• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ: ಭೀತಿಯಲ್ಲಿ ಸುತ್ತಮುತ್ತಲಿನ ಜನ

by
May 7, 2020
in ದೇಶ
0
ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ: ಭೀತಿಯಲ್ಲಿ ಸುತ್ತಮುತ್ತಲಿನ ಜನ
Share on WhatsAppShare on FacebookShare on Telegram

ನೆರೆ ರಾಜ್ಯ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ಲಾಸ್ಟಿಕ್‌ ತಯಾರಿಕಾ ಕಂಪೆನಿಯಿಂದ ವಿಷಾನಿಲ ಸೋರಿಕೆಯಾಗಿದ್ದು ಹಲವು ಸಾವು-ನೋವುಗಳು ಸಂಭವಿಸಿರುವ ಕುರಿತು ವರದಿಯಾಗಿದೆ. ಬೆಳಗ್ಗಿನ ಜಾವ ಸುಮಾರು 2.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಇಲ್ಲಿಯವರೆಗೆ ಆರು ವರ್ಷದ ಮಗು ಸಹಿತ ಸುಮಾರು ಎಂಟು ಜನರು ಸಾವನ್ನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಷ್ಟು ಮಾತ್ರವಲ್ಲದೇ, ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ.

LG Polymers, ಎಂಬ ಕಂಪೆನಿಯ ಪ್ಲಾಸ್ಟಿಕ್‌ ತಯಾರಕಾ ಘಟಕದಿಂದ ಸ್ಟೈರೀನ್‌ ಅನಿಲ (Styrene Gas) ಸೋರಿಕೆಯಾಗಿದ್ದು, ಲಾಕ್‌ಡೌನ್‌ ನಂತರ ಕಂಪೆನಿಯನ್ನು ಆರಂಭಿಸಲು ತಯಾರಿ ನಡೆಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಸ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 40 ದಿನಗಳಿಂದ ಈ ಕೈಗಾರಿಕಾ ಘಟಕವು ಲಾಕ್‌ಡೌನ್‌ನಿಂದಾಗಿ ಮುಚ್ಚಲ್ಪಟ್ಟಿತ್ತು, ಆದರೆ, ಘಟಕದ ನಿರ್ವಹಣೆಗಾಗಿ ಕೆಲವೇ ಕೆಲವು ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಅತೀ ಹೆಚ್ಚು ಭಾಧಿತವಾಗಿರುವ ಹಳ್ಳಿಯೆಂದರೆ, ಘಟನಾ ಸ್ಥಳದಿಂದ ಸುಮಾರು ಒಂದೂವರೆ ಸುತ್ತಳತೆಯಲ್ಲಿರುವ ವೆಂಕಟಪುರಂ ಎಂಬ ಹಳ್ಳಿ. ಸಾವಿರಕ್ಕೂ ಹೆಚ್ಚು ಜನರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಅಕ್ಕಪಕ್ಕದ ಐದು ಹಳ್ಳಿಗಳಲ್ಲಿ ವಾಸವಾಗಿದ್ದವರನ್ನು ಕೂಡಾ ಭದ್ರತಾ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅನಿಲ ಸೋರಿಕೆಯಿಂದಾಗಿ ಕೈಗಾರಿಕಾ ಘಟಕದ ಅಕ್ಕಪಕ್ಕದಲ್ಲಿರುವ ಸುಮಾರು ಒಂಬತ್ತು ಹಳ್ಳಿಗಳಿಗೆ ತೊಂದರೆಯುಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“5000 ಟನ್‌ ಸಾಮರ್ಥ್ಯದ ಟ್ಯಾಂಕ್‌ಗಳಿಂದ ಅನಿಲ ಸೋರಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಆ ಟ್ಯಾಂಕ್‌ಗಳನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಇದರಿಂದಾಗಿ, ಟ್ಯಾಂಕ್‌ಗಳ ಒಳಗೆ ರಸಾಯನಿಕ ಪ್ರಕ್ರಿಯೆ ಆರಂಭವಾಗಿ, ಉಷ್ಣಾಂಶ ಹೆಚ್ಚಾದ ಕಾರಣ ಅನಿಲ ಸೋರಿಕೆಯಾಗಿದೆ,” ಎಂದು ವಿಶಾಖಪಟ್ಟಣಂನ ಪಶ್ಚಿಮ ವಲಯದ ಎಸಿಪಿ ನ್ಯೂಸ್‌ 18 ಗೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಘಟನೆಯಿಂದ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಆಸ್ಪತ್ರೆಗಳಿಗೆ ಆಂಧ್ರ ಸಿಎಂ ಜಗನ್‌ಮೋಹನ್‌ ರೆಡ್ಡಿ ಭೇಟಿ ನೀಡಲಿದ್ದಾರೆ.

Hon'ble CM @ysjagan will leave for Vizag to visit the hospital where the affected are being treated.

The Chief Minister is closely monitoring the situation and has directed the district officials to take every possible step to save lives and bring the situation under control.

— CMO Andhra Pradesh (@AndhraPradeshCM) May 7, 2020


ADVERTISEMENT
Tags: Gas leakindustryLG PloymersVizagಅನಿಲ ಸೋರಿಕೆಕೈಗಾರಿಕಾ ಘಟಕವಿಶಾಖಪಟ್ಟಣಂವಿಷಾನಿಲ ಸೋರಿಕೆ
Previous Post

ನಗರದ ಬೀದಿಗಳ ʼಸ್ಯಾನಿಟೈಸ್‌ʼನಿಂದ ನಿಜಕ್ಕೂ ಕರೋನಾ ದೂರವಾಗುವುದೇ?

Next Post

ಬುದ್ಧ ಪೂರ್ಣಿಮೆ ವಿಶೇಷ: ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ…

Related Posts

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ
Top Story

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

by ಪ್ರತಿಧ್ವನಿ
August 20, 2026
0

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ದೆಹಲಿಯಲ್ಲಿ ನಿಧನರಾದರು. https://youtu.be/Ah4XCyz6goI?si=e8Kk4S1jxvCTF1TS ತಿಹಾರ್...

Read moreDetails
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

August 20, 2026
‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

August 20, 2026
ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

August 20, 2026
ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

August 19, 2026
Next Post
ಬುದ್ಧ ಪೂರ್ಣಿಮೆ ವಿಶೇಷ: ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ...

ಬುದ್ಧ ಪೂರ್ಣಿಮೆ ವಿಶೇಷ: ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ...

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada