ಯುಗಾದಿ ಹಬ್ಬದ ಆಸುಪಾಸಿನಲ್ಲಿ ಸಾಲು ಸಾಲು ರಜೆ ಇದೆ. ರಾಜಧಾನಿ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ಹೋಗಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ.
ಏಪ್ರಿಲ್ 7 ರಿಂದ 14 ರವರೆಗೆ 5 ರಜೆಗಳಿವೆ. ಶಾಲಾ ಮಕ್ಕಳಿಗೆ ರಜೆ ಜೊತೆಗೆ ಕೆಲಸಕ್ಕೂ ಸಾಲು ಸಾಲು ರಜೆ ಸಿಗುತ್ತಿರುವುದರಿಂದ ಬಹುತೇಕರು ಹಬ್ಬಕ್ಕಾಗಿ ತಮ್ಮ ಸ್ವಂತ ಊರುಗಳತ್ತ ಹೊರಟ್ಟಿದ್ದಾರೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಕೂಡ ಸ್ಪಂದಿಸಿದೆ.ಯುಗಾದಿ, ರಂಜಾನ್ ಹಬ್ಬಗಳಿಗಾಗಿ ಸಾಲು ಸಾಲು ರಜೆಗಳು ಬರುತ್ತಿರೋ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳತ್ತ ಜನರು ಹೊರಟ್ಟಿದ್ದಾರೆ.ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ 2000 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈನ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಾತ್ರವಲ್ಲದೆ, ಸುತ್ತಮುತ್ತಲಿನ ಹೊರ ರಾಜ್ಯಗಳಿಗೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಮಾಡಿದೆ.

ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಶಿವಮೊಗ್ಗ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ-ಧಾರವಾಡ, ಬೆಳವಾಗಿ ಹೀಗಿ ರಾಜ್ಯದ ಮೂಲೆ ಮೂಲೆಗೆ ಹೆಚ್ಚುವರಿ ಬಸ್ ಸಂಚಾರ ಇರಲಿದೆ.ಪಕ್ಕದ ರಾಜ್ಯಗಳಾದ ತೆಲಂಗಾಣ ರಾಜಧಾನಿ ಹೈದರಾಬಾದ್, ತಮಿಳುನಾಡಿನ ಚೆನ್ನೈ, ಗೋವಾದ ಪಣದಜಿ, ಎರ್ನಾಕುಲಂ, ತಿರುಪತಿ, ಶಿರಡಿ ಸೇರಿದಂತೆ ಕೆಲವೊಂದು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಒಟ್ಟಾರೆಯಾಗಿ ಕೆಎಸ್‌ಆರ್‌ಟಿಸಿಯಿಂದ 1,750, NWKSRTC ಯಿಂದ 145, ಕೆಕೆಆರ್‌ಟಿಸಿಯಿಂದ 200 ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಮುಂದಿನ ಕೆಲ ದಿನಗಳ ಮಟ್ಟಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರ ಮಾಡಲಿವೆ.