ಮಧ್ಯಪ್ರದೇಶದಲ್ಲಿ ವಕೀಲ ದೀಪಕ್ ಬುಂಡೆಲೆ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಅಮಾನತುಗೊಂಡಿದ್ದಾರೆ. ಮಾರ್ಚ್ 23ಕ್ಕೆ ಆಸ್ಪತ್ರೆಗೆ ತೆರಳುತ್ತಿದ್ದ ದೀಪಕ್ ಬುಂಡೆಲೆ ಎಂಬವರ ಮೇಲೆ ಬೆತುಲ್ ವ್ಯಾಪ್ತಿಗೆ ವರುವ ಕೊತ್ವಾಲಿ ಠಾಣೆಯ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದರು. ಆ ಬಳಿಕ ಈ ಪ್ರಕರಣ ಸಂಬಂಧ, ನಿಮ್ಮ ಗಡ್ಡ ನೋಡಿ ನೀವು ಮುಸ್ಲಿಂ ಎಂದುಕೊಂಡು ನಿಮಗೆ ಹೊಡೆದು ಬಿಟ್ಟೆವು ಎಂದು ಪೊಲೀಸರು ದೀಪಕ್ ಬುಂಡೆಲೆ ಬಳಿ ಕ್ಷಮೆಯನ್ನೂ ಯಾಚಿಸಿದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಜನರಲ್ (IG) ಅಶುತೋಶ್ ರೈ ಎಎಸ್‌ಐ ಬಿಎಸ್ ಪಾಟಿಲ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Also Read: ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!









