ಏಪ್ರಿಲ್ 26 ರಂದು ಬೆಳಗಾವಿಯ (Belagum) ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರಿಂದ (Cm siddaramaiah) ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾಗಿದ್ದ ASP ನಾರಾಯಣ ಬರಮನಿ (Narayana bharamani) ಈ ಘಟನೆಯಿಂದ ಮನನೊಂದು ಸ್ವಯಂ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದು, ತಾವು ಈ ನಿರ್ಧಾರದಿಂದ ಹಿಂದೆ ಸರಿಯದಿರಲು ತೀರ್ಮಾನಿಸಿದ್ದಾರೆ.

ಹೌದು, ಹೀಗೆ ಸ್ವಯಂ ನಿವೃತ್ತಿಯ ತೀರ್ಮಾನ ಮಾಡಿದ್ದ ನಾರಾಯಣ ಬರಮನಿ ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ,ಗೃಹಸಚಿವರು, ಇತರೆ ಶಾಸಕರು ಎಷ್ಟೇ ಮನವೊಲಿಕೆ ಮಾಡಿದ್ರೂ ಬರಮನಿ ಮಾತ್ರ ತಮ್ಮ ನಿರ್ಧಾರ ಬದಲಿಸಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಹೀಗಾಗಿ ASP ನಾರಾಯಣ ಬರಮನಿ ಅವರ ಮನವೊಲಿಸುವ ಸರ್ಕಾರದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ತಮ್ಮನ್ನು ಸರ್ಕಾರ ವಜಾ ಮಾಡೋವರೆಗೂ ಧಾರವಾಡ ASPಯಾಗಿ ಕರ್ತವ್ಯ ನಿರ್ವಹಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.