ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತಲುಪಲು ಸಹಾಯ ಮಾಡಿ ಸಾಕಷ್ಟು ಪ್ರಶಂಸೆ ಪಡೆದುಕೊಂಡ ನಟ ಸೋನು ಸೂದ್, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರೊಂದಿಗಿನ ಸಂಭಾಷಣೆಯಲ್ಲಿ, ನಟನ ಸಾವಿನ ಬಗ್ಗೆ ಮಾತನಾಡುವುದು ಏಕೆ ʼಅನೈತಿಕʼ ಎಂದು ಅವರು ಉಲ್ಲೇಖಿಸಿದ್ದಾರೆ.
Also Read: ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ
ಸುಶಾಂತ್ ಈಗ ಜೀವಂತವಾಗಿದ್ದರೆ ಅವನು ತನ್ನ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಸ್ ಅನ್ನು ನೋಡಿ ನಗುತ್ತಿದ್ದರು ಎಂದು ಹೇಳಿದ್ದಾರೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಹಲವು ಹೊಸ ಆಯಾಮಗಳು ಹೊರಹೊಮ್ಮುತ್ತಿರುವುದರಿಂದ, ಕೆಲವು ದಿನಗಳ ಬಳಿಕ, ಜನರು ಅದನ್ನು ಮರೆತುಬಿಡುತ್ತಾರೆ ಎಂದು ಸೋನು ಸೂದ್ ಭಾವಿಸುತ್ತಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಹುಷ ಸುಶಾಂತ್ ಇದನ್ನು ನೋಡುತ್ತಿದ್ದರೆ, ಅವರ ಸಾವಿನ ಸುತ್ತ ನಡೆಯುತ್ತಿರುವ ʼಸರ್ಕಸ್ʼ ಸಿನಿಕತನದಿಂದ ನಗುತ್ತಿದ್ದರು. ನಾನು ಎಂದಿಗೂ ಭೇಟಿಯಾಗದವರು, ಎಂದಿಗೂ ಭೇಟಿಯಾಗಬೇಕೆಂದು ಬಯಸದವರು ನನ್ನ ಹೆಸರಿನಲ್ಲಿ ಅನೇಕ ಅನಗತ್ಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸುಶಾಂತ್ ಹೇಳುತ್ತಿದ್ದರು ಎಂದು ಸೋನು ಹೇಳಿದ್ದಾರೆ.
ಇತಿಹಾಸ ಪುಟದಲ್ಲಿ ಇದು (ಸುಶಾಂತ್ ಪ್ರಕರಣ) ಒಮ್ಮೆ ಇಳಿದು ಹೋದರೆ ಮತ್ತೆ ಯಾರೂ ಅವುಗಳನ್ನು ತೆರೆಯಲು ಬಯಸುವುದಿಲ್ಲ. ಎಂದೂ ಆತನನ್ನು ಭೇಟಿಯಾಗದ ಅಥವಾ ಆತನ ಕುರಿತು ಏನೂ ತಿಳಿಯದಿರುವವರು ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸೂದ್ ಉಚ್ಚರಿಸಿದ್ದಾರೆ.
Also Read: ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಬಿಹಾರ ಚುನಾವಣಾ ದಾಳ?
“ಈ ಚರ್ಚೆಯಲ್ಲಿ ಸುಶಾಂತ್ ಎಲ್ಲೋ ಹಿಂದೆ ಉಳಿಯುತ್ತಾನೆ ಎಂದು ಎಲ್ಲರಿಗೂ ತಿಳಿದಿತ್ತು. ಅವನು ನಮ್ಮ ಹೃದಯದಲ್ಲಿದ್ದಾನೆ ಮತ್ತು ಯಾವಾಗಲೂ ನಮಗೆ ವಿಶೇಷನಾಗಿರುತ್ತಾನೆ. ಆದರೆ ಅವನನ್ನು ಎಂದಿಗೂ ಭೇಟಿಯಾಗದವರು, ಅವರೊಂದಿಗೆ ಎಂದಿಗೂ ಮಾತನಾಡದವರು, ಅವರ ಸಾವಿನ ಬಗ್ಗೆ ತಮ್ಮದೇ ಆದ ಆಯಾಮವನ್ನು ಬಯಸುತ್ತಾರೆ ಮತ್ತು ಅವರು ಅದನ್ನು ಪಡೆದುಕೊಂಡಿದ್ದಾರೆ. ದುಃಖದ ಸಂಗತಿಯೆಂದರೆ, ಎಲ್ಲೋ, ಇದು ಇಷ್ಟು ದಿನ ಮಾತ್ರ ಮುಂದುವರಿಯುತ್ತದೆ ಎಂದು ಎಲ್ಲರಿಗೂ ತಿಳಿದಿತ್ತು, ”ಎಂದು ಅವರು ಹೇಳಿದ್ದಾರೆ.
Also Read: ಸುಶಾಂತ್ ಸಾವಿಗೂ ನನ್ನ ನಿವೃತ್ತಿಗೂ ಯಾವ ಸಂಬಂಧ ಇಲ್ಲ- ಮಾಜಿ DGP ಪಾಂಡೆ
ಮುಖ್ಯವಾಗಿ, ಆತನ ಸಾವಿನ ಕುರಿತ ಚರ್ಚೆಯಲ್ಲಿ ಆತನ ಕುಟುಂಬ ಪಕ್ಕಕ್ಕೆ ಸರಿದಿರುವುದು ಹಾಗೂ ನಡೆಯುತ್ತಿರುವ ಸುದೀರ್ಘ ಚರ್ಚೆಗಳಲ್ಲಿ ಹೆಸರು ಗಳಿಸಿದವರು ಯಾರೆಂದು ಸುಶಾಂತ್ ಆಶ್ಚರ್ಯ ಪಡುತ್ತಿದ್ದರೇನೋ. ಈ ರೀತಿ ಮಾತನಾಡಲು ಈ ಜನರಿಗೆ ನನ್ನ ಬಗ್ಗೆ ಏನು ತಿಳಿದಿದೆ ಎಂದು ಆತ ಆಶ್ಚರ್ಯ ಪಡುತ್ತಿದ್ದರು, ಆದ್ದರಿಂದ ಆತನ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸೋನು ಹೇಳಿದ್ದಾರೆ .
Also Read: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ
ನಮ್ಮ ವೃತ್ತಿಜೀವನದಲ್ಲಿ ನಾನು ಸುಮಾರು 10 ಬಾರಿ ಸುಶಾಂತ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ನಾವು ಅನೇಕ ಬಾರಿ ಒಟ್ಟಿಗೆ ವರ್ಕೌಟ್ ಮಾಡಿದ್ದೇವೆ, ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ಹೊರಗಿನವರಾಗಿ ಬಂದು ಸಾಕಷ್ಟು ಹೆಸರು ಮಾಡಿದ ಸಾಧಕ ಎಂದು ಸೋನು ಸೂದ್ ಮೃತ ನಟನ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಒಟ್ಟಾರೆ, ಸುಶಾಂತ್ ಸಾವಿನ ಬಳಿಕ ಏಕಾಏಕಿ ರಂಗಕ್ಕೆ ಧುಮುಕಿದವರು ಕಂಗಣಾ ರಾಣಾವತ್, ಹಾಗೂ ಬಿಹಾರದಲ್ಲಿ ಚುನಾವಣೆ ಎದುರಿಟ್ಟುಕೊಂಡು ಸುಶಾಂತ್ ಪರ ರಂಗಕ್ಕಿಳಿದಿರುವುದು ಬಿಜೆಪಿ, ಅಷ್ಟೇ ಅಲ್ಲದೆ ಸುಶಾಂತ್ ಸಾವಿನ ಬಳಿಕ ಅರ್ನಾಬ್ ಗೋಸ್ವಾಮಿಯೂ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದಾರೆ. ಒಟ್ಟಾರೆ ಸೋನು ಸೂದ್ ಯಾರಿಗೂ ನಿರ್ದಿಷ್ಟ ಗುರಿ ಇಟ್ಟಿಲ್ಲ, ಬದಲಾಗಿ ಸುಶಾಂತ್ ಸಾವನ್ನು ತಮ್ಮ ಸ್ವಾರ್ಥಕ್ಕಾಗಿ ಕೆಲವು ಜನರು ಬಳಸಿಕೊಳ್ಳುತ್ತಿದ್ದಾರೆಂದು ಸೂಚ್ಯವಾಗಿ ಹೇಳಿದ್ದಾರೆ.