ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರುತ್ತವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
![](https://pratidhvani.in/wp-content/uploads/2021/02/WhatsApp_Image_2020_05_30_at_11_44_19_AM-1.jpeg)
ಭಾನುವಾರದ ಲಾಕ್ಡೌನ್ ಇರುವುದಿಲ್ಲದರಿಂದ ಎಂದಿನಂತೆ ದೈನಂದಿನ ಚಟುವಟಿಕೆ ಇರಲಿದೆ. ಬಸ್ ಸಂಚಾರ ಯಥಾಸ್ಥಿತಿ ಮುಂದುವರೆಯಲಿದೆ. ಆಟೋ, ಕ್ಯಾಬ್ ವ್ಯವಸ್ಥೆ ಇರಲಿದೆ ಹಾಗೂ ವ್ಯಾಪಾರ ವಹಿವಾಟಿಗೆ ಅಡ್ಡಿಯಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ.
ಕಳೆದ ವಾರ ಲಾಕ್‌ಡೌನ್ 4.0 ದಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರದಂದು ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ನಗರವನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಲಾಕ್‌ಡೌನ್ 4.0 ದಲ್ಲಿ ಭಾನುವಾರ ಮಾತ್ರ ಲಾಕ್ಡೌನ್ 1 ಮತ್ತು 2 ರ ನಿಯಮಗಳನ್ನು ಹೇರಲಾಗಿತ್ತು. ಅದರಂತೆ ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದ ಇನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಲಾಗಿತ್ತು.