ಉತ್ತರ ಕನ್ನಡ ಜಿಲ್ಲೆಯ (Uttara kannada) ಕಾರವಾರದ ಬಳಿ ನಿರ್ಜನ ಪ್ರದೆಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಒಂದು ಕೊಟಿ ರೂಪಾಯಿ (1 crore) ಪತ್ತೆಯಾಗಿದೆ. ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ (National highway) ಪಕ್ಕದ ನಿರ್ಜನ ಪ್ರದೇಶದಲ್ಲಿ ಈ ಕಾರು ಪತ್ತೆಯಾಗಿದೆ.
![](https://pratidhvani.com/wp-content/uploads/2025/01/9fd9d651-bbe0-4bbd-a579-9b56c552dd4e-1024x768.jpeg)
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರು ಒಂದು ಪಾರ್ಕ್ ಮಾಡಲಾಗಿತ್ತು.ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
![](https://pratidhvani.com/wp-content/uploads/2025/01/b79e26dc-706d-45c0-8410-201772662b5e-1024x459.jpeg)
ಈ ಸಂದರ್ಭದಲ್ಲಿ ಕಾರು ಡೊರ್ ಓಪನ್ ಮಾಡಿ ಪರಿಶೀಲನೆ ಮಾಡುವ ವೇಳೆ ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ.ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸ್ ಠಾಣೆಗೆ ಕಾರನ್ನ ತೆಗೆದುಕೊಂಡ ಬಂದ ಪೊಲೀಸರು ಗಾಡಿ ಸೀಜ್ ಮಾಡಿದ್ದಾರೆ.