ಬುಧವಾರ ಬಿಹಾರದ ಮಹಾನಿರ್ದೇಶಕ (ಡಿಜಿಪಿ) ಸ್ಥಾನದಿಂದ ಕೆಳಗಿಳಿದ ಗುಪ್ತೇಶ್ವರ ಪಾಂಡೆ, ತಾನು ತೆಗೆದುಕೊಂಡ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸ್ವಯಂಪ್ರೇರಿತ ನಿವೃತ್ತಿಯ ಕೋರಿಕೆಯನ್ನು ಬಿಹಾರ ಸರ್ಕಾರ ಮಂಗಳವಾರ ಅಂಗೀಕರಿಸಿದ ನಂತರ ಪಾಂಡೆ ಡಿಜಿಪಿ ಸ್ಥಾನದಿಂದ ಹೊರಬಂದರು, ಇದು ಮೂರು ತಿಂಗಳ ಕಡ್ಡಾಯ ತಂಪಾಗಿಸುವ ಅವಧಿಯನ್ನು ಮನ್ನಾ ಮಾಡಿತು.
“ಸುಶಾಂತ್ ಸಿಂಗ್ ರಜಪೂತ್ ಮತ್ತು ನನ್ನ ವಿಆರ್‌ಎಸ್ ನಡುವೆ ಯಾವುದೇ ಸಂಬಂಧವಿಲ್ಲ. ನಾನು ಹಿರಿಯ ನಾಗರಿಕ ಮತ್ತು ತನ್ನ ಮಗನಿಗೆ ನ್ಯಾಯ ಒದಗಿಸಬೇಕೆಂದು ಬಯಸುವ ಅಸಹಾಯಕ ತಂದೆಗೆ ಸಹಾಯ ಮಾಡಿದ್ದೇನೆ. ಬಿಹಾರ ಪೊಲೀಸರ ಎಫ್ಐಆರ್ ಆಧರಿಸಿ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ)ಗೆ ಪ್ರಕರಣವನ್ನು ವರ್ಗಾವಣೆ ಮಾಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡಿದೆ ಮತ್ತು ನ್ಯಾಯಾಲಯವು ನಟನ ಸಾವಿನ ಬಗ್ಗೆ ಪಾಟ್ನಾದಲ್ಲಿ ನೋಂದಾಯಿಸಲಾದ ಎಫ್ಐಆರ್ ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯಪಟ್ಟಿದೆ “ಎಂದು ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
Also Read: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
“ನಾನು ಸ್ವತಂತ್ರ ಮನುಷ್ಯ. ನಾನು ಡಿಜಿಪಿಯಲ್ಲ. ನಾನು ನಿನ್ನೆ ವಿಆರ್‌ಎಸ್ ತೆಗೆದುಕೊಂಡಿದ್ದೇನೆ. ವಿವಿಧ ಜಿಲ್ಲೆಗಳ ಜನರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ ಮತ್ತು ಅವರೊಂದಿಗೆ ಚರ್ಚಿಸಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವುದೇ ರಾಜಕಾರಣಿಗಳು ನನ್ನನ್ನು ಭೇಟಿಯಾಗಲು ಬಂದಿಲ್ಲ. ನಾನು ಯಾವುದೇ ಪಕ್ಷಕ್ಕೆ ಸೇರಿಕೊಂಡಿಲ್ಲ ಮತ್ತು ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದಾಗ ನಾನು ನಿಮಗೆ ತಿಳಿಸುತ್ತೇನೆ “ಎಂದು ಅವರು ಪತ್ರಕರ್ತರೊಡನೆ ಹೇಳಿದ್ದಾರೆ.
ಬಾಲಿವುಡ್ ನಟಿ ರಿಯಾ ಚಕ್ರವರ್ತಿಗಾಗಿ ‘ಔಕಾತ್’ ಪದವನ್ನು ಅವರು ಎಲ್ಲಿ ಬಳಸಿದ್ದಾರೆಂದು ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಪಾಂಡೆ, “ಔಕಾತ್ ಎಂದರೆ ವ್ಯಕ್ತಿತ್ವ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾಂವಿಧಾನಿಕ ಹುದ್ದೆಯ ಮೇಲೆ ಕುಳಿತಿದ್ದಾರೆ. ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣಕ್ಕೆ ಆರೋಪಿಸಲ್ಪಟ್ಟಂತಹ ವ್ಯಕ್ತಿಯು ಸಾಂವಿಧಾನಿಕ ಹುದ್ದೆಯಲ್ಲಿರುವ ಯಾವುದೇ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ನಾನು ಹೇಳಿದ್ದೇನೆ ಎಂದರು.
“ನಮ್ಮ ಅಧಿಕಾರಿಗಳನ್ನು ಮುಂಬೈ ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ನಾನು ಪ್ರತಿಭಟನೆ ವ್ಯಕ್ತಪಡಿಸಿ ಪ್ರತಿಕ್ರಿಯೆಗಳನ್ನು ನೀಡಿದ್ದೇನೆ. ನಾನು ಬಿಹಾರದ ಹೆಮ್ಮೆಗಾಗಿ ಹೋರಾಡಿದೆ, ಸುಶಾಂತ್ ಅವರ ನ್ಯಾಯಕ್ಕಾಗಿ ಮತ್ತು ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ” ಎಂದು ಅವರು ಹೇಳಿದ್ದಾರೆ.
Also Read: ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ
ರಜಪೂತ್ ಅವರ ಮುಂಬೈ ನಿವಾಸದಲ್ಲಿ ಜೂನ್ 14 ರಂದು ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣವೆಂದು ಘೋಷಿಸಿದ್ದರು. ಆದರೆ, ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪಾಟ್ನಾದಲ್ಲಿ ಎಫ್ಐಆರ್ ದಾಖಲಿಸಿ, ಬಳಿಕ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಆಗಸ್ಟ್ 19 ರಂದು ಸುಪ್ರೀಂ ಕೋರ್ಟ್ ಸಿಬಿಐಗೆ ನಟನ ಸಾವಿನ ಬಗ್ಗೆ ಪಾಟ್ನಾದಲ್ಲಿ ನೋಂದಾಯಿಸಲಾದ ಎಫ್ಐಆರ್ ನ್ಯಾಯಸಮ್ಮತವಾಗಿದೆ ಎಂದು ಹೇಳಿತ್ತು.
Also Read: ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಬಿಹಾರ ಚುನಾವಣಾ ದಾಳ?
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಏಜೆನ್ಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದು, ಈ ಪ್ರಕರಣದ ತನಿಖೆಯನ್ನು ಪಾಟ್ನಾದಿಂದ ವರ್ಗಾಯಿಸಲು ಬಿಹಾರ ಸರ್ಕಾರದ ಶಿಫಾರಸನ್ನು ಕೇಂದ್ರ ಒಪ್ಪಿಕೊಂಡಿದೆ. ಪ್ರಸ್ತುತ ನಟನ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ