ಭಾರತದಲ್ಲಿ ಜನವರಿ 30 ರಂದು ಕಂಡು ಬಂದ ಕರೋನಾ ಸೋಂಕು ಕಳೆದ ಮೂರುವರೆ ತಿಂಗಳಲ್ಲಿ ತನ್ನ ಸಂಖ್ಯೆಯನ್ನು ವಿಪರೀತವಾಗಿ ವೃಧ್ದಿಸಿಕೊಂಡಿದೆ. ಸದ್ಯ ಕರೋನಾ ಸೋಂಕು ಮೊದಲು ಕಂಡು ಬಂದ ಚೈನಾಗಿಂತ ಭಾರತದಲ್ಲಿ ಹೆಚ್ಚು ಕರೋನಾ ಪ್ರಕರಣಗಳು ಪತ್ತೆಯಾಗಿದೆ.
ಕಳೆದ ಒಂದು ದಿನದಲ್ಲಿಯೇ ಸರಿಸುಮಾರು 5 ಸಾವಿರ ಪ್ರಕರಣಗಳು ಕಂಡು ಬಂದಿದೆ. ಭಾರತದಲ್ಲಿ ಇದುವರೆಗೂ 96,196 ಕರೋನಾ ಪ್ರಕರಣ ಪತ್ತೆಯಾಗಿದ್ದು, 36,824 ಮಂದಿ ಕರೋನ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ ದಿನದಲ್ಲಿ ಕರೋನಾದಿಂದಾಗಿಯೇ 120 ಮಂದಿ ಮರಣಹೊಂದಿದ್ದು, ಒಟ್ಟು ಅಸುನೀಗಿದವರ ಸಂಖ್ಯೆ 3,029 ಕ್ಕೇರಿದೆ.
ಭಾರತದಲ್ಲಿ ಅತೀ ಹೆಚ್ಚು ಕರೋನಾ ಸೋಂಕು ಮಹಾರಾಷ್ಟ್ರದಲ್ಲಿ ಕಂಡುಬಂದಿದ್ದು, ಒಟ್ಟು 33,053 ಕರೋನಾ ಪ್ರಕರಣ ಪತ್ತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಎರಡನೇ ಸ್ಥಾನದಲ್ಲಿದೆ.
ಜಗತ್ತಿನಾದ್ಯಾಂತ ಸರಿಸುಮಾರು 47 ಲಕ್ಷ ಪ್ರಕರಣಗಳು ಕಂಡುಬಂದಿದ್ದು, ಕಳೆದ ಒಂದು ದಿನದಲ್ಲಿ ಅಂದಾಜು 1 ಲಕ್ಷ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ ಮೂರು ಲಕ್ಷಕ್ಕಿಂತಲೂ ಅಧಿಕ ಮಂದಿ ಕರೋನಾ ಸೋಂಕಿನಿಂದಾಗಿ ಅಸುನೀಗಿದ್ದಾರೆ.