ಹಾಥ್ರಾಸ್ ಸಾಮೂಹಿಕ ಅತ್ಯಾಚಾರದ ಸಂತ್ರಸ್ಥೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದ ಚಿತ್ರದಲ್ಲಿರುವ ಮಹಿಳೆಯು ತನ್ನ ಪತ್ನಿ ಎಂದು ಒಬ್ಬ ವ್ಯಕ್ತಿಯು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.ಈ ದೂರನ್ನು ಗಂಭಿರವಾಗಿ ಸ್ವೀಕರಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತವಾಗಿ ವೈರಲ್ ಆಗಿದ್ದ ಹಾಗೂ ಈಗಲೂ ಆಗುತ್ತಿರುವ ಫೋಟೋದಲ್ಲಿರುವ ಮಹಿಳೆ ಹಾಥ್ರಾಸ್ ಸಂತ್ರಸ್ಥೆಯೇ ಅಲ್ಲ ಎಂದು ಈ ಹಿಂದೆಯೇ ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗವಾಗಿತ್ತು. ಆದರೂ, ನೆಟ್ಟಿಗರು ಹಾಥ್ರಾಸ್ ಸಂತ್ರಸ್ಥೆ ಎಂದು ಅದೇ ಮಹಿಳೆಯ ಚಿತ್ರವನ್ನು ಶೇರ್ ಮಾಡುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಪ್ರಕರಣದ ಕುರಿತಾಗಿ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿರುವ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು, ದೂರು ನೀಡಿದ ವ್ಯಕ್ತಿ ನಿಜ ಹೇಳುತ್ತಿದ್ದಲ್ಲಿ, ಕೇಂದ್ರ ಸರ್ಕಾರವು ಫೇಸ್‌ಬುಕ್, ಟ್ವಿಟರ್ ಹಾಗೂ ಗೂಗಲ್‌ಗೆ ಅಗತ್ಯವಾದ ನಿರ್ದೇಶನವನ್ನು ನೀಡಬೇಕು ಎಂದು ಹೇಳಿದ್ದಾರೆ.
Also Read: ಹಾಥ್ರಾಸ್ ಪ್ರಕರಣ: ಸಂತ್ರಸ್ಥೆಯ ಅಣ್ಣನನ್ನು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರದೊಯ್ದ ಸಿಬಿಐ
“ಈ ಪ್ರಕರಣದಲ್ಲಿ ಮೊದಲನೇ ಪ್ರತಿವಾದಿಯಾಗಿರುವ (ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ)ವು ಕೂಡಲೇ ದೂರನ್ನು ಸ್ವೀಕರಿಸಬೇಕು. ದೂರುದಾರರು ಹೇಳಿರುವ ಮಾಹಿತಿ ನಿಜವಾಗಿದ್ದಲ್ಲಿ ಆ ಕುರಿತು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಈ ಆದೇಶ ಸ್ವೀಕರಿಸಿದ ಮೂರು ದಿನಗಳ ಒಳಗಾಗಿ, ಎರಡರಿಂದ ನಾಲ್ಕನೇ ಪ್ರತಿವಾದಿಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ಗೂಗಲ್)ಗೆ ಅಗತ್ಯವಾದ ನಿರ್ದೇಶನಗಳನ್ನು ನೀಡಬೇಕು,” ಎಂದು ನವೀನ್ ಚಾವ್ಲಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
Also Read: FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ
ಈ ಪ್ರಕರಣದ ತನಿಖೆಗೆ ಸಹಕಾರಿಯಾಗುವಂತಹ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯವು ದೂರುದಾರರಿಗೆ ತಿಳಿಸಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಪೋಸ್ಟ್‌ಗಳ URL ಕೂಡಾ ನೀಡುವಂತೆ ತಿಳಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ದೂರುದಾರರು, “ತನ್ನ ಮೃತ ಪತ್ನಿಯ ಚಿತ್ರವನ್ನು ಹಾಥ್ರಾಸ್ ಸಂತ್ರಸ್ಥೆ ಎಂದು ಬಿಂಬಿಸಲಾಗಿದೆ,” ಎಂದು ಹೇಳಿದ್ದರು.