ಕೇರಳ ಮಲಪ್ಪುರಂ ನಗರ ಸ್ವಚ್ಛಗೊಳಿಸುವ 11 ಪೌರಕಾಮಿಕ ಮಹಿಳೆಯರಿಗೆ ಅದೃಷ್ಟ ಒಲಿದು ಬಂದಿದೆ. 11 ಮಂದಿ ಮಹಿಳೆಯರ ಪೌರಕಾರ್ಮಿಕ ಗುಂಪಿಗೆ 110 ಕೋಟಿ ರೂ. ಲಾಟರಿ ಹಣ ಬಂದಿದೆ.
ಕೆಲವು ವಾರಗಳ ಹಿಂದೆ 250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಖರೀದಿಸಲು ಹಣ ಸಂಗ್ರಹಿಸಲು ನಿರ್ಧರಿಸಿದಾಗ ಕೆಲವರ ಪರ್ಸ್‌ನಲ್ಲಿ 25 ರೂಪಾಯಿ ಕೂಡ ಇರಲಿಲ್ಲ. ಇವರಲ್ಲಿ ಒಬ್ಬರು ಈ ಅಲ್ಪ ಮೊತ್ತದ ಹಣವನ್ನು ಸಾಲ ಕೂಡ ಪಡೆದಿದ್ದರು. ಇದೀಗ ಅವರಿಗೆ ಅದೃಷ್ಟ ಒಲಿದಿದೆ.
ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್ ಬಂಪರ್ ಆಫರ್ ವಿಜೇತರನ್ನು ಘೋಷಣೆ ಮಾಡಿದೆ. ಪರಪ್ಪನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ’ಯ 11 ಮಹಿಳೆಯರು 10 ಕೋಟಿ ರೂ. ಮೊತ್ತದ ಬಹುಮಾನ ಜಯಿಸಿದ್ದಾರೆ.
ಹರಿತ ಕರ್ಮ ಸೇನೆಯ 11 ಮಹಿಳೆಯರು ತಲಾ 125 ಷೇರು ಹಾಕಿ ವಾರದ ಹಿಂದೆ 7250 ರೂ. ಮೊತ್ತದ ಲಾಟರಿ ಟಿಕೇಟ್ ಖರೀದಿಸಿದ್ದರು. ಇದೀಗ ಅವರು ಕೋಟ್ಯಧಿಪತಿಗಳಾಗಿದ್ದಾರೆ.
“ನಾವು ಮೊದಲು ಹಣವನ್ನು ಸಂಗ್ರಹಿಸಿ ಲಾಟರಿ ಟಿಕೇಟ್ ಖರೀದಿಸಿದ್ದೆವು. ಈಗ ಬಹುಮಾನ ಗೆದ್ದಿರುವುದು ಸಂತಸ ಹೆಚ್ಚಿಸಿದೆ” ಎಂದು ಲಾಟರಿ ಹಣ ವಿಜೇತೆ ರಾಧಾ ಸಂತಸ ವ್ಯಕ್ತಪಡಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ನಯಾ ಪೈಸೆ ಬಿಡುಗಡೆ ಮಾಡಿಲ್ಲ
“ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಅರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ” ಎಂದು ಮತ್ತೊಬ್ಬ ಮಹಿಳೆ ಹೇಳುತ್ತಾರೆ.
ಕೇರಳ ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, “ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ತುಂಬಾ ಶ್ರಮಜೀವಿಗಳು ಮತ್ತು ಅವರ ಕುಟುಂಬಗಳಿಗೆ ಅವರೇ ಆದಾಯದ ಮೂಲವಾಗಿದ್ದರು. ಅನೇಕರಿಗೆ ತೀರಿಸಲು ಸಾಲಗಳಿವೆ. ಮದುವೆಯಾಗಲು ಹೆಣ್ಣುಮಕ್ಕಳಿದ್ದಾರೆ. ಕುಟುಂಬಸ್ಥರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗಿದೆ. ಅವರು ತುಂಬಾ ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಈ ಲಾಟರಿ ಹಣ ಅವರಿಗೆ ತುಂಬಾ ಅನುಕೂಲವಾಗಲಿದೆ” ಎಂದು ಹೇಳಿದರು.