ಮಂಡ್ಯ ಸಂಸದೆ, ಮಾಜಿ ಚಲನಚಿತ್ರ ತಾರೆ ಸುಮಲತಾ ಅಂಬರೀಷ್ ಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿರುವ ಸಂಸದೆ ಪತ್ರಿಕಾ ಪ್ರಕಟಣೆ ಮೂಲಕ ತನಗೆ ಸೋಂಕು ತಗುಲಿರುವುದನ್ನು ಸ್ಪಷ್ಟೀಕರಿಸಿದ್ದಾರೆ.
ಶನಿವಾರ, ಜುಲೈ 4ರಂದು, ತನಗೆ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ಕೋವಿಡ್ 19 ಪರೀಕ್ಷೆಗೆ ಒಳಗಾದ ಬಳಿಕ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಮಂಡ್ಯ ಸಂಸದೆ ತಿಳಿಸಿದ್ದಾರೆ. ಸುಮಲತಾ ಅಂಬರೀಷ್‌ಕರ್ನಾಟಕದಲ್ಲಿ ಕೋವಿಡ್-19 ಪಾಸಿಟಿವ್ ಬಂದಿರುವ ಮೊದಲ ಸಂಸದರಾಗಿದ್ದಾರೆ
ಕುಣಿಗಲ್ ಶಾಸಕ ಡಾ. ರಂಗನಾಥ್‌ಗೆ ಕೂಡಾ ಕರೋನಾ ಸೋಂಕು ಪತ್ತೆಯಾಗಿದ್ದು, ಕರೋನಾ ಸೋಂಕಿಗೆ ತುತ್ತಾದ ಜನಪ್ರತಿನಿಧಿಗಳ ಸಾಲಿಗೆ ಸೇರಿದ್ದಾರೆ. ಈಗಾಗಲೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಮಾಜಿ ಸಂಸದ ಜನಾರ್ಧನ ಪೂಜಾರಿಗೆ ಕರೋನಾ ಸೋಂಕು ಕಂಡುಬಂದಿತ್ತು.