ಪ್ರತಿಯೊಬ್ಬರೂ ಬಾಯಿ ಚಪ್ಪರಿಸಿ ತಿನ್ನೋ ಗೋಬಿ ಮತ್ತು ಕಾಟನ್ ಕ್ಯಾಂಡಿ ಗೆ ಆತಂಕ ಎದುರಾಗಿದೆ. ಕಲರ್ ಕಲರ್ ಕಾಟನ್ ಕ್ಯಾಂಡಿ ಮತ್ತು ಗೋಬಿ ತಿನಿಸುಗಳನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಈ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಮಾರಕ ಎಂಬ ಆತಂಕಕಾರಿ ವರದಿ ಆರೋಗ್ಯ ಸಚಿವರ ಕೈ ಸೇರಿದ್ದು, ಸಧ್ಯದಲ್ಲೇ ಕಾಟನ್ ಕ್ಯಾಂಡಿ ಮತ್ತಿ ಗೋಬಿ ಬ್ಯಾನ್ ಮಾಡಿ ಆದೇಶ ಹೊರಡಿಸುವ ಸಾಧ್ಯತೆಗಳಿವೆ.

ಈ ಎರಡು ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದಾದ ಮಾರಕ ಅಂಶಗಳು ಪತ್ತೆಯಾಗಿರೋದು ಆತಂಕಕ್ಕೆ ಎಸೆಮಾಡಿಕೊಟ್ಟಿದೆ. ಕಾಟನ್ ಕ್ಯಾಂಡಿ ಗೆ ಬಳಸುವ ಬಣ್ಣದಲ್ಲಿ ರಾಂಡೋಮನ್ ಬಿ ಅಂಶ ಇರೋದು ಪರೀಕ್ಷೆಯವೇಳೆ ಪತ್ತೆಯಾಗಿದೆ. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಯಿದೆ.

ಇನ್ನು ಗೋಬಿಗೆ ಬಳಸುವ ಕಲರ್ ಕಲರ್ ಜೆಲ್ಲಿಗಳಲ್ಲೂ ಕೂಡ ಇಂಥದ್ದೇ ಮಾರಕ ಅಂಶಗಳು ಪತ್ತೆಯಾಗಿದ್ದು , ಗೋಬಿ ಹೆಚ್ಚು ಸೇವನೆಯಿಂದ ಕ್ಯಾನ್ಸರ್ ಬರಬಹುದಾದ ಸಾಧ್ಯತೆಗಳಿದೆ . ಈ ಎಲ್ಲಾ ಮಾಹಿತಿಯನ್ನ ಆರೋಗ್ಯ ಸಚಿವರು ಪಡೆದುಕೊಂಡಿದ್ದು , ಬಹುಶ ಕಾಟನ್ ಕ್ಯಾಂಡಿ ಸಂಪೂರ್ಣ ಬ್ಯಾನ್ ಮಾಡಿ , ಗೋಬಿ ತಯಾರಿಸುವ ಪದಾರ್ಥಗಳಿಗೆ ಒಂದಷ್ಟು ನಿರ್ಬಂಧ ಹೇರಿ ಆದೇಶ ಮಾಡಬಹುದಾದ ಸಾಧ್ಯತೆ ನಿಚ್ಚಳವಾಗಿದೆ.