ಸದ್ಯ ಇಂಥ ಕೆಲಸ (job) ಸಿಕ್ರೆ ಯಾರ್ ಬಿಡ್ತಾರೆ ಹೇಳಿ.ಮನೆ (home)ಮಠ ಎಲ್ಲಾ ಬಿಟ್ಟು ಗಂಟು-ಮೂಟೆ ಕಟ್ಕೊಂಡು ಇಗೋ ಬಂದೆ, ನನಗೂ ಒಂದು ಕೆಲಸ(job) ಕೊಡಿ ಅಂತ ಹೊರಟೇ ಬಿಡ್ತೀವಿ ಅನ್ಸತ್ತೆ ಅಲ್ವಾ ? ಹಗಲು ರಾತ್ರಿ (Day and night) ದುಡಿದ್ರೂ ವರ್ಷಕ್ಕೆ ೮ ರಿಂದ ೧೦ ಲಕ್ಷ (8-10 lakhs)ದುಡಿಯೋದಕ್ಕೆ ಹರಸಹಾಸ ಪಡಬೇಕು..ಆದ್ರೆ ಇಲ್ಲೊಂದು ದ್ವೀಪ ರಾಷ್ಟ್ರದಲ್ಲಿ (Island)ವೈದ್ಯರಿಗೆ ಸಿಗುವ ಸಂಬಳ(salary), ಸಿಬ್ಬಂದಿಗೆ ಸಿಗುವ ಸವಲತ್ತು ನೋಡಿದ್ರೆ ಓ ಮೈ ಗಾಡ್ (OMG) ಅನ್ಸತ್ತೆ.
![](https://pratidhvani.com/wp-content/uploads/2024/03/IMG_5845.jpeg)
ದಿನನಿತ್ಯ 9 ಗಂಟೆ (9 hours) ಕೆಸಲ ಮಾಡಬೇಕೆಂಬ ನಿಯಮ ಇಲ್ಲಿ ಇಲ್ಲ. ವಾರಕ್ಕೆ ಕೇವಲ 42 ಗಂಟೆ (42 hours) ಕೆಲಸ ಮಾಡಿದ್ರೆ ಸಾಕು, ಕೈತುಂಬಾ ಸಂಬಳ (salary) ಸಿಗುತ್ತೆ.. ಜೊತೆಗೆ, ಸ್ಟೇ ಫಂಡ್ (stay fund) ಮತ್ತಿತರ ಸೌಲಭ್ಯಗಳನ್ನೂ ನೀಡಲಾಗುತ್ತೆ. ಸರಿ, ಹಾಗಿದ್ರೆ ಈ ಉದ್ಯೋಗಿಗಳ ಸಂಬಳ ಎಷ್ಟು ಗೊತ್ತಾ ?! ವರ್ಷಕ್ಕೆ ಬರೋಬ್ಬರಿ 1.5 ಕೋಟಿ(1.5 crores)
![](https://pratidhvani.com/wp-content/uploads/2024/03/IMG_5847.jpeg)
ಸ್ಕಾಟ್ಲ್ಯಾಂಡ್ (Scotland) ನಲ್ಲಿ ಇಂಥ ಅಪರೂಪದ ಕೆಲಸ ಇರೋದು..ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು (tourists) ಇಲ್ಲಿಗೆ ಭೇಟಿ ಕೊಡ್ತಾರೆ. ಉಯಿಸ್ಟ್ ಮತ್ತು ಪೆನ್ನುಕುಲಾ ಎಂಬ ಎರಡು ದ್ವೀಪಗಳು ಇಲ್ಲಿವೆ. ಇಲ್ಲಿ ಕೆಲಸ ಮಾಡುವ ವೈದ್ಯರ (doctors) ಸಂಬಳ ವರ್ಷಕ್ಕೆ ಬರೋಬ್ಬರಿ ೧.೫ ಕೋಟಿ. ವಿಶ್ವದ ಇನ್ಯಾವುದೇ ಭಾಗದಲ್ಲೂ ವೈದ್ಯರಿಗೆ ಈ ವೇತನ ಸಿಗೋದಿಲ್ಲ. ವಾರಕ್ಕೆ ಕೇವಲ 42 ಗಂಟೆಗಳ ಕೆಲಸ. ವರ್ಷಕ್ಕೆ 1.5 ಕೋಟಿ ಸಂಬಳ ಖಾತ್ರಿ.
![](https://pratidhvani.com/wp-content/uploads/2024/03/IMG_5846.jpeg)
ಇಲ್ಲಿ ಕೆಲಸ ಮಾಡಲು ನಿಮಗೆ ಎರಡು ಕೆಲಸ ಗೊತ್ತಿರಬೇಕು . ಒಂದು ಗ್ರಾಮೀಣ ಭಾಗದ ಔಷಧಗಳ ಬಗ್ಗೆ ಅರಿವಿರಬೇಕು(medicine). ಜೊತೆಗೆ ಕಡಲ ತೀರಗಳಲ್ಲಿ ( costal areas) ಕೆಲಸ ಮಾಡಿದ ಅನುಭವ ಇರಬೇಕು.ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಕೆಲಸಕ್ಕೆ ಟ್ರೈ ಪಡಬಹುದು.
ಆದ್ರೂ ಇಂಥದ್ದೊಂದು ಕೆಲಸ (job) ಸಿಗಬೇಕು ಅಂದ್ರೆ ಪೂರ್ವ ಜನ್ಮದ ಪುಣ್ಯ ಮಾಡಿರಬೇಕು ಅನ್ನೋದಂತು ಸತ್ಯ ಬಿಡಿ. ನೀವು ವೈದ್ಯರಾಗಿದ್ದರೆ ಅಥವಾ ಆಗಬೇಕೆಂದಿದ್ದರೆ , ನೋಡಿ ಸ್ಕಾಟ್ಲಾಂಡ್ (scottland) ನೆಮ್ಮದಿಯ ಜೀವನ ಕಳೆಯಲು ಹೇಳಿ ಮಾಡಿಸಿದ ಜಾಗ.