ಪ್ರಧಾನಿ ನರೇಂಧ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆಯ ವೈಫಲ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿರುವ ಮೋದಿ ಚೀನಾದಿಂದ ಆಮದುಗೊಳ್ಳುತ್ತಿರುವ ಸರಕಿನ ಪ್ರಮಾಣ 2014 ರಿಂದ ಹೆಚ್ಚಿದೆ ಎಂದು ಟ್ವೀಟ್ ಮಾಡಿದ್ದಾರೆ.
ಚೈನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬಳಿಕ ಕೇಂದ್ರದ ಇಬ್ಬಂದಿತನದ ಮೇಲೆ ರಾಹುಲ್ ಗಾಂಧಿ ಬೆಳಕು ಚೆಲ್ಲಿದ್ದಾರೆ. ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಗ್ರಾಫ್ ಪ್ರಕಾರ ಯುಪಿಎ ಅವಧಿಯ 2008 ರಿಂದ 2014 ರ ನಡುವೆ 14 ಶೇಕಡಾ ಇದ್ದ ಆಮದಿನ ಪ್ರಮಾಣ 2014 ರ ಬಳಿಕದ ಎನ್‌ಡಿಎ ಅವಧಿಯಲ್ಲಿ 18 ಶೇಕಡಾಕ್ಕೆ ತಲುಪಿದ್ದನ್ನು ತೋರಿಸುತ್ತದೆ.
ಸತ್ಯಗಳು ಸುಳ್ಳಾಗುವುದಿಲ್ಲ, ಬಿಜೆಪಿ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತದೆ, ಆದರೆ ಬಿಜೆಪಿ ಮಾಡುತ್ತಿರುವುದು; ಚೀನಾದಿಂದ ಖರೀದಿ ಎಂದು ವ್ಯಂಗ್ಯವಾಡಿದ್ದಾರೆ.
Facts don’t lie.
BJP says:
Make in India.BJP does:
Buy from China. pic.twitter.com/hSiDIOP3aU— Rahul Gandhi (@RahulGandhi) June 30, 2020