಗಳಿಗೆ ತಮ್ಮ ಕೈಯಲ್ಲಿ ಮೊಬೈಲ್ ಇಲ್ಲಾ ಅಂದ್ರೆ ಏನೋ ಕೆಳೆದುಕೊಂಡವರಂತೆ ವರ್ತಿಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಇತ್ತೀಚಿನ ಯುವ ಪೀಳಿಗೆಯಂತೂ ಮೊಬೈಲ್ ದಾಸ್ಯತನಕ್ಕೆ ಒಳಗಾಗಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ
ಇವತ್ತು ಮೊಬೈಲ್ ಬಳಸುವ ಶೇಕಡ 62ರಷ್ಟು ಮಂದಿ ಯುವಜನತೆ ಆನ್ಲೈನ್ ಗೇಮಿಂಗ್ (online gaming) ಗಳನ್ನು ಆಡುವುದರಲ್ಲಿ ನಿರತರಾಗಿದ್ದಾರೆ ಅಂತ ಕೆಲವು ವರದಿಗಳು ಹೇಳುತ್ತಿವೆ. ಈ ಆನ್ಲೈನ್ ಗೇಮ್‌ಗಳಿಂದಾಗಿ ಸಾಕಷ್ಟು ಜನ ಯುವಜನತೆ (youths) ತಮ್ಮ ಓದಿನ (studies) ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯು ಕೂಡ ಹೊರಬಿದ್ದಿದೆ. ಇನ್ನು ಆನ್ಲೈನ್ ಗೇಮಿಂಗ್ ಯುವ ಜನತೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಸಲಹೆಯನ್ನ ಸಾಕಷ್ಟು ಮಂದಿ ಶಿಕ್ಷಣ ತಜ್ಞರು ನೀಡುತ್ತಾ ಬಂದಿದ್ದಾರೆ ಆದರೂ ಕೂಡ ಇವತ್ತು ಸಾಕಷ್ಟು ಜನ ಪೋಷಕರ ನಿರ್ಲಕ್ಷದಿಂದಾಗಿ ಯುವ ಜನತೆ ಹಾದಿತಪ್ಪುವಂತಾಗಿದೆ.
ಇನ್ನು ಸಾಕಷ್ಟು ಮಂದಿ ಯುವಜನತೆ ಆನ್ಲೈನ್ ಗೇಮ್ ಗಳ ಮುಖಾಂತರವಾಗಿ ಹಣ ಕಳೆದುಕೊಳ್ಳುತ್ತಿರುವ ಘಟನೆಗಳು ಕೂಡ ನಡೆಯುತ್ತಿದೆ ಇದು ಕೇವಲ ಯುವಕ ಯುವತಿರು ಮಾತ್ರವಲ್ಲ ಇವತ್ತು ಸಾಕಷ್ಟು ಆನ್ಲೈನ್ ಜೂಜುಗಳಿಂದಲೂ ಹಲವು ಕುಟುಂಬಗಳು ಬೀದಿಗೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಕೆಲವೊಮ್ಮೆ ತಮ್ಮ ಅರಿವಿಗೆ ಬಾರದೆ ಮಕ್ಕಳು ಕೂಡ ಆನ್ಲೈನ್ ಗೇಮ್ ಗಳಿಂದ ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ವಿದೇಶಗಳಲ್ಲಿ ದಾಖಲಾಗುತ್ತಿವೆ.
ಹೌದು ಇಂತಹದೊಂದು ಘಟನೆ ದಕ್ಷಿಣ ಚೀನಾದಲ್ಲಿ(south China) ನಡೆದಿದೆ, ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್ ಬಲೆಗೆ ಬಿದ್ದು, 52,19,809 ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಹುಡುಗಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತಿದ್ದಳು, ಈ ಗೇಮ್ ಬೆಟ್ಟಿಂಗ್ ರೀತಿಯಾದ್ದಾದ ಗೇಮ್ ಎಂಬ ಮಾಹಿತಿ ಇದೆ. ಹೀಗೆ ಈ ಬಾಲಕಿ ಗೇಮ್ ಆಡುತ್ತಾ ಇಡೀ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ್ದಾಳೆ. ಈ ಬಾಲಕಿಯ ತಾಯಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕೇವಲ 5 ರೂ. ಇರುವುದು ಗೊತ್ತಾಗಿದೆ. ಹುಡುಗಿ ತನ್ನ ತಾಯಿ ತನ್ನ ಡೆಬಿಟ್ ಕಾರ್ಡ್ ಅನ್ನು ಆನ್‌ಲೈನ್ ಆಟಗಳನ್ನು ಆಡಲು ಬಳಸುತ್ತಿದ್ದಳು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಇಡೀ ಕುಟುಂಬವೇ ಬೆಚ್ಚಿ ಬಿದ್ದಿದೆ.
ಹಣ ಏನಾಯಿತು ಎಂದು ತಂದೆ ಹುಡುಗಿಯನ್ನು ಕೇಳಿದಾಗ, ಹಣವನ್ನು ಆನ್‌ಲೈನ್ ಆಟಗಳಿಗೆ ಮತ್ತು ಆಟದಲ್ಲಿ ಏನನ್ನೋ ಖರೀದಿಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾಳೆ. ಅಲ್ಲದೇ, ತನ್ನ ಸ್ನೇಹಿತರಿಗಾಗಿ 11,61,590 ರೂ ಮೌಲ್ಯದ ಗೇಮ್‌ಗಳನ್ನು ಖರೀದಿಸಿರುವುದಾಗಿ ಬಾಲಕಿ ಹೇಳಿದ್ದಾಳೆ.
ಒಟ್ಟಾರೆಯಾಗಿ ಈ ಬಾಲಕಿ ಸೃಷ್ಟಿಸಿರುವ ಅವಾಂತರ ಚೀನಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದೀಗ ಚೀನಾದ ಸ್ಥಳೀಯ ಪ್ರಾಂತಿಯ ಸರ್ಕಾರ ಅನಿಲ್ ಗೇಮುಗಳ ಮೇಲೆ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಎಂದು ಪೋಷಕರಿಗೆ ಹರಿವನ್ನ ಮೂಡಿಸುವ ಕೆಲಸವನ್ನು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಕೇವಲ ಚೀನಾ ಪೋಷಕರಿಗೆ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಪೋಷಕರು ಕೂಡ ಮಕ್ಕಳ ಫೋನ್ ಗಳ ಬಗ್ಗೆ ಜಾಗೃತಿ ವಹಿಸುವುದು ತುಂಬಾ ಮುಖ್ಯವಾಗಿದೆ