ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಜಾರಗೆ ತಂದಿದ್ದ ಸೇನೆಗೆ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ನೇಮಕಾತಿ ನೋಂದಣಿ ಪ್ರಾರಂಭವಾದ 6 ದಿನಗಳಲ್ಲಿ 1.83 ಲಕ್ಷ ಮಂದಿ ವಾಯುಸೇನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೂನ್ 24ರಂದು ಆರಂಭವಾದ ನೋಂದಣಿ ಪ್ರಕ್ರಿಯೆಯಲ್ಲಿ ಸೋಮವಾರದವರೆಗೆ 94,281 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಇಲ್ಲಿಯವರೆಗು ಒಟ್ಟು 1,83,634 ಭವಿಷ್ಯದ ಅಗ್ನಿವೀರರು ಅರಜಿ ಸಲ್ಲಿಸಿದ್ದಾರೆ ಜುಲೈ 5 2022ರಂದು ಅರ್ಜಿ ಅಲ್ಲಿಕೆಗೆ ಕೊನೆ ದಿನ ಎಂದು ಐಎಎಫ್ ಟ್ವೀಟ್ ಮಾಡಿದೆ.