1931 ನೇ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂ ಪಟ್ಟಣದಲ್ಲಿ ಹುಟ್ಟಿದ ಅಬ್ದುಲ್ ಕಲಾಂರ ಪೂರ್ತಿ ಹೆಸರು, ಅವು಼ಲ್ ಫಕೀರ್ ಜೈನುಲ್ ಆಬಿದೀನ್ ಅಬ್ದುಲ್ ಕಲಾಂ.
ವಿಜ್ಞಾನದಲ್ಲಿ ಆಸಕ್ತಿಯಿದ್ದ ಕಲಾಂ, ಭೌತಶಾಸ್ತ್ರ ಹಾಗೂ ಏರೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ನಾಲ್ಕು ದಶಕಗಳ ಕಾಲ ವಿಜ್ಞಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.
ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಮಿಲಿಟರಿ ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡ ಅಬ್ದುಲ್ ಕಲಾಂ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಡಾವಣಾ ವಾಹನ ತಂತ್ರಜ್ಞಾನದ ಕೆಲಸಕ್ಕಾಗಿ “ಭಾರತದ ಕ್ಷಿಪಣಿ ಮನುಷ್ಯ” (Missile Man of India) ಎಂದು ಪ್ರಸಿದ್ಧರಾದರು. 1998 ರಲ್ಲಿ ಭಾರತದ ಪೋಖ್ರಾನ್- II ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಸಾಂಸ್ಥಿಕ, ತಾಂತ್ರಿಕ ಮತ್ತು ರಾಜಕೀಯ ಪಾತ್ರವನ್ನು ವಹಿಸಿದರು.
2002 ರಲ್ಲಿ ಆಢಳಿತರೂಢ ಭಾರತೀಯ ಜನತಾ ಪಕ್ಷ ಮತ್ತು ಅಂದಿನ ವಿರೋಧ ಪಕ್ಷ ಕಾಂಗ್ರೆಸ್ ಎರಡರ ಬೆಂಬಲದೊಂದಿಗೆ ಕಲಾಂ 2002 ರಲ್ಲಿ ಭಾರತದ 11 ನೇ ಅಧ್ಯಕ್ಷರಾಗಿ ಆಯ್ಕೆಯಾದರು. “ಜನರ ಅಧ್ಯಕ್ಷ” ಎಂದು ವ್ಯಾಪಕವಾಗಿ ಉಲ್ಲೇಖಿಸಲ್ಪಟ್ಟ ಅವರು, ಒಂದೇ ಅಧ್ಯಕ್ಷ ಅವಧಿಯ ನಂತರ ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ನಾಗರಿಕ ಜೀವನಕ್ಕೆ ಮರಳಿದರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಆಪ್ತವಾಗಿ ಸಂವಹನ ನಡೆಸುತ್ತಿದ್ದ ಅಬ್ದುಲ್ ಕಲಾಂ, ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರೂ ಅಂತೆಯೇ ಮಕ್ಕಳನ್ನು ಪ್ರೀತಿಸಿದರು ಹಾಗೂ ಮಕ್ಕಳಿಂದ ಪ್ರೀತಿಸಲ್ಪಟ್ಟರು. ಅಬ್ದು ಕಲಾಂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಹಲವು ವೀಡಿಯೋಗಳು ಈಗಲೂ ಅಂತರ್ಜಾಲದಲ್ಲಿದ್ದು, ಅದರಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ಥಿ ನೀಡುವ, ವಿದ್ಯಾರ್ಥಿಗಳನ್ನು ಪ್ರೀತಿಸುವ ಅಬ್ದುಲ್ ಕಲಾಮರನ್ನು ಕಾಣಬಹುದು. ಅವರ ಮಗುತನದ ಮುಗ್ಧತೆಯನ್ನು ಗಮನಿಸಬಹುದು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಲೇ ತಮ್ಮ ಕೊನೆಕಾಲ ಮುಗಿಸಿದರು. ಜುಲೈ 27 2015 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM)ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುವಾಗ, 83 ವರ್ಷ ವಯಸ್ಸಿನ klaM, ಹೃದಯ ಸ್ತಂಭನದಿಂದ ಕುಸಿದು ಸಾವನ್ನಪ್ಪಿದರು. ರಾಷ್ಟ್ರಮಟ್ಟದ ಗಣ್ಯರು ಸೇರಿದಂತೆ ಸಾವಿರಾರು ಜನರು ಕಲಾಂ ತವರಾದ ರಾಮೇಶ್ವರಂನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು, ಅಲ್ಲಿ ಅವರಿಗೆ ಪೂರ್ಣ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಯಿತು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಬ್ದುಲ್ ಕಲಾಂ ಪುಣ್ಯಸ್ಮರಣೆಯನ್ನು ಟ್ವಿಟರ್ ಬಳಕೆದಾರರು ಟ್ರೆಂಡ್ ಮಾಡಿದ್ದಾರೆ. #APJAbdulKalam #MissileMan #AbdulKalam ಎಂಬ ಹ್ಯಾಷ್‌ಟ್ಯಾಗ್ ಮೂಲಕ ನೆಟ್ಟಿಗರು ಅಬ್ದುಲ್ ಕಲಾಂರನ್ನು ನೆನಪಿಸುತ್ತಿದ್ದಾರೆ,