• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿ ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣವೇನು?

by
February 25, 2020
in ಕರ್ನಾಟಕ
0
ಸಿ ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣವೇನು?
Share on WhatsAppShare on FacebookShare on Telegram

ಆಪರೇಷನ್‌ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಆದಾಗ ಯೋಗೇಶ್ವರ್‌ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಆ ಬಳಿಕ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದ ಯೋಗೇಶ್ವರ್‌ಗೆ ಆಶ್ಚರ್ಯ ಕಾದಿತ್ತು. ಆ ಬಳಿಕ ಸಿಎಂ ಯಡಿಯೂರಪ್ಪ ಬಳಿ ಜೋರಾಗಿಯೇ ಗುಡುಗಿದ್ದರು ಎನ್ನಲಾಗಿತ್ತು. ವಿಜಯೇಂದ್ರ ಆಪ್ತನಾಗಿದ್ದ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ ಏನು ಎನ್ನುವ ಬಗ್ಗೆಯೂ ಬಹಳ ಚರ್ಚೆ ನಡೆದಿತ್ತು. ಇದೀಗ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗದೇ ಇರಲು ಕಾರಣ ಏನು ಎನ್ನುವುದು ತಿಳಿದು ಬಂದಿದೆ.

ADVERTISEMENT

ಕನಕಪುರದ ಹಾರೋಬೆಲೆಯಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಏಸು ಕ್ರಿಸ್ತನ ಮೂರ್ತಿಯ ಪ್ರತಿಮೆ ಮಾಡಲು ಸಹಾಯ ಮಾಡಿದ್ದರು. ಕಳೆದ ಡಿಸೆಂಬರ್‌ 25ರಂದು ಕ್ರಿಸ್ತನ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆಯನ್ನೂ ನೆರವೇರಿಸಲಾಗಿತ್ತು. ಆ ಬಳಿಕ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದ ರಾಜ್ಯ ಸರ್ಕಾರ, ಹಾರೋಬೆಲೆ ಬೆಟ್ಟ ಶಿವನಬೆಟ್ಟ, ಅಲ್ಲಿ ಕ್ರೈಸ್ತರು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವು ಸಚಿವರು ಆರೋಪಿಸಿದ್ದರು. ಆ ಬಳಿಕ ಜಿಲ್ಲಾಧಿಕಾರಿಯಿಂದ ವರದಿಯನ್ನೂ ಕೇಳಲಾಗಿತ್ತು. ಏಕಾಏಕಿ ತಹಶೀಲ್ದಾರ್‌ ವರ್ಗಾವಣೆ ಮಾಡುವ ಮೂಲಕ ಅಚ್ಚರಿಯ ಘಟನೆಗಳೂ ನಡೆಯಿತು. ರಾಮನಗರ ಜಿಲ್ಲಾಧಿಕಾರಿ ಕಂದಾಯ ಸಚಿವರಿಗೆ ಇಂದು ವರದಿ ಸಲ್ಲಿಸಿದ್ದಾರೆ. ಇದನ್ನೇ ತನ್ನ ರಾಜಕೀಯ ಬೆಳವಣಿಗೆಗೆ ಮೆಟ್ಟಿಲು ಮಾಡಿಕೊಳ್ಳಲು ಮುಂದಾದ ಸಿ.ಪಿ ಯೇಗೇಶ್ವರ್‌ ಸಚಿವ ಸ್ಥಾನ ಕಳೆದುಕೊಂಡರು ಎನ್ನಲಾಗುತ್ತಾ ಇದೆ.

ಸರ್ಕಾರದಿಂದ ಹಾರೋಬೆಲೆಯಲ್ಲಿ ಕ್ರಿಸ್ತ ಮೂರ್ತಿ ಸ್ಥಾಪನೆಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಯೋಗೇಶ್ವರ್‌, ರಾಮನಗರಕ್ಕೆ ಸಂಘ ಪರಿವಾರವನ್ನು ತರುವಲ್ಲಿ ಯಶಸ್ವಿಯಾದರು. ಆರ್‌ಎಸ್‌ಎಸ್‌ ಸಂಘಟನೆ ಮೂಲಕ ಹೋರಾಟ ರೂಪಿಸಿದ ಸಿ.ಪಿ ಯೋಗೇಶ್ವರ್‌, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಕನಕಪುರಕ್ಕೆ ಕರೆದುಕೊಂಡು ಬಂದು ದೊಡ್ಡ ಹೋರಾಟ ಮಾಡಲು ಯೋಜನೆ ರೂಪಿಸಿ ಭಾಗಶಃ ಯಶಸ್ಸನ್ನೂ ಕಂಡರು. ಆ ನಂತರ ಆರ್‌ಎಸ್‌ಎಸ್‌ ಪಥಸಂಚಲನ ಮಾಡುವ ಮೂಲಕ ಡಿ.ಕೆ ಶಿವಕುಮಾರ್‌ಅವರ ವಿರುದ್ಧ ಸಿ.ಪಿ ಯೋಗೇಶ್ವರ್‌ ತೊಡೆ ತಟ್ಟಿದ್ದರು.

ಡಿ.ಕೆ ಶಿವಕುಮಾರ್‌ ಕ್ರಿಸ್ತ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ಮಾಡುತ್ತಿದ್ದಂತೆ, ಆರ್‌. ಅಶೋಕ್‌, ಡಿಸಿಎಂ ಅಶ್ವತ್ಥ ನಾರಾಯಣ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದು ದೊಡ್ಡ ವಿವಾದ ಸ್ವರೂಪ ಪಡೆಯುವ ಮುನ್ಸೂಚನೆ ಅರಿತಿದ್ದ ಸಿಎಂ ಯಡಿಯೂರಪ್ಪ, ಕ್ರಿಸ್ತ ಮೂರ್ತಿ ಸ್ಥಾಪನೆ ಬಗ್ಗೆ ಹೇಳಿಕೆ ಕೊಡುವುದು ಬೇಡ, ಅನಿವಾರ್ಯವಾದರೆ ಆಲೋಚನೆ ಮಾಡಿ ಮಾತನಾಡಿ ಎಂದ ಸಂದೇಶ ಕೊಟ್ಟಿದ್ದರು. ಆದರೂ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್‌ ಸಂಘ ಪರಿವಾರವನ್ನು ಎಳೆದು ತಂದು ವಿವಾದಕ್ಕೆ ತುಪ್ಪ ಸುರಿದರು. ಈ ನಡೆ ಯಡಿಯೂರಪ್ಪ ಅವರ ಕಣ್ಣು ಕೆಂಪಾಗುವಂತೆ ಮಾಡಿತ್ತು ಎನ್ನಲಾಗಿದೆ. ಡಿ.ಕೆ ಶಿವಕುಮಾರ್‌ ಹಾಗು ಬಿಎಸ್‌ಯಡಿಯೂರಪ್ಪ, ರಾಜಕಾರಣ ಹೊರತುಪಡಿಸಿ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಹೀಗಿದ್ದರೂ ಡಿ.ಕೆ ಶಿವಕುಮಾರ್‌ ಮೇಲೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಕೈ ಹಾಕಿದ್ದರಿಂದಲೇ ಸಚಿವ ಸ್ಥಾನ ತಪ್ಪಿಹೋಯ್ತು. ಇದೀಗ ಆರ್‌ಎಸ್‌ಎಸ್‌ ನಾಯಕರ ಮೂಲಕವೇ ಸಿ.ಪಿ ಯೋಗೇಶ್ವರ್‌ ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ ಎನ್ನಲಾಗ್ತಿದೆ.

Tags: B S YedyurappaB Y VijayendraC P YogeshwarcabinetD K Shivakumarಬಿ.ವೈ.ವಿಜಯೇಂದ್ರಯಡಿಯೂರಪ್ಪಸಚಿವ ಸ್ಥಾನಸಿ ಪಿ ಯೋಗೇಶ್ವರ್‌
Previous Post

ದೆಹಲಿ ಹಿಂಸಾಚಾರ: ಸಿಎಎ ಪರ ಹೋರಾಟ ಎಂದರೆ ಏನು?

Next Post

ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?

Related Posts

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ
Top Story

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ

by ಪ್ರತಿಧ್ವನಿ
July 5, 2026
0

ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ...

Read moreDetails
ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

July 5, 2026
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
Next Post
ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?

ಕರೋನಾ ವೈರಾಣುಗಳು ಹಬ್ಬಿದ್ದು ಚೀನಾದ ಟಾಪ್ ಪ್ರಯೋಗಾಲಯದಿಂದಲೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada