ವಿಜಯೇಂದ್ರ ವಿರುದ್ಧ ನೀಡಿದ್ದ ಹೇಳಿಕೆಯಿಂದ ಉಲ್ಟಾ ಹೊಡೆದ ಅನ್ವರ್ ಮಾನಿಪ್ಪಾಡಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಬಿ.ವೈ ವಿಜಯೇಂದ್ರ ವಿರುದ್ಧದ ಆರೋಪದಿಂದ ಹಿಂದೆ ಸರಿಯಲು ಅನ್ವರ್ ಮಾಣಿಪ್ಪಾಡಿ ಎಷ್ಟು ಪಡೆದಿದ್ದಾರೆ ಎಂದು ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ವಿಜಯೇಂದ್ರ ಮೇಲೆ ಆರೋಪ ಮಾಡಿದ್ದ ಅನ್ವರ್ ಮಾಣಿಪ್ಪಾಡಿ, ವಕ್ಪ್ ಆಸ್ತಿ ವಿಚಾರದಿಂದ ಹಿಂದೆ ಸರಿಯಲು 150 ಕೋಟಿ ಆಫರ್ ಮಾಡಿದ್ದಾಗಿ ಆರೋಪ ಮಾಡಿದ್ದರು. ಇದೀಗ ವಿಜಯೇಂದ್ರ ಮೇಲಿನ ಆರೋಪದಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಮಾನ ಉಳಿಸಲು ಅನ್ವರ್ ಮಾಣಿಪ್ಪಾಡಿಯ ಕಾಲನ್ನ ಬಿಜೆಪಿ ಹಿಡಿದಿರಬಹುದು ಎಂದಿರುವ ಪ್ರಿಯಾಂಕ್ ಖರ್ಗೆ, ಸತ್ಯ ಹಾಗೂ ಸಮುದಾಯಕ್ಕೆ ಹುತಾತ್ಮನಾಗಲು ಸಿದ್ದ ಎಂದಿದ್ದ ಮಾಣಿಪ್ಪಾಡಿಗೆ ಈಗ ಏನಾಯಿತು? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರ ಬದಲು ವಿಜಯೇಂದ್ರ ಹೆಸರನ್ನ ಮಾತ್ರ ಯಾಕೆ ಹೇಳಿದ್ರು ಎಂದು ಪ್ರಿಯಾಂಕ್ ಪ್ರಶ್ನೆ ಮಾಡಿದ್ದು, X ಪೋಸ್ಟ್ ಮೂಲಕ ಮಾಣಿಪ್ಪಾಡಿ ಹಾಗೂ ಬಿಜೆಪಿ ವಿರುದ್ದ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾ