ಮುಂಬೈ ಪೊಲೀಸರ ವಿರುದ್ಧ ಮಾನಹಾನಿ ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಸಂಪೂರ್ಣ ಸಂಪಾದಕೀಯ ಮಂಡಳಿಯ ವಿರುದ್ದ ಮುಂಬೈ ನಗರ ಪೋಲಿಸ್ ಜಾಮೀನು ರಹಿತ ಪ್ರಕರಣ ದಾಖಲಿಸಿದೆ.
ಸ್ಪೆಷಲ್ ಬ್ರಾಂಚ್ ಸಬ್ ಇನ್ಸ್‌ಪೆಕ್ಟರ್ ಶಶಿಕಾಂತ್ ಪವಾರ್ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 500 (ಮಾನಹಾನಿ) ಜೊತೆಗೆ 1922 ರ ಪೊಲೀಸ್ ಕಾಯ್ದೆಯ ಸೆಕ್ಷನ್ 3 (1) (ಅಸಮಾಧಾನಕ್ಕೆ ಪ್ರಚೋದನೆ) ರ ಅಡಿಯಲ್ಲಿ ಎನ್‌ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ಪೆಷಲ್ ಬ್ರಾಂಚ್ ಪಿಎಸ್‌ಐ ಶಶಿಕಾಂತ್ ಪವಾರ್ ಅವರು ರಿಪಬ್ಲಿಕ್ ಟಿವಿ ಮತ್ತು ಅದರ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ಉಪ ಸುದ್ದಿ ಸಂಪಾದಕಿ ಸಾಗರಿಕಾ ಮಿತ್ರಾ, ನಿರೂಪಕ ಮತ್ತು ಸಹಾಯಕ ಸಂಪಾದಕ ಶಿವಾನಿ ಗುಪ್ತಾ, ಉಪ ಸಂಪಾದಕ ಶವಾನ್ ಸೇನ್, ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಜೊತೆಗೆ ನ್ಯೂಸ್ ರೂಂ ಉಸ್ತುವಾರಿ ಮತ್ತು ಸಂಪಾದಕೀಯ ಸಿಬ್ಬಂದಿಗಳ ವಿರುದ್ಧ ದೂರು ನೀಡಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
Also Read: ರಿಪಬ್ಲಿಕ್ ಟಿವಿ ಮತ್ತು ಟೌಮ್ಸ್ ನೌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ಘಟಾನುಘಟಿಗಳು
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಿಪಬ್ಲಿಕ್ ಟಿವಿ, ಇದು ಆಘಾತಕಾರಿ, ಮಾಧ್ಯಮ ಹಕ್ಕುಗಳ ಮೇಲಿನ ಆಕ್ರಮಣ ಎಂದು ಹೇಳಿದೆ.
ಅಕ್ಟೋಬರ್ 22 ರಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಹಾಗೂ ಮುಂಬೈ ಪೊಲೀಸರ ವಿರುದ್ಧ ಅಪಮಾನಕಾರಿ ವರದಿ ಮಾಡಿದೆ ಎಂದು ಪವಾರ್ ದೂರಿನಲ್ಲಿ ಹೇಳಿದ್ದಾರೆ.
Also Read: ಟಿಆರ್‌ಪಿ ತಿರುಚಿದ ಆರೋಪ: ಅರ್ನಾಬ್ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ
Mumbai police registered the serious non bailable offense against the Republic TV and it's staffers for airing concerned report that amounting incitement and dissatisfaction among Mumbai police force and defaming them @NewIndianXpress pic.twitter.com/5iRA1ajxzX
— Sudhir Suryawanshi (@ss_suryawanshi) October 23, 2020
ರಿಪಬ್ಲಿಕ್ ಟಿವಿ ವರದಿಯು, ಮುಂಬೈ ಪೊಲೀಸ ಅಧಿಕಾರಿಗಳು ಆಯುಕ್ತರ ವಿರುದ್ಧ ದಂಗೆ ಏಳುತ್ತಿದೆ ಎಂದು ಹೇಳಿಕೊಂಡಿದೆ, ಅಧಿಕಾರಿಗಳು ಆಯುಕ್ತರ ಆದೇಶಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಿಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದು ನಗರ ಪೊಲೀಸ್ ಪಡೆಯ ಚಿತ್ರಣವನ್ನು ಹಾಳು ಮಾಡಿದೆ ಎಂದು ಆರೋಪಿಸಲಾಗಿದೆ.