ಈ ದೇಶದಲ್ಲಿ ಬಹು ಬೇಗ ಸ್ಥಾನಮಾನಗಳುˌ ಜನಪ್ರಿಯತೆ ದೊರಕಬೇಕಾದರೆ ನಿಮಗೆ ಬಹುದೊಡ್ಡ ಪ್ರತಿಭೆˌ ಜನಬೆಂಬಲ ಇರಬೇಕೆಂದೇನಿಲ್ಲ. ನೀವು ಪ್ರಥಮ ವರ್ಣೀಯರಾಗಿ ಹುಟ್ಟಿದರೆ ಸಾಕು. ಇದಕ್ಕೆ ತಾಜಾ ಉದಾಹರಣೆ ತೇಜಸ್ವಿ ಸೂರ್ಯ ಎಂಬ “ಬಾಲಕ” ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಛಾದ ಅದ್ಯಕ್ಷಗಿರಿ ಪಡೆದದ್ದು ಮತ್ತು ಒಂದು ಪಂಚಾಯ್ತಿ ಚುನಾವಣೆ ಗೆಲ್ಲಲಾಗದ ಹಾಗೂ ಸಂಘ ಪರಿವಾರದ ಮೊಗಸಾಲೆಯಾಚೆಗೆ ಯಾರಿಗೂ ಪರಿಚಯವಿಲ್ಲದ ಬಿ ಎಲ್ ಸಂತೋಷ್ ಎಂಬ ವ್ಯಕ್ತಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು. ನಾಲ್ಕೆಂಟು ಸಲ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯವಿರುವ ಅನೇಕ ಶಾಸಕರು ಆಪರೇಷನ್ ಕಮಲ ಎಂಬ ರಾಜಕೀಯ ಅನೈತಿಕತೆಗೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ತಾವೂ ಕೂಡ ಮಂತ್ರಿಗಳಾಗಬೇಕು ಎಂದು ಜನನಾಯಕರು ದಿಲ್ಲಿಗೆ ಹೋಗಿ ಈ ಬಿ ಎಲ್ ಸಂತೋಷ್ ಮುಂದೆ ಕೈಕಟ್ಟಿ ನಿಲ್ಲುವುದು ನೋಡಿದರೆ ಈ ದೇಶ ಎಂದಿಗೂ ಸುಧಾರಿಸುವುದಿಲ್ಲ ಎನ್ನುವುದು ಖಚಿತವಾಗಿ ಹೇಳಬಹುದು.
ಕರ್ನಾಟಕದಲ್ಲಿ ಬಿಜೆಪಿ ಎಂಬ ಪುರೋಹಿತರ ಹಿತಾಸಕ್ತಿಗಾಗಿ ಹುಟ್ಟುಹಾಕಲಾದ ಪಕ್ಷವನ್ನು ಶೂನ್ಯದಿಂದ ಕಟ್ಟಿ ಅಧಿಕಾರಕ್ಕೆ ತರಲು ಶ್ರಮಿಸಿದ್ದು ಯಡಿಯೂರಪ್ಪ ಎಂದ ಲಿಂಗಾಯತ ಸಮುದಾಯದ ನಾಯಕ. ಯಡಿಯೂರಪ್ಪರಿಗೆ ತಾನು ವೈದಿಕತೆಗೆ ಸವಾಲು ಹಾಕಿ ಹುಟ್ಟಿದ ಪ್ರಗತಿಪರ ಅವೈದಿಕ ಲಿಂಗಾಯತ ಧರ್ಮಿಯ ಎನ್ನುವ ಅರಿವಿನ ಕೊರತೆಯೇ ಅವರನ್ನು ಅನೇಕ ವೇಳೆ ಮುಗ್ಗರಿಸುವಂತೆ ಮಾಡಿದ್ದು ಎಂದು ಹೇಳಲೇಬೇಕು. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಎಂದು ಹೇಳುವಾಗ ಅದರ ಜೊತೆಗೆ ಇನ್ನೊಂದು ಹೆಸರನ್ನು ವೈದಿಕ ಪತ್ರಕರ್ತರು ಪ್ರಜ್ಞಾಪೂರ್ವಕವಾಗಿ ಸೇರಿಸುವುದು ಮರೆಯುವುದಿಲ್ಲ. ಆ ವೈದಿಕ ಪತ್ರಕರ್ತರು ಜಾತಿ ಮೋಹದಿಂದ ಹೇಳುವ ಇನ್ನೊಂದು ಹೆಸರಿನಿಂದ ಬಿಜೆಪಿಗೆ ಕವಡೆ ಕಾಸಿನ ಲಾಭವೂ ಆಗಿಲ್ಲ ಎನ್ನುವುದು ಬೇರೆ ಸಂಗತಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿಯನ್ನು ಅಖಂಡ ಲಿಂಗಾಯತ ಸಮುದಾಯ ಎಂದಿಗೂ ಬೆಂಬಲಿಸಿಲ್ಲ. ಹಾಗೊಂದು ವೇಳೆ ಬೆಂಬಲಿಸಿದ್ದರೆ 1980 ರಿಂದ 2004ರ ಸಾರ್ವತ್ರಿಕ ಚುನಾವಣೆಯ ತನಕ ಬಿಜೆಪಿಯ ಸಂಖ್ಯಾಬಲ 40 ದಾಟಿರಲಿಲ್ಲ. 2004 ರ ಚುನಾವಣೆಯಲ್ಲಿ ಬಿಜೆಪಿಯ ಬಲ 70 ದಾಟಲು ಕಾರಣರಾದವರು ಹಿಂದುಳಿದ ವರ್ಗದ ಬಂಗಾರಪ್ಪ ˌ ಬ್ರಾಹ್ಮಣ ವರ್ಗದ ರಾಮಕ್ರಷ್ಣ ಹೆಗಡೆˌ ಮತ್ತು ಸ್ಪರ್ಶ ದಲಿತ ಸಮುದಾಯಗಳಾದ ಲಂಬಾಣಿˌ ಭೋವಿˌ ಹಾಗು ಅಸ್ಪರ್ಶ ವರ್ಗದ ಎಡಗೈ ದಲಿತರು ಎನ್ನುವ ಸಂಗತಿ ನಾವು ಮರೆಯಲೇಬಾರದು.
Also Read: ಕಡೆಗಣಿಸುವವರಿಗೆ ತಿರುಗೇಟು ನೀಡಲು ಬಿ ಎಸ್ ವೈ ಸಿದ್ಧತೆ
ಯಡಿಯೂರಪ್ಪ ಆಡಳಿತದ ಮೊದಲ ಅವಧಿ
2008 ರ ಚುನಾವಣೆಯಲ್ಲಿ ಯಡಿಯೂರಪ್ಪ ಸರಳ ಬಹುಮತವೂ ಪಡೆಯಲಾಗದೆ ಐದು ಜನ ಸ್ವತಂತ್ರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸುತ್ತಾರೆ. ಆಗ ಅವರನ್ನು ಸುಶೂತ್ರವಾಗಿ ಆಡಳಿತ ಮಾಡಲು ಕಾರಣ ಕೈಗಳು ಬಿಡುವುದಿಲ್ಲ. ರಾಜಕೀಯದಲ್ಲಿ ಭ್ರಷ್ಟಾಚಾರ ಸಾಮಾನ್ಯ. ಆದರೆ ಶೂದ್ರ ನಾಯಕರ ಭ್ರಷ್ಟಾಚಾರಗಳು ಮಾತ್ರ ಸುದ್ದಿ ಮಾಡುತ್ತವೆ. ಬಹುಕೋಟಿ ಹುಡ್ಕೊ ˌ ರೇವಜೀತುˌ ಬಾಟ್ಲಿಂಗ್ˌ ಪಿ ವಿ ನರಸಿಂಹರಾವ್ ಆಡಳಿತದ ಸರಣಿ ಹಗರಣಗಳು ಮುಂತಾದ ಮೇಲ್ವರ್ಗದವರು ಮಾಡಿದರೆನ್ನಲಾದ ಹಗರಣಗಳು ಮೌನವಾಗಿ ಮುಚ್ಚಿ ಹೋಗುತ್ತವೆ. ಯಡಿಯೂರಪ್ಪ ಆಡಳಿತಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯನ್ನು ನಿಯಂತ್ರಿಸುವ ಧರ್ಮಾಂಧರು ರಾಜ್ಯದ ಕರಾವಳಿ ಭಾಗದಲ್ಲಿ ಪಬ್ ಮತ್ತು ಚರ್ಚಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುವ ಮೂಲಕ ನಾಡಿನ ಸೌಹಾರ್ದತೆಗೆ ದಕ್ಕೆ ತರಲಾರಂಭಿಸುತ್ತವೆ.
Also Read: ತಂತಿ ಮೇಲಿನ ನಡಿಗೆಯಲ್ಲಿ ಬಿ ಎಸ್ ವೈ ಎಡವಿದರೆ ಬಿಜೆಪಿಯೂ ಬೀಳುತ್ತದೆ
ಎಂದೂ ಅಧಿಕಾರದ ರುಚಿ ನೋಡದ ಬಿಜೆಪಿ ಮತ್ತು ಅದರ ಮಂತ್ರಿಗಳು ಇನ್ನಿಲ್ಲದಂತೆ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ, ಒಬ್ಬರ ನಂತರ ಒಬ್ಬರು ಸಂಪುಟಕ್ಕೆ ರಾಜಿನಾಮೆ ನೀಡುವ ಮೂಲಕ ಅವರಲ್ಲಿ ಅನೇಕರು ಜೈಲು ಪಾಲಾಗುತ್ತಾರೆ. ಪಕ್ಷ ಯಾವುದಾದರೇನು ಶೂದ್ರರ ಕೈಯಲ್ಲಿ ಅಧಿಕಾರ ಕೊಟ್ಟರೆ ಹೀಗೆ ಆಗುತ್ತದೆ ಎಂದು ಬಿಂಬಿಸುವಲ್ಲಿ ವೈದಿಕವಾದಿ ಮಾಧ್ಯಮಗಳು ಹಾರಾಡಿ ಸುದ್ದಿ ಪ್ರಕಟಿಸು/ಪ್ರಸಾರಿಸುತ್ತವೆ.
ಯಡಿಯೂರಪ್ಪ ವಿರುದ್ಧ ಬಳ್ಳಾರಿ ಗಣಿ ಮಾಲಿಕ ರಾಜಕಾರಣಿಗಳನ್ನು ಎತ್ತಿ ಕಟ್ಟುವ ಮೂಲಕ ಶಾಸಕರು ಬಂಡಾಯವೇಳುವಂತೆ ಮಾಡಲಾಗುತ್ತದೆ. ಆನಂತರ ಯಡಿರೂಪ್ಪನವರನ್ನು ಕೂಡ ಭ್ರಷ್ಟಾಚಾರದ ಸುಳಿಗೆ ಸಿಲುಕಿಸಿ ಅಧಿಕಾರದಿಂದ ಇಳಿಸಿ ಜೈಲಿಗಟ್ಟಲಾಗುತ್ತದೆ. ಇದು ಬಿಜೆಪಿಯ ಮೊದಲ ಅವಧಿಯಲ್ಲಿ ಪಟ್ಟಭದ್ರರು ಹುನ್ನಾರ ನಡೆಸಿ ಯಶಸ್ವಿಯಾದ ಕಥೆ.
ಆ ನಂತರ ಯಡಿಯೂರಪ್ಪ ಪಕ್ಷ ತೊರೆದು ಬಿಜೆಪಿಗೆ ಪಾಠ ಕಲಿಸುವುದುˌ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಯಡಿಯೂರಪ್ಪನವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ತಿನ ಚುನಾವಣೆ ಗೆಲ್ಲುವುದು ಇವೆಲ್ಲ ನಡೆದುಹೋಗುತ್ತವೆ. ಯಡಿಯೂರಪ್ಪ ಮತ್ತೆ ಪಕ್ಷ ಸೇರಿದ ಮೇಲೆ ಅವರನ್ನು ಪ್ರಶ್ನಾತೀತ ನಾಯಕ ಎಂದು ಒಪ್ಪಿಕೊಳ್ಳದ ಮತೀಯವಾದಿ ಶಕ್ತಿಗಳು ಆಗಾಗ ಯಡಿರೂಪ್ಪ ವಿರುದ್ಧ ಷಡ್ಯಂತ್ರಗಳು ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಇದು ಹಾಗೆ ಮುಂದುವರೆಯುತ್ತದೆ. ಹಿಂದೆ ಕೂಡ ಜನಪರ ಆಡಳಿತ ನೀಡಿದ್ದ ನಿಜಲಿಂಗಪ್ಪ ˌ ದೇವರಾಜ್ ಅರಸ್ ಮತ್ತು ಇತ್ತೀಚಿಗೆ ಸಿದ್ಧರಾಮಯ್ಯನವರ ವಿರುದ್ಧ ವೈದಿಕವಾದಿ ಮಾಧ್ಯಮಗಳು ಮತ್ತು ಧರ್ಮಾಂಧರು ನಿರಂತರ ಅಪಪ್ರಚಾರ ಮಾಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು.
Also Read: ‘ಸಂತೋಷ’ಪಡಬೇಕಾದ ಬಿ ಎಸ್ ವೈ ಬೆಚ್ಚುವುದೇಕೆ?
ಯಡಿಯೂರಪ್ಪ ಆಡಳಿತ ಎರಡನೇ ಅವಧಿ
ಯಡಿಯೂರಪ್ಪ ಪಕ್ಷಕ್ಕೆ ಮರು ಸೇರ್ಪಡೆಗೊಂಡು ರಾಜ್ಯಾದ್ಯಕ್ಷರಾಗಿ ಮೋದಿ ಅಧಿಕಾರಕ್ಕೇರಲು ಹೆಚ್ಚಿನ ಸಂಖ್ಯೆಯ ಸಂಸದನ್ನು ಗೆಲ್ಲುವಂತೆ ಮಾಡುತ್ತಾರೆ. ಆದರೆ ಆನಂತರ ಬಿಜೆಪಿಯನ್ನು ನಿಯಂತ್ರಿಸುವ ಧರ್ಮಾಂಧರು ಯಡಿಯೂರಪ್ಪನವರನ್ನು ನಿಯಂತ್ರಿಸಲು ಆರಂಭಿಸುತ್ತಾರೆ. ಕಾರಣವಿಲ್ಲದೆ ಇನ್ನೊಬ್ಬ ಪುಢಾರಿ ಈಶ್ವರಪ್ಪನನ್ನು ಯಡಿಯೂರಪ್ಪ ವಿರುದ್ಧ ರಾಯಣ್ಣ ಬ್ರಿಗೇಡ್ ಕಟ್ಟಿ ಬಂಡಾಯ ಏಳುವಂತೆ ನೋಡಿಕೊಳ್ಳಲಾಗುತ್ತದೆ. ಮುಂದೆ 2018 ರಲ್ಲಿ ಸಿದ್ಧರಾಮಯ್ಯ ವಿರುದ್ಧ ಅಪಪ್ರಚಾರ ಮಾಡಿದ ಮತೀಯವಾದಿಗಳು ಯಡಿಯೂರಪ್ಪನವರನ್ನು ಎದುರಿಗಿಟ್ಟುಕೊಂಡು ಚುನಾವಣೆ ಎದುರಿಸಿದರೂ ಬಹುಮತ ಪಡೆಯಲಾಗುವುದಿಲ್ಲ.
ಸಮ್ಮಿಶ್ರ ಸರ್ಕಾರವನ್ನು ಮತ್ತದೆ ಅನೈತಿಕ ಆಪರೇಷನ್ ಕಮಲದ ಮೂಲಕ ಬೀಳಿಸಿದ ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಧರ್ಮಾಂಧರು ಸುಲಭವಾಗಿ ಬಿಡುವುದಿಲ್ಲ. ಛಲಗಾರ ಯಡಿಯೂರಪ್ಪ ಪಕ್ಷದೊಳಗಿನ ಧರ್ಮಾಂಧ ಶಕ್ತಿಗಳಿಗೆ ಸವಾಲು ಹಾಕುತ್ತಲೆ ಸರ್ಕಾರ ರಚಿಸುತ್ತಾರೆ. ಈಗ ಅವರ ವಯಸ್ಸು ಮತ್ತು ಅವರ ಮಗನ ಹಸ್ತಕ್ಷೇಪದ ನೆಪಮಾಡಿ ಯಡಿಯೂರಪ್ಪನವರನ್ನು ಖುರ್ಚಿಯಿಂದ ಇಳಿಸಿ ಒಂದು ಮೇಲ್ವರ್ಗದ ಮಿಕವೊಂದನ್ನೊ ಅಥವ ಶೂದ್ರ ವರ್ಗದ ಕೈಗೊಂಬೆಯನ್ನೊ ಪ್ರತಿಷ್ಠಾಪಿಸುವ ಹುನ್ನಾರಗಳು ತೆರೆಮರೆಯಲ್ಲಿ ನಡೆಯುತ್ತಲೆ ಇವೆ. ಅವರ ಮುಂದುವರೆದ ಭಾಗವೇ ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರದ ಖಾಸಗಿ ವಾಹಿನಿಯೊಂದರ ವಿವಾದಾತ್ಮಕ ವರದಿ ಮತ್ತು ಆ ನಂತರದ ಬೆಳವಣಿಗೆಗಳು.
ಯಡಿಯೂರಪ್ಪನವರಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಸ್ವತಂತ್ರವನ್ನೂ ನೀಡದ ಧರ್ಮಾಂಧರು ಆಡಳಿತದ ಎಲ್ಲಕಡೆಗೂ ಹಸ್ತಕ್ಷೇಪ ಮಾಡುತ್ತಾ ಮುಖ್ಯಮಂತ್ರಿಗಳ ಮಗನ ಹಸ್ತಕ್ಷೇಪ ಎಂದು ಸುದ್ದಿ ಹರಿದಾಡುವಂತೆ ನೋಡಿಕೊಳ್ಳುತ್ತಿವೆ. ಬಿಜೆಪಿ ಆಡಳಿತ ಎಲ್ಲೆ ಇರಲಿ ಅಲ್ಲಿ ಅಸಂವಿಧಾನಿಕ ಧರ್ಮಾಂಧ ಸಂಸ್ಥೆಗಳು ಸರ್ಕಾರದ ಎಲ್ಲ ನೀತಿ ನಿರೂಪಣೆಯನ್ನು ನಿರ್ಧರಿಸುತ್ತವೆ ಎನ್ನುವ ಸಂಗತಿ ಹೊಸದೇನಲ್ಲ. ಆದರೆ ಯಡಿಯೂರಪ್ಪ ಇವುಗಳಿಗೆ ಒಂದಷ್ಟು ಕಡಿವಾಣ ಹಾಕಿದ್ದೇ ಯಡಿಯೂರಪ್ಪನವರನ್ನು ಇಳಿಸುವ ಅವುಗಳ ಹುನ್ನಾರಕ್ಕೆ ಮುಖ್ಯ ಕಾರಣ.
Also Read: ಸಂತೋಷ್ ಪದೋನ್ನತಿಯಾದರೆ ಬಿ ಎಸ್ ವೈ ಬಣದಲ್ಲಿ ತಳಮಳವೇಕೆ?
ಬಿಜೆಪಿಯಲ್ಲಿ ಯಡಿಯೂರಪ್ಪ ಇದ್ದುದರಲ್ಲಿಯೇ ಒಂದಷ್ಟು ಧರ್ಮಾಂಧರಲ್ಲದ ನಾಯಕ ಎನ್ನುವುದು ಸಾರ್ವತ್ರಿಕ ಅಭಿಫ್ರಾಯವಾಗಿದೆ. ಯಡಿಯೂರಪ್ಪ ಸ್ಥಾನದಲ್ಲಿ ಧರ್ಮಾಂಧರ ಕೈಗೊಂಬೆ ಏನಾದರೂ ಅಧಿಕಾರದಲ್ಲಿದ್ದಿದ್ದರೆ ಕರ್ನಾಟಕ ಕೂಡ ಉತ್ತರ ಪ್ರದೇಶದಂತೆ ಅರಾಜಕತೆಯಲ್ಲಿ ಬೆಂದು ಹೋಗುತ್ತಿತ್ತು ಎನ್ನುವ ಮಾತು ಜನರು ಅಲ್ಲಲ್ಲಿ ಮಾತನಾಡುವುದು ವಾಸ್ತವ ಸಂಗತಿಯಾಗಿದೆ. ಈ ಧರ್ಮಾಂಧರು ಯಡಿಯೂರಪ್ಪನವರು ಇಳಿಸುವಲ್ಲಿ ಸಫಲರಾಗುತ್ತಾರಾˌ ಹಾಗೊಂದು ವೇಳೆ ಧರ್ಮಾಂಧರು ಅವರನ್ನು ಇಳಿಸಿದರೆ ಯಡಿಯೂರಪ್ಪನವರ ಮುಂದಿನ ನಡೆ ಏನಾಗಬಹುದು ಎನ್ನುವುದು ರಾಜಕೀಯ ಲೆಕ್ಕಾಚಾರಗಳ ಕುತೂಹಲದ ಸಂಗತಿಯಾಗಿದೆ.