ಉತ್ತರ ದೆಹಲಿಯ ಗುರ್ಗಾಂವ್ ನರೇಲಾದ ಪ್ರದೇಶದಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವಾಗಿದ್ದು, ಅರೋಪಿಯ ಮೇಲೆ ಪ್ರಕರಣ ದಾಖಾಲಾಗಿದೆ. ಆಕೆ ತಂದೆ ತಾಯಿ ಕೆಲಸ ಮಾಡುವ ಜಮೀನುದಾರನ ಸಂಬಂಧಿಯೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಶವವನ್ನು ಸುಡಲು ಕುಟುಂಬದವರನ್ನು ಒತ್ತಾಯಿಸಲು ಆರೋಪಿಗಳು ಪ್ರಯತ್ನಿಸಿದಾಗ. ಪಿ. ಸಿ.ಆರ್ ಗೆ ಕರೆ ಮಾಡಿದ ಬಾಲಕಿಯ ತಂದೆಯ ದೂರಿನ ಮೇರೆಗೆ ಜಮೀನುದಾರನ ಹೆಂಡತಿಯ ಸಹೋದರಅರೋಪಿ ಪ್ರವೀಣ್ ವರ್ಮಾನನ್ನು ಬಂಧಿಸಲಾಗಿದೆ ಎಂದು ಪೋಲಿಸರು ಹೇಳಿದ್ದಾರೆ.
ಪೊಲೀಸರಿಗೆ ಎಫ್.ಐ.ಆರ್ ಸಲ್ಲಿಸಿದ ನಂತರ, ಬಾಲಕಿಯ ತಂದೆ ಹೇಳಿಕ್ಕೆ ನೀಡಿದ್ದು, “ಜುಲೈ 17 ರಂದು, ತನ್ನ ಜಮೀನುದಾರನ ಹೆಂಡತಿಯ ನಾದಿನಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅವರು ನನ್ನ ಮಗಳನ್ನು ಸಹ ಜೊತೆಗೆ ಕರೆದುಕೊಂಡು ತನ್ನ ಸಹೋದರನ ಮನೆಗೆ ಹೋಗಿದ್ದರು. ನನ್ನ ಮಗಳು ಅಲ್ಲಿಯೇ ಇರುತ್ತಾಳೆ ಮತ್ತು ತನ್ನ ಸಹೋದರನ ಮಗಳೊಂದಿಗೆ ಆಟವಾಡಡುತ್ತಾ ಇರುತ್ತಾಳೆ ಎಂದು ಅವರು ಹೇಳಿದ್ದರು. ಜಮೀನುದಾರನ ಹೆಂಡತಿಯ ಸಹೋದರನ ಮನೆ ಗುರ್ಗಾಂವ್ನಲ್ಲಿ ಇದೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಆದರೆ, ಆಗಸ್ಟ್ 23ರ ಮಧ್ಯಾಹ್ನ 3 ಗಂಟೆ ಸುಮಾರಿಗೆ, ತನ್ನ ಮಗಳು ಮೃತಪಟ್ಟಿದ್ದಾಳೆ ಎಂದು ತನ್ನ ಮಾಲೀಕನಿಗೆ ಬಾಲಕಿಯ ತಂದೆ ತಿಳಿಸಿದ್ದಾರೆ ಎಂದು ಎಫ್.ಐ.ಆರ್ ನಲ್ಲಿ ದಾಖಾಲಾಗಿದೆ. ಸಂಜೆ 7 ರ ಸುಮಾರಿಗೆ, ಅವರು ಶವವನ್ನು ಖಾಸಗಿ ಆಂಬ್ಯುಲೆನ್ಸ್ನಲ್ಲಿ ಬಾಲಕಿಯ ನರೇಲಾ ನಿವಾಸಕ್ಕೆ ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಬಂದಿದ್ದರು.
ತಂದೆಗೆ ಅನುಮಾನ ಬಂದಾಗ, ಆತ ಪಿ.ಸಿ.ಆರ್ ಕರೆ ಮಾಡಿದನು ಮತ್ತು ನರೇಲಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ಜಹಾಂಗೀರ್ಪುರಿಯ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಜಮೀನುದಾರನ ಸಹೋದರ ಪ್ರವೀಣ್ ವರ್ಮಾ ಇತರರೊಂದಿಗೆ ಸೇರಿ ತನ್ನ ಮಗಳನ್ನು ಕೊಂದಿದ್ದಾನೆ ಎಂದು ತಂದೆ ಎಫ್.ಐ.ಆರ್ ನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣವು ಭಾರತೀಯ ದಂಡ ಸಂಹಿತೆ ಮತ್ತು SC/ST ಕಾಯಿದೆಯ ಸೆಕ್ಷನ್ 302 (ಕೊಲೆ) ಮತ್ತು 120B (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುರ್ಗಾಂವ್ ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು ಬಂದ ನಂತರ. ಲೈಂಗಿಕ ದೌರ್ಜನ್ಯವನ್ನು ಖಚಿತ ಪಡಿಸಿಕೊಂಡ ನಂತರ. ಎಫ್.ಐಆರ್ ನಲ್ಲಿ ಹೆಚ್ಚಿನ ಭಾಗಗಳನ್ನು ಸೇರಿಸಲಾಗುತ್ತದೆ ಮತ್ತು ವರ್ಮಾ ಅವನ್ನು ಬಂಧಿಸಲಾತ್ತದೆ ಎಂದು ಪೋಲಿಸರು ಹೇಳಿದಾರೆ.
ಈ ತಿಂಗಳ ಆರಂಭದಲ್ಲಿ, ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ ಒಂಬತ್ತು ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.
ನೈರುತ್ಯ ದೆಹಲಿಯ ಹಳೆಯ ನಂಗಲ್ ಗ್ರಾಮದಲ್ಲಿ ಶವಸಂಸ್ಕಾರದ ಪಾದ್ರಿಯಿಂದ ತನ್ನ ಮೇಲೆ ಅತ್ಯಾಚಾರ ಮತ್ತು ಬಲವಂತವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದರೂ ಸಹ ಆ ಹುಡುಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ ಎಂದು ಪೋಲಿಸರು ಹೇಳಿದ್ದಾರೆ.