ನವದೆಹಲಿ: ದೇಶದ ಪ್ರಮುಖ ಪ್ರಕರಣಗಳನ್ನು ಭೇದಿಸುವ ನಂಬರ್ ಒನ್ ತನಿಖಾ ಸಂಸ್ಥೆ ಎಂದು ಕರೆಯಲ್ಪುಡ ಸಿಬಿಐ (CBI) ನಲ್ಲಿ ಈಗ ಲೋಪ ಕಂಡುಬಂದಿದೆ. ಅನುಮಾನಸ್ಪದ ಪ್ರಕರಣದಲ್ಲಿ ಸುಮಾರು 45 ಕೋಟಿ ಮೌಲ್ಯದ 103 ಕೆ.ಜಿ ಚಿನ್ನ ಭಾರತದ ಪ್ರಧಾನ ತನಿಖಾ ಸಂಸ್ಥೆಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ನ ಸುರಕ್ಷಿತ ಕಸ್ಟಡಿಯಿಂದ ಕಾಣೆಯಾಗಿದೆ.
ಸಿಬಿಐ 2012ರಲ್ಲಿ ಚೆನ್ನೈ ಮೂಲದ ಆಮದುದಾರರಿಂದ ಈ ಚಿನ್ನವನ್ನು ವಶಪಡಿಸಿಕೊಂಡಿತ್ತು.ಇದೀಗ ಕಾಣೆಯಾದ 103 ಕೆಜಿ ಚಿನ್ನ 400.47 ಕೆಜಿ ಚಿನ್ನಾಭರಣ ಮತ್ತು ಆಭರಣಗಳ ಭಾಗವಾಗಿದ್ದು, CВІ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ನ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಚಿನ್ನವಾಗಿದೆ.
ಈ ವಿಷಯವನ್ನು ಗಮನಿಸಿದ ಮದ್ರಾಸ್ ಹೈಕೋರ್ಟ್, ಈ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಕ್ರೈಂ ಬ್ರಾಂಚ್-ಸಿಐಡಿ ಪೊಲೀಸರಿಗೆ ಆದೇಶಿಸಿದೆ. ಎಸ್ಪಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು ಮತ್ತು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣ ಸಿಬಿಐಗೆ ಅಗ್ನಿ ಪರೀಕ್ಷೆಯಾಗಿಪರಿಣಮಿಸಿದೆ. 2012 ರಲ್ಲಿ, ಸಿಬಿಐ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಮತ್ತು 400.47 ಕೆಜಿ ಚಿನ್ನ (ಆಭರಣಗಳು ಸೇರಿದಂತೆ) ಕಚೇರಿಗಳ ಮೇಲೆ ದಾಳಿ ನಡೆಸಿತು. ಇದರ ನಂತರ, ಚಿನ್ನವನ್ನು ಸುರಾನಾ ಕಾರ್ಪೊರೇಷನ್ ಲಿಮಿಟೆಡ್ನ ತಿಜೋರಿಗಳು ಮತ್ತು ಕಮಾನುಗಳಲ್ಲಿ ಇರಿಸಲಾಗಿತ್ತು.