ಬಂಧಿಸಲು ತೆರಳಿದ ಎಂಟು ಪೋಲಿಸರನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ಧುಬೆಯನ್ನು ಪೋಲಿಸರು ಬಂಧಿಸಿದ್ದಾರೆ. ಮಧ್ಯಪ್ರದೇಶ, ಉಜ್ಜಯಿನಿಯ ಮಹಾಕಾಳ್ ದೇವಸ್ಥಾನದಲ್ಲಿದ್ದ ವಿಕಾಸ್ ದುಬೆಯನ್ನು ಅಲ್ಲಿನ ಭದ್ರತಾ ಸಿಬ್ಬಂಧಿ ಗುರುತಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಭಧ್ರತಾ ಸಿಬ್ಬಂದಿ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೋಲಿಸರು ಸಿನಿಮೀಯ ರೀತಿಯಲ್ಲಿ ಕ್ರಿಮಿನಲ್‌ನ್ನು ಬಂಧಿಸಿದ್ದಾರೆ.
ಅದಕ್ಕೂ ಮೊದಲು ಪೂಜೆಗೆ ತೆರಳುವ ಸಿದ್ಧತೆಯಲ್ಲಿದ್ದ ದುಬೆ, ಸ್ಥಳೀಯ ಅಂಗಡಿಯೊಂದರಿಂದ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದ್ದಾನೆ, ಈತನ ಕುರಿತು ಅನುಮಾನ ಬಂದು ಅಂಗಡಿಯಾತ ದೇವಸ್ಥಾನದ ಭದ್ರತಾ ಸಿಬ್ಬಂಧಿಗೆ ಈತನ ಬಗ್ಗೆ ಸುಳಿವು ನೀಡಿದ್ದಾರೆ. ಸದ್ಯ ಮಧ್ಯ ಪ್ರದೇಶದ ಕಸ್ಟಡಿಯಲ್ಲಿರುವ ದುಬೆಯನ್ನು ಪೋಲಿಸರು ಉತ್ತರ ಪ್ರದೇಶದ ಪೋಲಿಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ವಿಕಾಸ್ ದುಭೆಯ ಮೇಲೆ ಉತ್ತರ ಪ್ರದೇಶ, ಹರ್ಯಾಣ, ದೆಹಲಿ ಹಾಗೂ ಮಧ್ಯ ಪ್ರದೇಶದ ಪೋಲಿಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಸುಮಾರು 60 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿವೆ. ಜುಲೈ 3 ರಂದು ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದ ಉತ್ತರ ಪ್ರದೇಶದ 8 ಪೋಲಿಸರನ್ನು ದುಬೆ ಹಾಗೂ ಸಂಗಡಿಗರು ಸೇರಿ ಹತ್ಯೆಗೈದಿದ್ದರು.
#WATCH Madhya Pradesh: After arrest in Ujjain, Vikas Dubey confesses, “Main Vikas Dubey hoon, Kanpur wala.” #KanpurEncounter pic.twitter.com/bIPaqy2r9d
— ANI (@ANI) July 9, 2020
ಅದಾಗ್ಯೂ, ವಿಕಾಸ್ ದುಬೆ ಬಂಧನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಅನುಮಾನಗಳು ಎದ್ದಿವೆ. ಹರ್ಯಾಣದ ಫರೀದಾಬಾದ್‌ನಲ್ಲಿರುವ ಒಂದು ಹೋಟೆಲಿನಲ್ಲಿ ವಿಕಾಸ್ ಇರುವುದು ಜನರ ಕಣ್ಣಿಗೆ ಬಿದ್ದಿತ್ತು, ಆದರೂ ಆತನನ್ನು ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಹೇಗೆ ಬಂಧಿಸಿದ್ದಾರೆಂದು ಪ್ರಶ್ನೆಗಳೆದ್ದಿವೆ. ಇದರ ಬೆನ್ನಿಗೆ “ಇಷ್ಟು ದೊಡ್ಡ ಘಟನೆಯಾದ ಬಳಿಕವೂ ಆತನನ್ನು ಬಂಧಿಸಲು ನಮಗೆ ಸಾಧ್ಯವಾಗಲಿಲ್ಲ. ಆತ ಪ್ರಯಾಣಿಸುತ್ತಲೇ ಇದ್ದ. ಈ ಕುರಿತು ತನಿಖೆಯಾಗಬೇಕು” ಎಂದು ಉತ್ತರ ಪ್ರದೇಶದ IPS ಅಧಿಕಾರಿ ಅಮಿತಾಭ್ ಠಾಕೂರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
हम विकास दूबे को गिरफ्तार नहीं कर पाए और वह उज्जैन में सरेंडर हो गया. इतनी बड़ी घटना के बाद भी हम उसे अरेस्ट नहीं कर सके…
Posted by Amitabh Thakur on Wednesday, July 8, 2020
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಈ ಕುರಿತು ಪ್ರಶ್ನೆಗಳನ್ನೆತ್ತಿದ್ದು, ಕಾನ್ಪುರ್ ಹತ್ಯಾಕಾಂಡದ ಮುಖ್ಯ ಆರೋಪಿ ಈಗ ಪೊಲೀಸ್ ವಶದಲ್ಲಿದ್ದಾನೆ ಎಂದು ವರದಿಯಾಗಿದೆ. ನಿಜವಾಗಿದ್ದರೆ, ಇದು ಶರಣಾಗತಿ ಅಥವಾ ಬಂಧನವೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಅಲ್ಲದೆ ಅವರ ಕರೆ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಆದ್ದರಿಂದ ನೆಕ್ಸಸ್ ಅನ್ನು ಬಹಿರಂಗಪಡಿಸಬಹುದು” ಎಂದು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ख़बर आ रही है कि ‘कानपुर-काण्ड’ का मुख्य अपराधी पुलिस की हिरासत में है. अगर ये सच है तो सरकार साफ़ करे कि ये आत्मसमर्पण है या गिरफ़्तारी. साथ ही उसके मोबाइल की CDR सार्वजनिक करे जिससे सच्ची मिलीभगत का भंडाफोड़ हो सके.
— Akhilesh Yadav (@yadavakhilesh) July 9, 2020