• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಿಕಾಸ್‌ ದುಭೆ ಬಂಧನದ ಸುತ್ತ ಅನುಮಾನಗಳೇಕೆ?

by
July 9, 2020
in ದೇಶ
0
ವಿಕಾಸ್‌ ದುಭೆ ಬಂಧನದ ಸುತ್ತ ಅನುಮಾನಗಳೇಕೆ?
Share on WhatsAppShare on FacebookShare on Telegram

ಬಂಧಿಸಲು ತೆರಳಿದ ಎಂಟು ಪೋಲಿಸರನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ಧುಬೆಯನ್ನು ಪೋಲಿಸರು ಬಂಧಿಸಿದ್ದಾರೆ. ಮಧ್ಯಪ್ರದೇಶ, ಉಜ್ಜಯಿನಿಯ ಮಹಾಕಾಳ್‌ ದೇವಸ್ಥಾನದಲ್ಲಿದ್ದ ವಿಕಾಸ್‌ ದುಬೆಯನ್ನು ಅಲ್ಲಿನ ಭದ್ರತಾ ಸಿಬ್ಬಂಧಿ ಗುರುತಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಭಧ್ರತಾ ಸಿಬ್ಬಂದಿ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೋಲಿಸರು ಸಿನಿಮೀಯ ರೀತಿಯಲ್ಲಿ ಕ್ರಿಮಿನಲ್‌ನ್ನು ಬಂಧಿಸಿದ್ದಾರೆ.

ಅದಕ್ಕೂ ಮೊದಲು ಪೂಜೆಗೆ ತೆರಳುವ ಸಿದ್ಧತೆಯಲ್ಲಿದ್ದ ದುಬೆ, ಸ್ಥಳೀಯ ಅಂಗಡಿಯೊಂದರಿಂದ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದ್ದಾನೆ, ಈತನ ಕುರಿತು ಅನುಮಾನ ಬಂದು ಅಂಗಡಿಯಾತ ದೇವಸ್ಥಾನದ ಭದ್ರತಾ ಸಿಬ್ಬಂಧಿಗೆ ಈತನ ಬಗ್ಗೆ ಸುಳಿವು ನೀಡಿದ್ದಾರೆ. ಸದ್ಯ ಮಧ್ಯ ಪ್ರದೇಶದ ಕಸ್ಟಡಿಯಲ್ಲಿರುವ ದುಬೆಯನ್ನು ಪೋಲಿಸರು ಉತ್ತರ ಪ್ರದೇಶದ ಪೋಲಿಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ವಿಕಾಸ್‌ ದುಭೆಯ ಮೇಲೆ ಉತ್ತರ ಪ್ರದೇಶ, ಹರ್ಯಾಣ, ದೆಹಲಿ ಹಾಗೂ ಮಧ್ಯ ಪ್ರದೇಶದ ಪೋಲಿಸ್‌ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಸುಮಾರು 60 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿವೆ. ಜುಲೈ 3 ರಂದು ವಿಕಾಸ್‌ ದುಬೆಯನ್ನು ಬಂಧಿಸಲು ತೆರಳಿದ್ದ ಉತ್ತರ ಪ್ರದೇಶದ 8 ಪೋಲಿಸರನ್ನು ದುಬೆ ಹಾಗೂ ಸಂಗಡಿಗರು ಸೇರಿ ಹತ್ಯೆಗೈದಿದ್ದರು.

#WATCH Madhya Pradesh: After arrest in Ujjain, Vikas Dubey confesses, “Main Vikas Dubey hoon, Kanpur wala.” #KanpurEncounter pic.twitter.com/bIPaqy2r9d

— ANI (@ANI) July 9, 2020


ಅದಾಗ್ಯೂ, ವಿಕಾಸ್‌ ದುಬೆ ಬಂಧನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಅನುಮಾನಗಳು ಎದ್ದಿವೆ. ಹರ್ಯಾಣದ ಫರೀದಾಬಾದ್‌ನಲ್ಲಿರುವ ಒಂದು ಹೋಟೆಲಿನಲ್ಲಿ ವಿಕಾಸ್‌ ಇರುವುದು ಜನರ ಕಣ್ಣಿಗೆ ಬಿದ್ದಿತ್ತು, ಆದರೂ ಆತನನ್ನು ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಹೇಗೆ ಬಂಧಿಸಿದ್ದಾರೆಂದು ಪ್ರಶ್ನೆಗಳೆದ್ದಿವೆ. ಇದರ ಬೆನ್ನಿಗೆ “ಇಷ್ಟು ದೊಡ್ಡ ಘಟನೆಯಾದ ಬಳಿಕವೂ ಆತನನ್ನು ಬಂಧಿಸಲು ನಮಗೆ ಸಾಧ್ಯವಾಗಲಿಲ್ಲ. ಆತ ಪ್ರಯಾಣಿಸುತ್ತಲೇ ಇದ್ದ. ಈ ಕುರಿತು ತನಿಖೆಯಾಗಬೇಕು” ಎಂದು ಉತ್ತರ ಪ್ರದೇಶದ IPS ಅಧಿಕಾರಿ ಅಮಿತಾಭ್‌ ಠಾಕೂರ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

हम विकास दूबे को गिरफ्तार नहीं कर पाए और वह उज्जैन में सरेंडर हो गया. इतनी बड़ी घटना के बाद भी हम उसे अरेस्ट नहीं कर सके…

Posted by Amitabh Thakur on Wednesday, July 8, 2020

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಕೂಡ ಈ ಕುರಿತು ಪ್ರಶ್ನೆಗಳನ್ನೆತ್ತಿದ್ದು, ಕಾನ್ಪುರ್ ಹತ್ಯಾಕಾಂಡದ ಮುಖ್ಯ ಆರೋಪಿ ಈಗ ಪೊಲೀಸ್ ವಶದಲ್ಲಿದ್ದಾನೆ ಎಂದು ವರದಿಯಾಗಿದೆ. ನಿಜವಾಗಿದ್ದರೆ, ಇದು ಶರಣಾಗತಿ ಅಥವಾ ಬಂಧನವೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಅಲ್ಲದೆ ಅವರ ಕರೆ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಆದ್ದರಿಂದ ನೆಕ್ಸಸ್ ಅನ್ನು ಬಹಿರಂಗಪಡಿಸಬಹುದು” ಎಂದು ಯುಪಿ ಮಾಜಿ ಮುಖ್ಯಮಂತ್ರಿ‌ ಅಖಿಲೇಶ್‌ ಯಾದವ್ ಟ್ವೀಟ್ ಮಾಡಿದ್ದಾರೆ.

ख़बर आ रही है कि ‘कानपुर-काण्ड’ का मुख्य अपराधी पुलिस की हिरासत में है. अगर ये सच है तो सरकार साफ़ करे कि ये आत्मसमर्पण है या गिरफ़्तारी. साथ ही उसके मोबाइल की CDR सार्वजनिक करे जिससे सच्ची मिलीभगत का भंडाफोड़ हो सके.

— Akhilesh Yadav (@yadavakhilesh) July 9, 2020


ADVERTISEMENT
Previous Post

ಸರ್ಕಾರದಿಂದ ಯಾವುದೇ ತಪ್ಪು ನಡೆದಿಲ್ಲ, ಎಲ್ಲಾ ವ್ಯವಸ್ಥೆ ಮಾಡುತ್ತೇವೆ – ಡಿಸಿಎಂ

Next Post

ಕಾರ್ಯಕರ್ತರ ಕೊರಳಿಗೆ ಟ್ರ್ಯಾಕರ್ ಘಂಟೆ ಕಟ್ಟಿದ ಕೆಪಿಸಿಸಿ ನೂತನ ಸಾರಥಿ!

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಕಾರ್ಯಕರ್ತರ ಕೊರಳಿಗೆ ಟ್ರ್ಯಾಕರ್ ಘಂಟೆ ಕಟ್ಟಿದ ಕೆಪಿಸಿಸಿ ನೂತನ ಸಾರಥಿ!

ಕಾರ್ಯಕರ್ತರ ಕೊರಳಿಗೆ ಟ್ರ್ಯಾಕರ್ ಘಂಟೆ ಕಟ್ಟಿದ ಕೆಪಿಸಿಸಿ ನೂತನ ಸಾರಥಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada