ಕಾರ್ಯಾರಂಭಗೊಂಡ ಎರಡು ವರ್ಷ 2-3 ತಿಂಗಳ ಒಳಗೇ ತನ್ನ ಮೂರೂ ಲೈನ್‌ಗಳಲ್ಲಿ ಸಕ್ರಿಯವಾಗಿರುವ ಹೈದರಾಬಾದ್ ಮೆಟ್ರೋ ಈಗ ದೆಹಲಿ ಬಿಟ್ಟರೆ ದೇಶದ ಎರಡನೇ ಅತಿ ದೊಡ್ಡ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ 69 ಕಿಮೀನಷ್ಟು active network ಹೊಂದಿರುವ ಹೈದರಾಬಾದ್ ಮೆಟ್ರೋದ ನಿರ್ಮಾಣ ಕಾಮಗಾರಿ ಸಂಬಂಧ ತೆಲಂಗಾಣ ಸರ್ಕಾರ ತೋರುತ್ತಿರುವ ರಾಜಕೀಯ ಇಚ್ಛಾಶಕ್ತಿಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬರುತ್ತಿದೆ.
ಮತ್ತೊಂದು ಕಡೆ, ಎಂಟೂವರೆ ವರ್ಷಗಳ ಹಿಂದೆಯೇ ಕಾರ್ಯಾರಂಭಗೊಂಡ ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ವಿಸ್ತರಣೆ ಬಹಳ ನಿಧಾನವಾಗಿ ಸಾಗುತ್ತಿದ್ದು ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣ. ಮೊದಲೇ ಟ್ರಾಫಿಕ್ ಜಾಮ್‌ನಿಂದ ನರಳುತ್ತಿರುವ ಸಿಲಿಕಾನ್ ಸಿಟಿ ಜನರು ’ಇನ್ನೆಷ್ಟು ದಿನ ಕಾಯಬೇಕಪ್ಪಾ?’ ಎಂದು ಮೌನವಾಗಿ ಕಷ್ಟವನ್ನು ನುಂಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ವಿಸ್ತೀರ್ಣದಲ್ಲಿ ಹೈದರಾಬಾದ್‌ಗಿಂತ ದೊಡ್ಡದಾದ, ದೇಶದ ಮೂರನೇ ಅತಿ ದೊಡ್ಡ ನಗರವೂ ಆಗಿರುವ ಸಿಲಿಕಾನ್ ಸಿಟಿಯಲ್ಲಿ ಸಕ್ರಿಯವಾದ ಮೆಟ್ರೋ ಜಾಲದ ಉದ್ದ ಕೇವಲ ಬರೀ 42 ಕಿಮೀ ನಷ್ಟು ಮಾತ್ರ. ಎರಡು ಲೈನ್‌ಗಳು ಸಕ್ರಿಯವಾಗಿದ್ದು, ದಿನೇ ದಿನೇ ಹೆಚ್ಚುತ್ತಲೇ ಇರುವ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆಯ ಕಾರಣ ನಗರಾದ್ಯಂತ ಇನ್ನಷ್ಟು ವ್ಯಾಪಕವಾದ ಮೆಟ್ರೋ ಜಾಲದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಮೊನ್ನೆ ತಾನೇ ಹೈದರಾಬಾದ್ ಮೆಟ್ರೋ ಜಾಲಕ್ಕೆ ಹೆಚ್ಚುರಿಯಾಗಿ 11 ಕಿಮೀ ಮಾರ್ಗವನ್ನು ಸೇರಿಸುವ ಕೆಲಸ ಯಶಸ್ವಿಯಾಗಿ ಮುಗಿದಿದೆ. ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಖಾಸಗಿ ಪಾಲುದಾರಿಕೆ (PPP) ಪ್ರಾಜೆಕ್ಟ್‌ಗೆ ಮುಂದಡಿ ಇಟ್ಟು, ಇದನ್ನು ಬಹಳ ಅಚ್ಚುಕಟ್ಟಾಗಿ ಅನುಷ್ಠಾನ ಮಾಡಿಕೊಂಡು ಹೋಗುತ್ತಿರುವ ಹೈದರಾಬಾದ್ ಮೆಟ್ರೋನ ಮೂರನೇ ಲೈನ್‌ಅನ್ನು ಲೋಕಾರ್ಪಣೆ ಮಾಡಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಇಲ್ಲಿನ ಜುಬಿಲೀ ಬಸ್ ನಿಲ್ದಾಣದಿಂದ ಚಿಕ್ಕಡ್‌ಪಲ್ಲಿಯವರೆಗೆ ರೈಲಿನಲ್ಲಿ ಸಂಚರಿಸಿ ಉದ್ಘಾಟನಾ ಸವಾರಿ ಮಾಡಿದ್ದಾರೆ.
ನವೆಂಬರ್ 28, 2017ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಧ್ಯುಕ್ತ ಚಾಲನೆ ಪಡೆದ ಹೈದರಾಬಾದ್ ಮೆಟ್ರೋ, ನೋಡನೋಡುತ್ತಿದ್ದಂತೆಯೇ ಮೂರು ಲೈನ್‌ಗಳನ್ನು ಅಭಿವೃದ್ಧಿಪಡಿಸಿ, ಅವೆಲ್ಲವೂ ಈಗ ಸಕ್ರಿಯವಾಗಿ ಚಾಲೂ ಮಾಡಿ, ಪ್ರತಿನಿತ್ಯ 780 ಟ್ರಿಪ್‌ಗಳ ಮೂಲಕ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದೆ. ದೇಶದ ಅತಿ ದೊಡ್ಡ ಮೆಟ್ರೊ ನಿಲ್ದಾಣವಾಗಲಿದೆ ಎನ್ನಲಾಗುತ್ತಿರುವ ಮಹಾತ್ಮಾ ಗಾಂಧಿ ಬಸ್ ನಿಲ್ದಾಣ (MGBS) ಹಾಗೂ ಫಲಕ್‌ನುಮಾ ನಡುವಿನ ಮಾರ್ಗವೊಂದು ಪೂರ್ತಿಯಾಗಿ ಕಾಮಗಾರಿ ಕೆಲಸ ಮಗಿಸಿ ಈ ಜಾಲಕ್ಕೆ ಸೇರಿಕೊಂಡಲ್ಲಿ, ಮೊದಲ ಹಂತದ 73 ಕಿಮೀಗಳ ಅಷ್ಟೂ ಜಾಲ ಆಕ್ಟಿವೇಟ್ ಆಗಲಿದೆ. 20,000 ಕೋಟಿ ರೂಗಳ ಈ ಬೃಹತ್ ಯೋಜನೆಯ ನಿಮಾಣ ಕಾಮಗಾರಿಯನ್ನು L&T ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಲಾಗುತ್ತಿದೆ.
ಮತ್ತೊಂದೆಡೆ ದಿನದ 24 ಗಂಟೆಗಳ ಕಾಲವೂ ನಿರ್ಮಾಣ ಕಾಮಗಾರಿ ಮಾಡುವ ಮೂಲಕ ಮುಂಬಯಿ ಮೆಟ್ರೋ 3 ಅನ್ನು ಸಾಧ್ಯವಾದಷ್ಟು ಬೇಗ ಲೋಕಾರ್ಪಣೆ ಮಾಡಲು ಇಚ್ಛಿಸಿರುವ ಮಹಾರಾಷ್ಟ್ರ ಸರ್ಕಾರ, ಪುಣೆ ಹಾಗೂ ನಾಗ್ಪುರ ಮೆಟ್ರೋಗಳನ್ನೂ ಸಹ ದಾಖಲೆ ವೇಗದಲ್ಲಿ ಸಕ್ರಿಯವಾಗಿಸಿದೆ. ಮುಂಬಯಿ, ಚೆನ್ನೈ, ಹೈದರಾಬಾದ್, ದೆಹಲಿ, ಕೋಲ್ಕತ್ತಾ ಹಾಗೂ ಪುಣೆಗಳಲ್ಲಿ ಮೆಟ್ರೋಗಳೊಂದಿಗೆ ಸಬ್ ಅರ್ಬನ್ ರೈಲ್ವೇ ಜಾಲಗಳೂ ಸಹ ಸಕ್ರಿಯವಾಗಿ
ದಶಕಗಳ ಹೋರಾಟದ ಬಳಿಕ ಈ ಬಾರಿಯ ಬಜೆಟ್‌ನಲ್ಲಿ ಕೊನೆಗೂ ಸಬ್ ಅರ್ಬನ್ ರೈಲಿನ ಯೋಜನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡ ಬೆಂಗಳೂರೆಂಬ ಟ್ರಾಫಿಕ್ ಬೆಂಗಾಡಿನ ನಿವಾಸಿಗಳು ಇನ್ನೂ ಅದೆಷ್ಟು ವರ್ಷಗಳು ತಮ್ಮ ದಿನನಿತ್ಯದ ರೋದನೆಗೆ ಫುಲ್ ಸ್ಟಾಪ್ ಹಾಕಲು ಕಾಯಬೇಕೋ ಗೊತ್ತಿಲ್ಲ.