ಕಲುಷಿತ ನೀರು (Polluted water) ಸೇವಿಸಿ ಹಲವರು ಅಸ್ವಸ್ಥರಾಗಿರುವ ಘಟನೆ ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಕಳೆದ ಒಂದು ವಾರದಿಂದ ಸುಮಾರು 120 ಮಂದಿಯಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.
ಉಪ್ಪುಂದದ ಕಾಸನಾಡಿ ಗ್ರಾಮದ ಬಾವಿಯಿಂದ ನೀರು ಸರಬರಾಜು ಆಗ್ತಿದೆ. ಇದರಿಂದ ಮಡಿಕಲ್, ಕರ್ಕಿಕಳಿ ಗ್ರಾಮಸ್ಥರು ಆನಾರೋಗ್ಯಕ್ಕೆ ತುತ್ತಾಗಿದ್ದು, ಸಧ್ಯ ಗ್ರಾಮಸ್ಥರೆಲ್ಲರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ನೀರಿನ ಸ್ಯಾಂಪಲ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ (Lab report) ಪ್ರಕಾರ ಕಲುಷಿತ ನೀರಿನಿಂದಲೇ ರೋಗ ಹಬ್ಬಿರುವುದಾಗಿ ಉಡುಪಿ ಡಿ.ಎಚ್.ಒ ಐಪಿ ಗಡಾದ್ ಮಾಹಿತಿ ನೀಡಿದ್ದಾರೆ.