ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಇಂಗ್ಲೆಂಡ್ನಲ್ಲಿ 12 ದಶಲಕ್ಷ ಪೌಂಡ್ ಬೆಲೆಬಾಳುವ ಬೇನಾಮಿ ಆಸ್ತಿ ಹೊಂದಿದ್ದಾರೆಂಬ ಆರೋಪದ ಮೇರೆಗೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 2019 ರ ಫೆಬ್ರವರಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ನಿರಂತರ ತನಿಖೆ ನಡೆಸಲಾಗುತ್ತಿದೆ. ಇದೀಗ ಜನವರಿ 4 ರಂದು ಮತ್ತೆ ಐಟಿ ಅಧಿಕಾರಿಗಳು ವಾದ್ರಾ ಅವರನ್ನು ವಿಚಾರಣೆ ನಡೆಸಿದ್ದಾರೆ.
ದೆಹಲಿಯ ಸುಖದೇವ್ ವಿಹಾರ ಕಚೇರಿಯಲ್ಲಿ ಸತತ 9 ಗಂಟೆಗಳ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಐಟಿ ಸಮನ್ಸ್ ನೀಡಿತ್ತು. ಆದರೆ ಕರೋನಾ ಕಾರಣದಿಂದ ವಿಚಾರಣೆ ಮುಂದೂಡಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಸಾಸ್ತ್ರ ಡೀಲರ್ ಸಂಜಯ್ ಅವರ ಮೂಲಕ ಇಂಗ್ಲೆಡ್ನಲ್ಲಿ ಬೇನಾಮಿ ಆಸ್ತಿ ಖರೀದಿಸಿದ್ದಾರೆಂಬ ಆರೋಪ ಮಾಡಲಾಗಿತ್ತು. ಈ ಸಂಬಂಧ ಜನವರಿ 4 ರಂದು ಆದಾಯ ತೆರೆಗೆ ಇಲಾಖೆ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದೆ. ಈ ಸಂಬಂಧ ವಾದ್ರಾ ಸಂಸ್ಥೆಯಿಂದ ಆಕ್ರಮ ಹಣದ ವರ್ಗಾವಣೆ ಮತ್ತು ಯುಕೆಯಲ್ಲಿ ಅಕ್ರಮ ಆಸ್ತಿಯ ಸಂಬಂಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ವಿಚಾರಣೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಈ ವಿಚಾರಣೆ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಐಟಿ ಅಧಿಕಾರಿಗಳ ತನಿಖೆಯ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ದೇಶಾದ್ಯಂತ ಕೃಷಿ ಕಾನೂನು ತಿದ್ದುಪಡಿಯಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟ ತೀವ್ರವಾಗಿದ್ದು, ಇದನ್ನು ಮುಚ್ಚಿ ಹಾಕಲು ಮತ್ತು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ವೇಳೆ ವಿಚಾರಣೆಯನ್ನು ನಡೆಸಲಾಗಿದೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.