• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಲಾಕ್‌ಡೌನ್‌ ವರದಿಗಾರಿಗೆ: ಮತ್ತೋರ್ವ ಪತ್ರಕರ್ತೆಯ ಮೇಲೆ ಎಫ್‌ಐಆರ್‌

by
June 19, 2020
in ದೇಶ
0
ಲಾಕ್‌ಡೌನ್‌ ವರದಿಗಾರಿಗೆ: ಮತ್ತೋರ್ವ ಪತ್ರಕರ್ತೆಯ ಮೇಲೆ ಎಫ್‌ಐಆರ್‌
Share on WhatsAppShare on FacebookShare on Telegram

ಸ್ವತಂತ್ರ ಪತ್ರಿಕೋದ್ಯಮವನ್ನು ಕಟ್ಟಿಹಾಕುವಂತೆ ತೋರುವ ಇನ್ನೊಂದು ಪ್ರಯತ್ನವನ್ನು ಯುಪಿ ಪೊಲೀಸರು ಮಾಡಿದ್ದಾರೆ. ಈ ಹಿಂದೆಯೂ ಇಂತಹುದೇ ಪ್ರಯತ್ನಗಳನ್ನು ಮಾಡಿ ಯಪಿ ಪೊಲೀಸರು ಕೈ ಸುಟ್ಟುಕೊಂಡಿದ್ದರು. ಈಗ ಮತ್ತೆ ಸ್ಕ್ರಾಲ್‌.ಇನ್‌ ಎನ್ನುವ ಸ್ವತಂತ್ರ ಸುದ್ದಿ ಜಾಲತಾಣದ ಕಾರ್ಯನಿರ್ವಾಹಕ ಸಂಪಾದಕಿ ಸುಪ್ರಿಯ ಶರ್ಮಾ ಹಾಗೂ ಮುಖ್ಯ ಸಂಪಾದಕರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿಯ ಡೊಮರಿ ಎಂಬಲ್ಲಿನ ಮಹಿಳೆಯೊಬ್ಬರ ಕುರಿತಾದ ಸುದ್ದಿಯನ್ನು ಸುಪ್ರಿಯ ಅವರು ಬರೆದಿದ್ದರು. ಮಾಲಾ ದೇವಿ ಎಂಬ ಮಹಿಳೆಯು ಅಗತ್ಯ ಸೇವೆಯು ಲಭಿಸದೇ ಯಾವ ರೀತಿ ಕಷ್ಟ ಪಡುತ್ತಿದ್ದರು ಎಂಬ ಕುರಿತು ಈ ವರದಿಯಲ್ಲಿ ಯಥಾವತ್ತಾಗಿ ದಾಖಲಿಸಲಾಗಿತ್ತು. ಆದರೆ, ಈಗ ಅದೇ ಮಹಿಳೆಯು ತನ್ನ ವರದಿಯನ್ನು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ದೂರು ನೀಡಿದ್ದಾರೆ.

ದೂರಿನ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ (1989)ಯ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್‌ 269 – ನಿರ್ಲ್ಯಕ್ಷತನದಿಂದ ಮಾರಣಾಂತಿಕ ಕಾಯಿಲೆಯನ್ನು ಹರಡುವಂತಹ ಕಾರ್ಯ ಮಾಡುವುದು ಮತ್ತು ಸೆಕ್ಷನ್‌ 501ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸುಪ್ರಿಯಾ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಬಹಳಷ್ಟು ವರದಿಗಳನ್ನು ನೀಡಿದ್ದರು. ಲಾಕ್‌ಡೌನ್‌ ಯಾವ ರೀತಿ ಬಡವರ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸಿದ್ದರು. ಇಂತಹುದೇ ಒಂದು ವರದಿಯಲ್ಲಿ ಡೊಮರಿ ಗ್ರಾಮಸ್ಥರು ಯಾವ ರೀತಿ ಹಸಿವಿನಿಂದ ದಿನ ದೂಡುತ್ತಿದ್ದಾರೆ ಎನ್ನುವ ಕುರಿತು ಬರೆದಿದ್ದರು. ಆ ವರದಿಯಲ್ಲಿ ಬಹಳಷ್ಟು ಜನರ ಸ್ಥಿತಿಗತಿಗಳ ಕುರಿತ ವಾಸ್ತಾವಿಕ ಚಿತ್ರಣವೂ ದಾಖಲಾಗಿತ್ತು.

ಸಂಸದರ ಆದರ್ಶ ಗ್ರಾಂ ಯೋಜನೆಯ ಅಡಿಯಲ್ಲಿ ಖುದ್ದು ಪ್ರಧಾನ ಮಂತ್ರಿಗಳೇ ದತ್ತು ಪಡೆದಂತಹ ಗ್ರಾಮ ಅದ್ದರಿಂದ, ಆ ವರದಿಯು ಬಹಳಷ್ಟು ಜನರ ಕಣ್ಣು ಕೆಂಪಾಗಿಸಿತ್ತು.

ಈ ವರದಿಯನ್ನು ಮಾಡುವ ಸಂದರ್ಭದಲ್ಲಿ ಡೊಮರಿ ಗ್ರಾಮದ ದಲಿತ ಕೂಲಿ ಕಾರ್ಮಿಕೆಯಾದ ಮಾಲಾ ದೇವಿ ಅವರನ್ನು ಕೂಡಾ ಸುಪ್ರಿಯಾ ಮಾತನಾಡಿಸಿದ್ದರು. ಮಾಲಾ ಅವರಿಗೆ ಜಿಲ್ಲಾಡಳಿತದಿಂದ ಯಾವುದೇ ನೆರವು ಸಿಕ್ಕದೇ ಇರುವ ಕುರಿತು ಉಲ್ಲೇಖಿಸಿ ವಾರಣಾಸಿಯ ಬೀದಿಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬರೆದಿದ್ದರು.

ಆದರೆ, ಮಾಲಾ ನೀಡಿರುವ ದೂರಿನಲ್ಲಿ ನಾನು ಈ ತರಹದ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೆಳಿದ್ದರು. ಅಷ್ಟು ಮಾತ್ರವಲ್ಲದೇ, ನನಗೆ ಯಾವುದೇ ತೊದರೆಯಿಲ್ಲ ಎಂದು ಹೇಳಿದ್ದೆ ಆದರೂ ನನ್ನ ಕುರಿತು ತಪ್ಪಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ.

“ನಾನು ಮತ್ತು ನ್ನ ಮಕ್ಕಳು ಹಸಿವಿನಿಂದ ನರಳಾಡುತ್ತಿದ್ದೇವೆಂದು ತಪ್ಪಾಗಿ ಬರೆದು ಸಮಾಜದಲ್ಲಿ ನನ್ನ ಕುರಿತು ಕೀಳರಿಮೆ ಮೂಡುವಂತೆ ಮಾಡಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ಬಹಳಷ್ಟು ನೋವು ಅನುಭವಿಸಿದ್ದೇನೆ,” ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಎಫ್‌ಐಆರ್‌ ದಾಖಲಾಗಿರುವ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಕ್ರಾಲ್‌.ಇನ್‌ ಈ ಪ್ರಕರಣವು ಲಾಕ್‌ಡೌನ್‌ ಸಂದರ್ಭದಲ್ಲಿ ಬಸವಳಿದ ಬಡವರ ಕುರಿತ ಸುದ್ದಿಗಳನ್ನು ಬರೆದ ಸ್ವತಂತ್ರ ಸುದ್ದಿ ಮಾಧ್ಯಮಗಳನ್ನು ತಟಸ್ಥವಾಗಿಸುವ ಪ್ರಯತ್ನ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಸ್ಕ್ರಾಲ್‌.ಇನ್‌ ಮಾಲಾದೇವಿ ಅವರನ್ನು 5 ಜೂನ್‌ 2020ರಂದು ಮಾತನಾಡಿಸಿತ್ತು. ಅವರ ಹೇಳಿಕೆಯನ್ನು ವರದಿಯಲ್ಲಿ ಯಥಾವತ್ತಾಗಿ ದಾಖಲಾಗಿಸಿತ್ತು. ನಮ್ಮ ವರದಿಯನ್ನು ನಾವು ಬೆಂಬಲಿಸುತ್ತೇವೆ,” ಎಂದು ಸ್ಕ್ರಾಲ್‌.ಇನ್‌ ಹೇಳಿಕೆ ನೀಡಿದೆ.

ಲಾಕ್‌ಡೌನ್‌ ಕುರಿತ ವರದಿ: 55 ಎಫ್‌ಐಆರ್‌ ದಾಖಲು

ಲಾಕ್‌ಡೌನ್‌ ಆರಂಭವಾದಾಗಿನಿಂದ ಈವರೆಗೆ ಪತ್ರಕರ್ತರ ಮೇಲೆ ದೇಶಾದ್ಯಂತ 55 ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್‌ ಹೇರಿಕೆಯಾದ ಮೊದಲ ದಿನವೇ, ಲಾಕ್‌ಡೌನ್‌ನ ನಿಯಮಗಳನ್ನು ಉಲ್ಲಂಘಿಸಿದ ಯೋಗಿ ಆದಿತ್ಯನಾಥ್‌ ವಿರುದ್ದ ವರದಿ ಪ್ರಕಟ ಮಾಡಿದ್ದಕ್ಕಾಗಿ ದಿ ವೈರ್‌ ಸ್ಥಾಪಕ ಸಂಪಾದಕ ಸಿದ್ದಾರ್ಥ್‌ ವರದರಾಜನ್‌ ವಿರುದ್ದ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಶುರುವಾದ ಈ ವಿಲಕ್ಷಣ ಪ್ರಯತ್ನ ಇನ್ನೂ ಮುಂದುವರೆಯುತ್ತಲೇ ಇದೆ.

ಈ ರೀತಿಯ ಅಡ್ಡದಾರಿಯಿಂದ ಸ್ವತಂತ್ರ ಸುದ್ದಿ ಮಾಧ್ಯಮಗಳ ಬಾಯಿ ಮುಚ್ಚಿಸಲು ಪ್ರಯತ್ನ ಪಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಉಂಟಾದ ಧಕ್ಕೆ. ವರದಿಗಳನ್ನು ನಿರ್ಭೀತಿಯಿಂದ ಪ್ರಕಟಿಸುವ ಸಲುವಾಗಿಯೇ ಹುಟ್ಟಿಕೊಂಡಿರುವ ಸ್ವತಂತ್ರ ಸುದ್ದಿಜಾಲತಾಣಗಳನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಮುಖ್ಯವಾಹಿನಿಯ ಮಾಧ್ಯಮಗಳು ಪೂರ್ವಗ್ರಹಪೀಡಿರಾಗಿ ವರದಿಗಳನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಸಮಾಜದಲ್ಲಿರುವ ಹುಳುಕುಗಳ ಅಸಲೀಯತ್ತನ್ನು ತೆರೆದಿಡುವ ಸ್ವತಂತ್ರ ಸುದ್ದಿ ಜಾಲತಾಣಗಳು ಬೆಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

Tags: FIRIndependent news portalindia lockdownScroll.inಲಾಕ್‌ಡೌನ್‌ಲಾಕ್‌ಡೌನ್‌ ವೈಫಲ್ಯತೆಸ್ವತಂತ್ರ ಸುದ್ದಿ ಜಾಲತಾಣ
Previous Post

ರಾಜ್ಯದಲ್ಲಿ 337 ಹೊಸ ಕರೋನಾ ಪ್ರಕರಣಗಳು ಪತ್ತೆ

Next Post

ಭಾರತ-ಚೀನಾ ಗಡಿ ವಿವಾದ: ಭಾರತದ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳು

Related Posts

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!
ಇದೀಗ

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

by ಪ್ರತಿಧ್ವನಿ
February 2, 2026
0

ಬೆಂಗಳೂರು : 2026 ರ ಜಾಗತಿಕ ಜಿಡಿಪಿ ಕೊಡುಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಅಂಕಿಅಂಶಗಳ ವರದಿಯೊಂದು ಪ್ರಕಟವಾಗಿದೆ, ಇದೇ ವಿಚಾರಕ್ಕೆ ಟೆಸ್ಲಾ ಸಿಇಒ...

Read moreDetails
Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

February 2, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Next Post
ಭಾರತ-ಚೀನಾ ಗಡಿ ವಿವಾದ: ಭಾರತದ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳು

ಭಾರತ-ಚೀನಾ ಗಡಿ ವಿವಾದ: ಭಾರತದ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳು

Please login to join discussion

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ
Top Story

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

by ಪ್ರತಿಧ್ವನಿ
February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ
Top Story

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

by ಪ್ರತಿಧ್ವನಿ
February 2, 2026
ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!