• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶಾಹೀನ್ ಬಾಗ್: ಪ್ರತಿಭಟನೆಗೆ ಸಾರ್ವಜನಿಕ ಸ್ಥಳವನ್ನು ಆಕ್ರಮಿಸುವುದು ಸ್ವೀಕಾರಾರ್ಹವಲ್ಲ- ಸುಪ್ರೀಂ

by
October 7, 2020
in ದೇಶ
0
ಶಾಹೀನ್ ಬಾಗ್: ಪ್ರತಿಭಟನೆಗೆ ಸಾರ್ವಜನಿಕ ಸ್ಥಳವನ್ನು ಆಕ್ರಮಿಸುವುದು ಸ್ವೀಕಾರಾರ್ಹವಲ್ಲ- ಸುಪ್ರೀಂ
Share on WhatsAppShare on FacebookShare on Telegram

ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಭಟಿಸುವ ಹಕ್ಕು ʼಪರಿಪೂರ್ಣವಲ್ಲʼ ಹಾಗೂ ಪ್ರತಿಭಟನೆಗಳಿಗಾಗಿ ಸಾರ್ವಜನಿಕ ಪ್ರದೇಶವನ್ನು ಅನಿರ್ದಿಷ್ಟಾವಧಿ ಆಕ್ರಮಿಸಿಕೊಳ್ಳುವುದು ಒಪ್ಪಿತಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ADVERTISEMENT

Also Read: ಬಿಜೆಪಿಗೆ ಶಾಹೀನ್ ಬಾಗ್ ಚುನಾವಣೆ ಅಸ್ತ್ರವೇ? 

ಸಿಎಎ ಎನ್‌ಆರ್‌ಸಿ ವಿರೋಧಿಸಿ ಶಾಹೀನ್‌ ಭಾಗ್‌ ನ ಹೋರಾಟದಲ್ಲಿ ಉಂಟಾದ ರಸ್ತೆ ಅಡಚಣೆ ಹಾಗೂ ಸಾರ್ವಜನಿಕರಿಗೆ ಎದುರಾದ ತೊಂದರೆಗಳನ್ನು ಎತ್ತಿ ತೋರಿಸುವ ಪ್ರಕರಣದ ವಿಚಾರಣೆ ನಡೆಸಿದ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ತ್ರಿಸದಸ್ಯ ಪೀಠವು, ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಜೊತೆಗೆ ಸಾಗುತ್ತದೆ, ಆದರೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಪ್ರತಿಭಟನೆಗಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು” ಎಂದು ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಸರ್ಕಾರಿ ಅಧಿಕಾರಿಗಳು ಹೇಗಾದರೂ ಸಾರ್ವಜನಿಕ ಪ್ರದೇಶಗಳನ್ನು ಆಕ್ರಮಿಸಿಕೊಂಡ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಬೇಕು. ಇದಕ್ಕಾಗಿ ನ್ಯಾಯಾಲಯದ ಆದೇಶಕ್ಕೆ ಕಾದು ಕೂರಬಾರದು ಎಂದೂ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ಸಿಎಎಯನ್ನು ವಿರೋಧಿಸುವವರು ಶಾಹೀನ್ ಬಾಗ್‌ನಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ʼಶಾಹೀನ್ ಬಾಗ್ – ಕಲಿಂದಿ ಕುಂಜ್ʼ ರಸ್ತೆಯಲ್ಲಿ ಉಂಟಾದ ತಡೆಯನ್ನು ತೆಗೆದುಹಾಕುವಂತೆ ಕೋರಿ ವಕೀಲ ಅಮಿತ್ ಸಾಹ್‌ನಿ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಮನವಿಯ ಮೇರೆಗೆ ಈ ತೀರ್ಪು ಬಂದಿದೆ.

Also Read: ʼಟೈಮ್ಸ್ 2020ʼಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಶಾಹೀನ್ ಭಾಗ್‌ನ ಬಿಲ್ಕಿಸ್

2019 ರ ಡಿಸೆಂಬರ್‌ 12 ರಂದು ಅಂಗೀಕಾರಗೊಂಡ 1955 ರ ಪೌರತ್ವ ಕಾಯ್ದೆಯ ತಿದ್ದುಪಡಿ ಮಸೂದೆಯ ವಿರುದ್ಧ ದೇಶವ್ಯಾಪಿ ಜನರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ತಂದಿರುವ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜಕೀಯ ಚಿಂತಕರು, ಸಾಮಾಜಿಕ ಹೋರಾಟಗಾರರು ಕೂಡಾ ಸಕ್ರಿಯವಾಗಿ ಪಾಲ್ಗೊಂಡಿದ್ದರು. ದೇಶದಾದ್ಯಂತ ನಡೆದ ಪ್ರತಿಭಟನೆಗೆ ಶಾಹೀನ್‌ ಭಾಗ್‌ ನಲ್ಲಿ ನಡೆಯುತ್ತಿದ್ದ ನಿರಂತರ ಪ್ರತಿಭಟನೆ ಪ್ರೇರಕ ಶಕ್ತಿಯಾಗಿ ರೂಪುಗೊಂಡಿತ್ತು.

Also Read: ಸಿಎಎ ಜಪದ ಮುಂದೆ ಕಳೆಗುಂದಿದ ರಫ್ತು ಕ್ಷೇತ್ರ!

ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್‌ನಲ್ಲಿ 2019 ರ ಡಿಸೆಂಬರ್ 15 ರಂದು ಪ್ರಾರಂಭವಾದ ಪ್ರತಿಭಟನೆ 3 ತಿಂಗಳಿಗೂ ಹೆಚ್ಚು ಕಾಲ ಮುಂದುವರೆಯಿತು. ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರತಿಭಟನಾ ಧರಣಿಯನ್ನು ಸ್ಥಗಿತಗೊಳಿಸಲಾಗಿತ್ತು.

Tags: ‌ supreme courtShaheen Baghಶಾಹೀನ್ ಬಾಗ್ಸುಪ್ರೀಂ ಕೋರ್ಟ್
Previous Post

ಕೃಷಿ ಮಸೂದೆ ತಿದ್ದುಪಡಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ ತಡೆಯಲು ಕಾಂಗ್ರೆಸ್ ಯೋಜನೆ

Next Post

ಮಾಸ್ಕ್‌ ದಂಡ ಕಡಿತಗೊಳಿಸಿದ ಸರ್ಕಾರ

Related Posts

Top Story

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು: ಭಾಗ ೧

by ನಾ ದಿವಾಕರ
August 18, 2026
0

ಭಾರತ 21ನೆಯ ಶತಮಾನವನ್ನು ಪ್ರವೇಶಿಸಿದಾಗ ಸಾಮಾನ್ಯ ಜನರಲ್ಲೂ ಒಂದು ರೀತಿಯ ಕುತೂಹಲ, ಉತ್ಕಟ ಆಕಾಂಕ್ಷೆಗಳು, ಕನಸುಗಳು ಹಾಗೂ ವೈಯುಕ್ತಿಕ ಬದುಕಿನಲ್ಲಿ ಮಹತ್ತರ ಸುಧಾರಣೆಗಳ ಭ್ರಮೆಗಳು ಗರಿಗೆದರಿದ್ದವು. 2000ದ...

Read moreDetails
ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

August 17, 2026
ʼಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆʼ ಸಂಪೂರ್ಣ ಸುಳ್ಳು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ

ʼಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆʼ ಸಂಪೂರ್ಣ ಸುಳ್ಳು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ

August 17, 2026
ಬಿಜೆಪಿಗೆ ಬಿಗ್‌ ಶಾಕ್‌: ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ

ಬಿಜೆಪಿಗೆ ಬಿಗ್‌ ಶಾಕ್‌: ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ

August 17, 2026
ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು

ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು

August 17, 2026
Next Post
ಮಾಸ್ಕ್‌ ದಂಡ ಕಡಿತಗೊಳಿಸಿದ ಸರ್ಕಾರ

ಮಾಸ್ಕ್‌ ದಂಡ ಕಡಿತಗೊಳಿಸಿದ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada