ಪತಿಯನ್ನು ತೊರೆದು ಪತ್ನಿ ತವರು ಮನೆಗೆ ಹೋಗಿದ್ದಕ್ಕೆ, ವಾಪಸ್ಸು ಬರಲು ಒಲ್ಲೆ ಎಂದಿದ್ದಕ್ಕೆ ರೊಚ್ಚಿಗೆದ್ದ ಪತಿ ಮಾವನೊಂದಿಗೆ ಗಲಾಟೆ ಮಾಡಿ ತೋಟವನ್ನ ನಾಶಪಡಿಸಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ. ರಾತ್ರೋ ರಾತ್ರಿ ಮಾವನ ಅಡಿಕೆ ತೋಟಕ್ಕೆ ನುಗ್ಗಿದ ಬಸವರಾಜ್ (Basavaraj) 106 ಅಡಿಕೆ ಗಿಡಗಳನ್ನ (Areca nut) ಕಡಿದು ಹಾಕಿದ್ದಾನೆ.
ಹಾವೇರಿಯ ಹಾನಗಲ್ (hanagal) ತಾಲೂಕಿನ ಬಸಾಪುರ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹೀಗೆ ಹತ್ತು ವರ್ಷಗಳ ಹಿಂದೆ ಬಸವರಾಜ್ (Basavaraj) ಎಂಬಾತ ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರ (Devendrappa Phakeerappa ganigera) ಅವರ ಮಗಳನ್ನು ಮದುವೆಯಾಗಿದ್ದ.ಆದ್ರೆ ನಿತ್ಯ ಬಸವರಾಜ್ ಪತ್ನಿ ಜೊತೆ ಜಗಳವಾಡ್ತಿದ್ದ ಹಿನ್ನಲೆ ಪತ್ನಿ ಬೆಸತ್ತು ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದು.
ಇದ್ರಿಂದ ಸಿಟ್ಟಿಗೆದ್ದ ಬಸವರಾಜ್, ಸೆ.23ರಂದು ರಾತ್ರಿ ಮಾವ ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರವರ 106 ಅಡಿಕೆ ಗಿಡಗಳನ್ನ ಕಡಿದು ನಾಶಪಡಿಸಿದ್ದಾನೆ. ಸದ್ಯ ಈ ಸಂಬಂಧ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









