ಲೋಕಸಭೆ ಕಲಾಪದಲ್ಲಿ ಅಸಹಜವಾಗಿ ನಡೆದುಕೊಂಡ ಕಾರಣಕ್ಕೆ 19ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸೇರಿದಂತೆ 19 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಹಣದುಬ್ಬರ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಕುರಿತು ಪ್ರತಿಭಟನೆ ನಡೆಸಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ 19 ಸಂಸದರನ್ನು ಅಮಾನತು ಮಾಡಲಾಗಿದೆ.

ಸಂಸದರಾದ ಮುರಳೀಧರನ್, ಹಕ್, ಸೇನ್, ಅಬಿರ್ ಬಿಸ್ವಾಸ್, ಮೌಸಮ್ ನೂರ್, ಸುಶ್ಮಿತಾ ದೇವ್, ಶಾಂತ ಛೆಟ್ರಿ, ಮೊಹಮದ್ ಅಬ್ದುಲ್ಲಾ, ಎಎ ರಹೀಂ, ಕನ್ನಿಮೋಜಿ, ಎಲ್. ಯಾದವ್, ವಿ. ಶಿವದಾಸನ್ ಅವರನ್ನು ಅಮಾನತುಗೊಳಿಸಲಾಗಿದೆ.