• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹಲವು ರಾಜ್ಯಗಳಲ್ಲಿ ನಡೆದಿದೆ ಅಂತರ್ಜಲದ ಅತಿ ಶೋಷಣೆ!

by
October 9, 2019
in ದೇಶ
0
ಹಲವು ರಾಜ್ಯಗಳಲ್ಲಿ ನಡೆದಿದೆ ಅಂತರ್ಜಲದ ಅತಿ ಶೋಷಣೆ!
Share on WhatsAppShare on FacebookShare on Telegram

ದಿನ ಕಳೆಯುತ್ತಿದ್ದಂತೆ ದೇಶದಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಸಾಕಷ್ಟು ಕಡೆ 2000 ಅಡಿಗೂ ಹೆಚ್ಚು ಬೋರ್ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ. ಕೆಲವೊಮ್ಮೆ ಸಿಕ್ಕರೂ ತಿಂಗಳೊಳಗೆ ನೀರಿನ ಮಟ್ಟ ಕಡಿಮೆಯಾಗಿ ನಿಂತುಹೋಗುತ್ತದೆ. ಕಳೆದ ಎರಡು ಮೂರು ದಶಕಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ಸಾಕಷ್ಟು ಸಂಸ್ಥೆಗಳು ಬೋರ್ ಕೊರೆಸಿ ದೊಡ್ಡ ಪ್ರಮಾಣದಲ್ಲಿ ಅಂತರ್ಜಲದಿಂದ ನೀರನ್ನು ತೆಗೆದಿದ್ದಾರೆ. ಅಲ್ಲದೆ, ಅಭಿವೃದ್ಧಿ ಎಂಬ ಹೆಸರಿನಲ್ಲಿ ನಗರೀಕರಣದಿಂದ ಸಿಮೆಂಟ್ ರಸ್ತೆಯೇ ತಲೆ ಎತ್ತುತ್ತಿವೆ. ಭೂಮಿಯ ಒಳಗೆ ಹನಿ ನೀರು ಇಳಿಯದಂತೆ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೈಗಾರೀಕರಣದಿಂದ ಜಲಮಾಲಿನ್ಯವು ಸಹ ಹೆಚ್ಚಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನು ಎರಡು ದಶಕಗಳಲ್ಲಿ ದೇಶದ ಅರ್ಧ ಭಾಗ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸಲಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ದೇಶದಲ್ಲಿ ಕೇಂದ್ರ ಸರ್ಕಾರ (ಕೇಂದ್ರ ಅಂತರ್ಜಲ ಮಂಡಳಿ) ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅಂತರ್ಜಲ ಸಂಪನ್ಮೂಲವನ್ನು ಮೌಲ್ಯಮಾಪನ ಮಾಡುತ್ತದೆ. 2017ರ ಮೌಲ್ಯ ಮಾಪನದ ಪ್ರಕಾರ, ವರ್ಷಕ್ಕೆ 43,200 ಕೋಟಿ ಕ್ಯೂಬಿಕ್ ಮೀಟರ್ (ಬಿಸಿಎಂ) ಅಂತರ್ಜಲ ಪುನರ್ ಭರ್ತಿಯಾಗುತ್ತದೆ. ವರ್ಷದಲ್ಲಿ ಹೊರತೆಗೆಯಬಹುದಾದ ಜಲ ಸಂಪನ್ಮೂಲ 39,300 ಕೋಟಿ ಬಿಸಿಎಂ. ಆದರೆ ನೀರಾವರಿ, ಕೈಗಾರಿಕೆ ಮತ್ತು ಮನೆಗೆ ಬಳಕೆ ಸೇರಿದಂತೆ ಎಲ್ಲಾ ಬಳಕೆಗಳಿಗೆ ವರ್ಷಕ್ಕೆ 24,900 ಬಿಸಿಎಂ ನೀರು ಸಾಕಾಗುತ್ತದೆ. ವಾರ್ಷಿಕವಾಗಿ ಶೇಕಡ 63ರಷ್ಟು ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆಯಬಹುದು ಎಂದು ಕೇಂದ್ರ ಅಂತರ್ಜಲ ಮಂಡಳಿ ತಿಳಿಸಿದೆ.

ದೇಶದಲ್ಲಿ ಬ್ಲಾಕ್ ಹಂತದಲ್ಲಿ, ತಾಲ್ಲೂಕು ಹಂತದಲ್ಲಿ, ಜಲಾಯನ ಪ್ರದೇಶಗಳು ಸೇರಿ 6881 ಘಟಕಗಳಲ್ಲಿ ಅಂತರ್ಜಲ ಸಂಪನ್ಮೂಲವನ್ನು ಮೌಲ್ಯಮಾಪನ ಮಾಡಲಾಗಿದೆ. ಅದರಲ್ಲಿ 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 1186 ಘಟಕಗಳಲ್ಲಿ ‘ಅತಿಯಾದ ಶೋಷಣೆ’ (‘Over-exploited’) ಎಂದು ವರ್ಗೀಕರಿಸಲಾಗಿದೆ. ಏಕೆಂದರೆ ಈ ಘಟಕಗಳಲ್ಲಿ ವರ್ಷಕ್ಕೆ ಅತಿಯಾಗಿ ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆಯಲಾಗಿದೆ ಎಂದು ಹೇಳಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿಹೆಚ್ಚು ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆದಿರುವ ಬ್ಲಾಕ್ ಮತ್ತು ತಾಲ್ಲೂಕು ಘಟಕಗಳ ವಿವರ

ಜಾಗೃತಿಗಾಗಿ ಕೇಂದ್ರ ಸರ್ಕಾರದಿಂದ ಸರಣಿ ಸಭೆ

ನೀರಿನ ಸಂರಕ್ಷಣೆಗೆ ಸಾಮೂಹಿಕ ಆಂದೋಲನ ಅವಶ್ಯಕತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 08.06.2019ರಂದು ದೇಶದ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ‘ನೀರಿನ ಸಂರಕ್ಷಣೆ ಮಾಡುವುದಕ್ಕೆ, ಮಳೆ ನೀರು ಕೊಯ್ಲು ಮಾಡುವುದಕ್ಕೆ ಮತ್ತು ನೀರಿನ ಪ್ರಾಮುಖ್ಯತೆಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಿ’ ಎಂದು ಪತ್ರ ಬರೆದಿದ್ದರು.

ನೀರಿನ ಸಮಸ್ಯೆ ಕುರಿತು ಮತ್ತು ಕಾಲಕಾಲಕ್ಕೆ ಆಗುವ ಮುಂಗಾರು ಮಳೆಯನ್ನು ಗರಿಷ್ಠ ಮಟ್ಟದಲ್ಲಿ ಹೇಗೆ ಶೇಖರಿಸಿ ಬಳಸಬೇಕು ಹಾಗೂ ಜಲ ಸಂರಕ್ಷಣೆ ಸಂಬಂಧಿತ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕೇಂದ್ರ ಸರ್ಕಾರ, ದೇಶದ ವಿವಿಧ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳೊಡನೆ 01.05.2019ರಂದು ಒಂದು ಸಭೆಯನ್ನು ನಡೆಸಿತ್ತು. ಅಲ್ಲದೆ, ಅತಿಯಾದ ಅಂತರ್ಜಲ ಶೋಷಣೆ ಮತ್ತು ಸವಕಳಿಯನ್ನು ತಡೆಯುವ ಸಲುವಾಗಿ 11.06.2019ರಂದು ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದೆ. ಇದಲ್ಲದೆ, ಅಂತರ್ಜಲವನ್ನು ನಿಯಂತ್ರಿಸುವ ಸಲುವಾಗಿ ಪರಿಸರ (ಸಂರಕ್ಷಣೆ) ಕಾಯ್ದೆ 1986” ರ ಸೆಕ್ಷನ್ 3 (3) ರ ಅಡಿಯಲ್ಲಿ ಕೇಂದ್ರಿಯ ಅಂತರ್ಜಲ ಪ್ರಾಧಿಕಾರದಿಂದ ಜಲ ಶಕ್ತಿ ಅಭಿಯಾನ ರಚಿಸಲಾಗಿದೆ.

ಕೇಂದ್ರ ಸರ್ಕಾರದ ಜಲ ಶಕ್ತಿ ಅಭಿಯಾನ

ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನರುತ್ಥಾನ, ನೀರಿನ ಮರುಬಳಕೆ ಮತ್ತು ಬರಡಾದ ಜಲಮೂಲಗಳ ಪುನಶ್ಚೇತನ, ಕೊಳಗಳ ಪುನರ್ಭರ್ತಿ, ಜಲಕೋಶಗಳ ಅಭಿವೃದ್ಧಿ ಮತ್ತು ತೀವ್ರ ವೇಗದಲ್ಲಿ ಅರಣ್ಯ ಬೆಳೆಸುವ ಆಯಾಮಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಜಲ ಶಕ್ತಿ ಅಭಿಯಾನವನ್ನು ಜಾರಿಗೆ ತಂದಿದೆ. ಆರಂಭದಲ್ಲಿ 256 ಜಿಲ್ಲೆಗಳ 1592 ನೀರಿನ ಅಭಾವವಿರುವ ಬ್ಲಾಕ್ ಗಳ ಮೇಲೆ ಕೇಂದ್ರಿಕರಿಸಿ, ಜುಲೈ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆತಿತ್ತು.

ಜೂನ್‌ ನಿಂದ ಮಳೆಗಾಲ ಪ್ರಾರಂಭವಾಗುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಜುಲೈ 1ರಿಂದ ಸೆಪ್ಟೆಂಬರ್ 15ರ ತನಕ ಮಳೆಕೊಯ್ಲು ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಿಂಗಾರು ಮಳೆ ಹೆಚ್ಚು ಬೀಳುವ ರಾಜ್ಯಗಳಲ್ಲಿ ಅಕ್ಟೋಬರ್ 1ರಿಂದ ನವಂಬರ್ 30ರ ತನಕ ಅಭಿಯಾನ ಮುಂದುವರಿಯಲಿದೆ. ಜಲಶಕ್ತಿ ಅಭಿಯಾನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ. ಜತೆಗೆ ಕೇಂದ್ರ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ದರ್ಜೆಯ 256 ಅಧಿಕಾರಿಗಳಿಗೆ ಉಸ್ತುವಾರಿಯ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಡಳಿತ ಈ ತಂಡಕ್ಕೆ ತಲಾ ಇಬ್ಬರನ್ನು ನಾಮ ನಿರ್ದೇಶನ ಮಾಡಲುಬಹುದು. ಬ್ಲಾಕ್, ತಾಲ್ಲೂಕು ಮತ್ತು ಜಿಲ್ಲಾ ಜಲ ಸಂರಕ್ಷಣಾ ಯೋಜನೆಗಳು ಮತ್ತು ಕೃಷಿ ಮೇಳದಂತಹ ಕಾರ್ಯಕ್ರಮಗಳ ಮೂಲಕ ತಳಮಟ್ಟದಲ್ಲಿ ನೀರನ್ನು ರಕ್ಷಿಸುವ ಜಾಗೃತಿಯನ್ನ ಜನರಲ್ಲಿ ಮೂಡಿಸಲಾಗುತ್ತದೆ. ಅಂತೆಯೇ ಕೃಷಿಗೆ ಸಮರ್ಪಕವಾಗಿ ನೀರನ್ನು ಬಳಸುವುದು ಮತ್ತು ಸರಿಯಾದ ಬೆಳೆಯನ್ನು ಆಯ್ಕೆ ಮಾಡುವ ಉಪಕ್ರಮಗಳು ಅಭಿಯಾನದಲ್ಲಿ ಸೇರಿವೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ನಿರ್ದೇಶನದಂತೆ, ‘ಅತಿಯಾದ ಶೋಷಿತ’ ಮತ್ತು ಜಲ ಮಾಲಿನ್ಯ ಸೃಷ್ಟಿಸುವ ಕೈಗಾರಿಕೆಗಳಿಗೆ ಮತ್ತು ಗಣಿಗಾರಿಕೆ ಯೋಜನೆಗಳಿಗೆ ಅಂತರ್ಜಲ ನೀರನ್ನು ಹೊರತೆಗೆಯಲು ಎನ್‌ ಒ ಸಿ (NOC – Non Objection Certificate) ನೀಡುವುದಿಲ್ಲ ಎಂದು ಕೇಂದ್ರ ಜಲಮಂಡಳಿ ಹೇಳಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಘಲ ಅನುಷ್ಟಾನ ಎಷ್ಟರ ಮಟ್ಟಿಗೆ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಸಹಾಯವಾಗಬಲ್ಲುದು ಎಂದು ಕಾದು ನೋಡಬೇಕಿದೆ.

Tags: BorewellCentral Ground Water AuthorityCentral Water Resources DepartmentGround WaterGround Water ResourcesIrrigationJal Shakti AbhiyanNational Green TribunalNGTOver-exploitedRain water harvestingಅಂತರ್ಜಲಅಂತರ್ಜಲ ಸಂಪನ್ಮೂಲಅತಿಯಾದ ಶೋಷಣೆಕೇಂದ್ರ ಅಂತರ್ಜಲ ಮಂಡಳಿಕೇಂದ್ರ ಜಲ ಸಂಪನ್ಮೂಲ ಇಲಾಖೆಜಲ ಶಕ್ತಿ ಅಭಿಯಾನನೀರಾವರಿಬೋರ್ ವೆಲ್ಮಳೆ ನೀರು ಕೊಯ್ಲುರಾಷ್ಟ್ರೀಯ ಹಸಿರು ನ್ಯಾಯಮಂಡಳಿ
Previous Post

ಆನೆ ಕಾರಿಡಾರ್: ಶಾಶ್ವತ ಪರಿಹಾರಕ್ಕಿಲ್ಲ ರಾಜಕೀಯ ಇಚ್ಛಾಶಕ್ತಿ  

Next Post

ಬಂಡೀಪುರ ರಸ್ತೆ ವಿವಾದದ ಹಿಂದಿನ ‘ಲಾಬಿ’ ಯಾವುದು?

Related Posts

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್
ದೇಶ

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

by ಪ್ರತಿಧ್ವನಿ
December 2, 2025
0

ನವದೆಹಲಿ: ರಷ್ಯಾ ಅಧ್ಯಕ್ಷ ವಾಗ್ಲಿಮಿರ್ ಪುಟಿನ್ ಡಿ.4ರಂದು ನವದೆಹಲಿಗೆ ಭೇಟಿ‌ ನೀಡಲಿದ್ದಾರೆ. ಎರಡು ದಿನಗಳ ಈ ಭೇಟಿಯ ಹಿನ್ನಲೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್...

Read moreDetails
ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

December 1, 2025
ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

December 1, 2025
ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯುವುದಿಲ್ಲ-ಡಿ.ಕೆ ಶಿವಕುಮಾರ್

ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯುವುದಿಲ್ಲ-ಡಿ.ಕೆ ಶಿವಕುಮಾರ್

December 1, 2025
ಆಳ್ವಿಕೆಯ ಮಾನದಂಡವೂ ತಂತ್ರಗಾರಿಕೆಯ ಫಲವೂ

ಆಳ್ವಿಕೆಯ ಮಾನದಂಡವೂ ತಂತ್ರಗಾರಿಕೆಯ ಫಲವೂ

November 29, 2025
Next Post
ಬಂಡೀಪುರ ರಸ್ತೆ ವಿವಾದದ ಹಿಂದಿನ ‘ಲಾಬಿ’ ಯಾವುದು?

ಬಂಡೀಪುರ ರಸ್ತೆ ವಿವಾದದ ಹಿಂದಿನ ‘ಲಾಬಿ’ ಯಾವುದು?

Please login to join discussion

Recent News

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?
Top Story

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

by ಪ್ರತಿಧ್ವನಿ
December 3, 2025
Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!
Top Story

ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!

by ಪ್ರತಿಧ್ವನಿ
December 2, 2025
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF
Top Story

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF

by ಪ್ರತಿಧ್ವನಿ
December 2, 2025
ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ
Top Story

ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

by ಪ್ರತಿಧ್ವನಿ
December 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

December 3, 2025
Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada