ಭಾರಿ ಕುತೂಹಲ ಹುಟ್ಟುಹಾಕಿದ್ದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಚುನಾವಣೆಯಲ್ಲಿ ತೆಲಂಗಾನ ರಾಷ್ಟ್ರ ಸಮಿತಿ (TRS) ಪಕ್ಷವು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವು ಎರಡನೇ ಸ್ಥಾನದಲ್ಲಿದೆ.
ಈ ಚುನಾವಣೆಯನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಫಲವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
TRS ಪಕ್ಷವು ಒಟ್ಟು 55 ಕ್ಷೇತ್ರಗಳನ್ನು ಗೆದ್ದುಕೊಂಡರೆ, AIMIM 44 ಸ್ಥಾನಗಳನ್ನು ಪಡೆದುಕೊಂಡಿದೆ. ಮತ ಎಣಿಕೆ ಆರಂಭವಾದಾಗ ಸುಮಾರು 88 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಪಡೆದಿದ್ದ ಬಿಜೆಪಿ ಕೊನೆಗೆ 48 ಸ್ಥಾನಗಳನ್ನು ಗಳಿಸಿ ಎರಡನೆ ಸ್ಥಾನ ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಮ್ಐಎಮ್ ನಡುವೆ ತೀವ್ರವಾದ ಪೈಪೋಟಿಯನ್ನು ಸೃಷ್ಟಿಸಿತ್ತು.
ಎಂಟು ಗಂಟೆಗೆ ಸರಿಯಾಗಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಭದ್ರತೆಗಾಗಿ ಸುಮಾರು 8 ಸಾವಿರಕ್ಕೂ ಮಿಕ್ಕಿ ಪಡೆಯನ್ನು ನೇಮಿಸಲಾಗಿತ್ತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜಿನಾಮೆ:
ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾದ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿಯಾಗಿರುವ ಉತ್ತಮ್ ಕುಮಾರ್ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಸೋಲಿನ ಹೊಣೆ ಹೊತ್ತು ರಾಜಿನಾಮೆ ಸಲ್ಲಿಸಿದ್ದಾರೆಂದು ಕಾಂಗ್ರೆಸ್ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ನೈತಿಕ ಗೆಲುವು – ಬಿಜೆಪಿ:
ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯು ನೈತಿಕ ಗೆಲುವು ಎಂದು ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರು ಹೇಳಿ ದ್ದಾರೆ. TRS ಪಕ್ಷವನ್ನು ಬಿಟ್ಟರೆ ಯಾವುದಾದರೂ ಇತರ ಪಕ್ಷದ ಅಸ್ಥಿತ್ವ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಅವರು ಹೇಳಿದ್ದಾರೆ.
Also Read: ಹೈದರಾಬಾದ್‌ಗೂ ಕಾಲಿಟ್ಟ ಬಿಜೆಪಿಯ ʼಮರುನಾಮಕರಣʼ ತಂತ್ರ
ಕಾರ್ಯಕರ್ತರನ್ನು ಶ್ಲಾಘಿಸಿದ ಅಮಿತ್ ಶಾ:
ಹೈದಾರಾಬಾದಿನಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಮಿತ್ ಶಾ ಧನ್ಯವಾಗಳನ್ನು ಅರ್ಪಿಸಿದ್ದಾರೆ. ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿರುವ ಅಮಿತ್ ಶಾ, ತೆಲಂಗಾಣ ಜನತೆ ಪ್ರಧಾನಿ ಮೋದಿಯವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಆಭಾರಿಯಾಗೇದ್ದೇನೆ ಎಂದು ಹೇಳಿದ್ದಾರೆ.
ಇದರೊಂದಿಗೆ ಕಾರ್ಯಕರ್ತರ ಶ್ರಮವನ್ನೂ ಶ್ಲಾಘಿಸಿ, ಜೆಪಿ ನಡ್ಡಾ ಹಾಗೂ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನೂ ಅಭಿನಂದಿಸಿದ್ದಾರೆ.
ಬಿಜೆಪಿ ಗೆಲುವನ್ನು ಸಿಹಿ ಹಂಚಿ ಹೈದರಾಬಾದ್ನಲ್ಲಿ ಸಂಭ್ರಮಿಸಲಾಗಿದೆ.
20-25 ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ– TRS:
ಹೈದರಾಬಾದ್ ಜನತೆ TRS ಅನ್ನು ಆಯ್ಕೆ ಮಾಡಿದೆ. ನಾವು ಅಂದುಕೊಂಡಂತಹ ಫಲಿತಾಂಶ ಬಂದಿಲ್ಲ. 20-25 ಕ್ಷೇತ್ರಗಳು ನಮಗೆ ನಷ್ಟವಾಗಿವೆ. ಅದರಲ್ಲಿ 10-12 ಕ್ಷೇತ್ರಗಳನ್ನು ಅತೀ ಕಡಿಮೆ ಅಂತರದಿಂದ ಕಳೆದುಕೊಂಡಿದ್ದೇವೆ ಎಂದು ತೆಲಂಗಾಣ ಸಚಿವ ಕೆ ಟಿ ರಾಮರಾವ್ ಅವರು ಹೇಳಿದ್ದಾರೆ.