ಇನ್ನೇನು ಲೋಕ ಸಮರ ಸಮೀಪಿಸ್ತಿದ್ದಂತೆ ಬಿಜೆಪಿ,ಜೆಡಿಎಸ್ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಬೇಗ ಅಂತಿಮಗೊಳಿಸಿ ಮುಂದಿನ ತಯಾರಿ ಆರಂಭಿಸಲು ಸಜ್ಜಾಗಿದೆ. ಈ ಮಧ್ಯೆ ಒಂದ್ಕಡೆ ಬಿಜೆಪಿ ಜೆಡಿಎಸ್ ಮೈತ್ರಿ ಮತ್ತೊಂದ್ಕಡೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಸರ್ವೇ ಆರಂಭಿಸಿದೆ. ಇದೀಗ ಕಾಂಗ್ರೆಸ್ ಹೈ ಕಮಾಂಡ್ ನಡೆಸಿರುವ ಆಂತರಿಕ ಸರ್ವೇ ವರದಿ ದೆಹಲಿ ನಾಯಕರ ಕೈ ಸೇರಿದ್ದು , ರಾಜ್ಯ ಕಾಂಗ್ರೆಸ್ ಘಟಕಕ್ಕೆ ಇದು ಶಾಕ್ ನೀಡಿದೆ.

ಕಳೆದ ಬಾರಿ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿ ಭಾರೀ ಮುಖಭಂಗ ಅನುಭವಿಸಿತ್ತು. ಸದ್ಯ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಈ ಬಾರಿ ೧೮ ರಿಂದ ೨೦ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದರೆ. ಆದ್ರೆ ಈಗ ಬಂದಿರುವ ಸರ್ವೆ ವರದಿ ಈ ನಾಯಕರನ್ನು ಶಾಕ್ ಗೆ ದೂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ನಡೆದ ಹಾಗೇ ಸಿದ್ದು ಮತ್ತು ಡಿಕೆಶಿ ಹವಾ ಈ ಚುನಾವಣೆಯಲ್ಲಿ ವರ್ಕ್ ಔಟ್ ಆಗಲ್ಲ.. ಮೋದಿ ಅಲೆಯ ಮುಂದೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 7-8 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಈ ವರದಿ ತಿಳಿಸಿದೆ. ಇದು ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ರಾಜ್ಯ ಹಾಗೂ ರಾಷ್ಟ್ರ ಕಾಂಗ್ರೆಸ್ ನಾಯಕರನ್ನು ನಿದ್ದೆಗಡುವಂತೆ ಮಾಡಿದ್ದು, ಹೆಚ್ಚಿನ ಸ್ಥಾನ ವಶಪಡಿಸಿಕೊಳ್ಳಲು ಹೊಸ ರಣತಂತ್ರ ಸಿದ್ಧಪಡಿಸೋದ್ರಲ್ಲಿ ಕಾಂಗ್ರೆಸ್ ಬ್ಯುಸಿ ಆಗಿದೆ.