• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭೀಮಾ ಕೊರೆಗಾಂವ್‌ ಹಿಂಸಾಚಾರ: ಇನ್ನೂ ವಿಚಾರಣೆಗೊಳಗಾಗದ ಹಿಂದುತ್ವ ನಾಯಕರು

by
September 28, 2020
in ದೇಶ
0
ಭೀಮಾ ಕೊರೆಗಾಂವ್‌ ಹಿಂಸಾಚಾರ: ಇನ್ನೂ ವಿಚಾರಣೆಗೊಳಗಾಗದ ಹಿಂದುತ್ವ ನಾಯಕರು
Share on WhatsAppShare on FacebookShare on Telegram

ಸ್ವಾತಂತ್ರ್ಯ ಸಿಕ್ಕಿ 7 ದಶಕಗಳೇ ಕಳೆದರೂ ದೇಶದ ಬಡ ವರ್ಗದವರ ದೀನ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನೂ ಕೊನೆ ಅಗಿಲ್ಲ. ಇಂದಿಗೂ ದೇಶದಲ್ಲಿ ದಲಿತ ವರ್ಗದವರ ಬೆಂಬಲಕ್ಕೆಂದೇ ಜಾರಿಗೊಳಿಸಲಾದ ಕಠಿಣ ಕಾಯ್ದೆಗಳಿವೆ. ಆದರೆ ಪ್ರಭಾವಿಗಳು, ಹಣ ಬಲವುಳ್ಳವರು ಕಠಿಣ ಕಾನೂನಿನ ಕುಣಿಕೆಯಿಂದಲೂ ಸುಲಭವಾಗೇ ಪಾರಾಗುತಿದ್ದಾರೆ. ದೇಶದಲ್ಲಿ ಇಂದು ಕೆಳ ವರ್ಗದವರ ಮೇಲೆ ನಿತ್ಯವೂ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ,ಹಿಂಸೆಗಳನ್ನು ನಾವು ಓದುತ್ತಲೇ ಇರುತ್ತೇವೆ. ನಂತರ ಸುಲಭವಾಗೇ ಮರೆತುಬಿಡುತ್ತೇವೆ. ಅದರೆ ಎಷ್ಟೋ ಸಂದರ್ಭಗಳಲ್ಲಿ ಒತ್ತಡಕ್ಕೆ ಮಣಿದ ಅಪರಾಧಿಗಳನ್ನು ಬಂಧಿಸುವ ಗೋಜಿಗೂ ಹೋಗುವುದಿಲ್ಲ. 2018 ರಲ್ಲಿ ಭೀಮಾ ಕೊರೆಗಾಂವ್‌ ಸಂದರ್ಭದಲ್ಲಿ ದಲಿತರ ಮೇಲೆ ಮೇಲ್ವರ್ಗದವರು ನಡೆಸಿದ ದೌರ್ಜನ್ಯ ಕುರಿತು ಪೋಲೀಸರಿಗೆ ಜನವರಿ 2 ರಂದೇ ದೂರು ಸಲ್ಲಿಸಿದರೂ ಇಂದಿಗೂ ಕೂಡ ಆರೋಪಿಗಳನ್ನು ಬಂಧಿಸಲಿಲ್ಲ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆವತ್ತು ಜನವರಿ 1, 2018 ರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿದ ದಲಿತ ಸಮುದಾಯದ ಸದಸ್ಯರ ಮೇಲೆ ಹಿಂಸಾತ್ಮಕ ಜನಸಮೂಹ ದಾಳಿ ನಡೆದ ಒಂದು ದಿನದ ನಂತರ, ಜಾತಿ ವಿರೋಧಿ ಕಾರ್ಯಕರ್ತೆ ಅನಿತಾ ಸಾವಲೆ ಅವರು ಸಮಸ್ತಾ ಹಿಂದೂ ಅಘಾಡಿ ಅಧ್ಯಕ್ಷ ಮತ್ತು ಹಿಂದುತ್ವ ಮುಖಂಡ ಮಿಲಿಂದ್ ಎಕ್ಬೋಟೆ ಮತ್ತು ಶಿವ ಪ್ರತಿಸ್ತಾನ್ ಹಿಂದೂಸ್ತಾನ್ ನಾಯಕ ಸಂಭಾಜಿ ಭಿಡೆ ವಿರುದ್ಧ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದಾಳಿಯ “ಮಾಸ್ಟರ್ ಮೈಂಡ್ಸ್” ಆಗಿದ್ದವರು ಈ. ಪ್ರಕರಣವನ್ನು ಹಿಂಪಡೆಯಲು ಸಾವಲೆ ಅವರ ಮೇಲೆ ಭಾರಿ ಒತ್ತಡ ಮತ್ತು ಬೆದರಿಕೆ ಹಾಕಿದರೂ, ಅವರು ದೂರನ್ನು ಹಿಂಪಡೆಯಲಿಲ್ಲ ಮತ್ತು ಪ್ರಕರಣದಲ್ಲಿ ಶೀಘ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ವಿಫಲವಾದಾಗ, ಅವರು ಅನಿವಾರ್ಯವಾಗಿ ನ್ಯಾಯ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇದಾದ ಎರಡು ವರ್ಷ ಮತ್ತು ಒಂಬತ್ತು ತಿಂಗಳ ನಂತರವೂ, ಆರೋಪಿಗಳ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳುವ ಎಲ್ಲ ಭರವಸೆಯನ್ನೂ ಅವರು ಕಳೆದುಕೊಂಡಿದ್ದಾರೆ., ಪ್ರಕರಣದ ತನಿಖೆ ನಡೆಸುತ್ತಿರುವ ಶಿಕ್ರಾಪುರ ಪೊಲೀಸರು ಅವರು ಈಗಾಗಲೇ ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ,

ಕಾನೂನು ಕ್ರಮ ಜರುಗಿಸಲು ಕಡ್ಡಾಯವಾದ ನಿರ್ಬಂಧಗಳಿಗಾಗಿ ಫೈಲ್ ಅನ್ನು ಡೈರೆಕ್ಟರ್ ಜನರಲ್ ಆಫ್ ಪೋಲಿಸ್ (ಡಿಜಿಪಿ) ಕಚೇರಿಗೆ ಕಳಿಸಲಾಗಿದ್ದು ಅಲ್ಲಿ ಬಾಕಿ ಇದೆ ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಬಿ) ಮತ್ತು 295 (ಎ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ, ನಾವು ಕೆಲವು ತಿಂಗಳ ಹಿಂದೆ ವರದಿಯನ್ನು ಡಿಜಿಪಿ ಕಚೇರಿಗೆ ಕಳುಹಿಸಿದ್ದೇವೆ. ಆದರೆ ಅಲ್ಲಿಂದ ಇನ್ನೂ ಕಡತ ವಾಪಾಸ್‌ ಬಂದಿಲ್ಲ ಎಂದು ಶಿಕ್ರಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಸದಾಶಿವ್ ಶೆಲಾರ್ ಹೇಳುತ್ತಾರೆ.

ಐಪಿಸಿಯ ಸೆಕ್ಷನ್ 153 (ಬಿ) ಎನ್ನುವುದು ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತವಾದದ್ದು, ಸೆಕ್ಷನ್ 295 (ಎ) ಅನ್ನು ಪೂಜಾ ಸ್ಥಳ ಅಥವಾ ಧಾರ್ಮಿಕವಾದ ಪವಿತ್ರವಾದ ವಸ್ತುವಿನ ವಿನಾಶ, ಹಾನಿ, ಅಥವಾ ಅಪವಿತ್ರತೆ ಮಾಡುವಂತಹ ಆರೋಪವಾಗಿದೆ. ಒಂದು ವರ್ಗದ ವ್ಯಕ್ತಿಗಳ ಧರ್ಮವನ್ನು ಅವಮಾನಿಸುವ ಉದ್ದೇಶ ಹೊಂದಿದ ಆರೋಪದಡಿಯಲ್ಲಿ ಇವರಿಬ್ಬರ ಜೊತೆಗೆ ಅವರ ಸಂಸ್ಥೆಗಳ ಇತರ ಸದಸ್ಯರ ಮೇಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪ ದಾಖಲಿಸಲಾಗಿತ್ತು. ಡಿಜಿಪಿ ಕಚೇರಿಯು ಅದನ್ನು ಅನುಮೋದಿಸಿದ ನಂತರವೂ ವರದಿಯನ್ನು ಗೃಹ ಇಲಾಖೆಗೆ ಕಳುಹಿಸಬೇಕಾಗುತ್ತದೆ ಮತ್ತು ಅವರು ಅನುಮೋದನೆ ಪಡೆದಾಗ ಮಾತ್ರ ಪೊಲೀಸರಿಗೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಶೆಲಾರ್ ಹೇಳಿದರು.

ಜನವರಿ 1, 2018 ರಂದು, ಅನಿತಾ ಸಾವಲೆ ಪುಣೆಯ ಈಶಾನ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿದ್ದರು. ಇದು 1818 ರಲ್ಲಿ ಬ್ರಿಟಿಷ್ ಸೈನ್ಯವು ಗೆದ್ದ ಐತಿಹಾಸಿಕ ಯುದ್ಧದ 200 ನೇ ವಾರ್ಷಿಕೋತ್ಸವವಾಗಿತ್ತು. ಈ ಯುದ್ದದಲ್ಲಿ ಹೆಚ್ಚಾಗಿ ದಲಿತ ಸಮುದಾಯದ ಸೈನಿಕರನ್ನು ಒಳಗೊಂಡಿದ್ದು ಬ್ರಾಹ್ಮಣ ರಾಜ ಬಾಜಿ ರಾವ್ II ಆಳ್ವಿಕೆ ನಡೆಸಿದ ಪೇಶ್ವೆಗಳ ಆಡಳಿತದ ವಿರುದ್ಧ. ಭೀಮಾ ಕೋರೆಗಾಂವ್ ಕದನವು ಒಂದು ಭಾಗವಾಗಿದ್ದ ಮೂರನೆಯ ಆಂಗ್ಲೋ-ಮರಾಠಾ ಯುದ್ಧವು ಪಶ್ಚಿಮ ಭಾರತದ ಹೆಚ್ಚಿನ ಭಾಗಗಳಲ್ಲಿ ಬ್ರಿಟಿಷರು ತಮ್ಮ ಆಡಳಿತವನ್ನು ಸ್ಥಾಪಿಸಲು ಸಹಾಯ ಮಾಡಿತು.

ಆದಾಗ್ಯೂ, ದಲಿತ ಸಮುದಾಯಕ್ಕೆ, ಅಸ್ಪೃಶ್ಯತೆಯ ವಿರುದ್ಧದ ಅವರ ಹೋರಾಟಕ್ಕೆ ಈ ಇತಿಹಾಸವು ನಿರ್ಣಾಯಕವಾಗಿದೆ. ಪುಣೆ ಮೂಲದ ಜಾತಿ ವಿರೋಧಿ ಕಾರ್ಯಕರ್ತೆ ಅನಿತಾ ಸಾವಾಲೆ, ಸಂಭಾಜಿ ಭಿಡೆ ಮತ್ತು ಮಿಲಿಂದ್ ಎಕ್ಬೋಟೆ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇವರ ಕಣ್ಣೆದಿರಿನಲ್ಲೆ ನನ್ನ ಸುತ್ತಲಿನ ಜನರನ್ನು ಥಳಿಸಲಾಯಿತು, ರಕ್ತ ಪಾತ ನಡೆಯಿತು. ನಮ್ಮ ವಾಹನಗಳನ್ನು ಸುಟ್ಟು ಹಾಕಲಾಯಿತು ಮತ್ತು ಗಲಭೆಕೋರರು ತಮ್ಮ ನಾಯಕರಾದ ಭಿಡೆ ಮತ್ತು ಎಕ್ಬೋಟೆ ಅವರಿಗೆ ಜೈಕಾರ ಹಾಕುವ ಘೋಷಣೆಗಳನ್ನು ಬಹಿರಂಗವಾಗಿ ಕೂಗುತಿದ್ದರು. ನನ್ನ ದೂರಿನಲ್ಲಿ ಈ ಎಲ್ಲವನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಪ್ರಕರಣದ ತನಿಖೆಯನ್ನು ವಿಳಂಬಗೊಳಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಸಾವಲೆ ಆರೋಪಿಸಿದ್ದಾರೆ. ದೂರು ನೀಡಿದ್ದರೂ ಮಾರ್ಚ್ 2018 ರವರೆಗೆ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದಾಗ, ಪೊಲೀಸರು ಅನಿವಾರ್ಯವಾಗಿ ಏಕಬೋಟೆಯನ್ನು ಬಂದಿಸಬೇಕಾಯಿತು. ಅವರು ಒಂದು ತಿಂಗಳ ಅವಧಿಯನ್ನು ಜೈಲಿನಲ್ಲಿ ಇರಬೇಕಾಯಿತು. ನಂತರ ಪುಣೆ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತು. ಆದರೆ ಭಿಡೆ ಅವರನ್ನು ಬಂಧಿಸುವುದು ಹೋಗಲಿ ಕನಿಷ್ಟ ವಿಚಾರಣೆಯನ್ನೂ ಮಾಡಲಿಲ್ಲ.

ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ, ತನಿಖೆಯ ದಿಕ್ಕೆ ಬದಲಾಗಿದೆ. ದಲಿತರ ಮೇಲೆ ನಡೆದ ದಾಳಿಯ ಹಿಂದೆ ಇಬ್ಬರು ಬ್ರಾಹ್ಮಣ ಮುಖಂಡರಾದ ಭಿಡೆ ಮತ್ತು ಎಕ್ಬೋಟೆ ನೇತೃತ್ವದ ಹಿಂದುತ್ವ ಗುಂಪುಗಳು ಇದ್ದವು ಎಂಬ ಆರೋಪವಿದ್ದರೂ ಅಂದಿನ ಮುಖ್ಯಮಂತ್ರಿ, ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರವು ಆರೋಪವನ್ನು ಎಡಪಂಥೀಯರ ಮೇಲೆ ವರ್ಗಾಯಿಸಿತು. ಈ ಆರೋಪದ ಮೇಲೆ ಒಂಬತ್ತು ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ವಕೀಲರನ್ನು ಆ ವರ್ಷ ಜೂನ್ ಮತ್ತು ಆಗಸ್ಟ್‌ನಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆಯನ್ನು ಮತ್ತಷ್ಟು ನಿರ್ಲಕ್ಷಿಸಲಾಗುವುದು ಎಂದು ತಾನು ಊಹಿಸಿದ್ದೆ ಎಂದು ಸಾವಾಲೆ ಹೇಳುತ್ತಾರೆ. ಆದ್ದರಿಂದ, ನಾನು ತುರ್ತು ವಿಚಾರಣೆಯನ್ನು ಕೋರಿ ಹೈಕೋರ್ಟ್‌ಗೆನಲ್ಲಿ ದೂರು ದಾಖಲಿಸಿದೆ. ಭೀಮಾ ಕೋರೆಗಾಂವ್ ಪ್ರಕರಣ ಮತ್ತು ಎಲ್ಗರ್ ಪರಿಷತ್ ಘಟನೆಯ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಕಂಡುಹಿಡಿಯುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ, ದಲಿತ ಸಮುದಾಯದ ಮೇಲೆ ಹಲ್ಲೆ ನಡೆಸಲಾಯಿತು. ಎಲ್ಗರ್ ಪರಿಷತ್ ಒಂದು ಪ್ರತ್ಯೇಕ ಕಾರ್ಯಕ್ರಮವಾಗಿತ್ತು. ಎಲ್ಗರ್ ಪರಿಷತ್ ಪ್ರಕರಣದಲ್ಲಿ ಪೊಲೀಸರು ಬಹುಜನ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದ್ದರೆ, ಭೀಮಾ ಕೋರೆಗಾಂವ್ ಹಿಂಸಾಚಾರದ ನಂತರ ಹಲವಾರು ಬಹುಜನ ಯುವಕರನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳುತ್ತಾರೆ. ಸಾವಲೆ ಅವರು ಜುಲೈ 2018 ರಲ್ಲಿ ಬಾಂಬೆ ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್ ಅರ್ಜಿಯನ್ನು ಸಲ್ಲಿಸಿದರು ಕೂಡ ಅದು ಒಂದು ವರ್ಷದ ನಂತರ ವಿಚಾರಣೆಗೆ ಬಂದಿತು. ಇದನ್ನು ನ್ಯಾಯಾಲಯವು ಒಂದು ವರ್ಷದವರೆಗೆ ತುರ್ತು ಎಂದು ಪರಿಗಣಿಸಲಿಲ್ಲ ಈಗ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಒಕ್ಕೂಟದ ನೇತೃತ್ವದ ಹೊಸ ಸರ್ಕಾರ ಬಂದಿದ್ದರೂ ಕೂಡ ಪ್ರಸ್ತುತ ಸರ್ಕಾರವು ಅಕ್ಷರಶಃ ಹಿಂದಿನ ರೀತಿಯಲ್ಲಿ ವರ್ತಿಸಿದೆ ಎಂದು ಪ್ರಕರಣದ ವಕೀಲ ಮೋರೆ ಹೇಳುತ್ತಾರೆ.

ಜಾತಿ ಆಧಾರಿತ ಗಲಭೆಗಳಿಗೆ ಕಾರಣವಾಗುವ ಘಟನೆಗಳ ಬಗ್ಗೆ ತನಿಖೆ ನಡೆಸಲು 2018 ರ ಫೆಬ್ರವರಿಯಲ್ಲಿ ಸ್ಥಾಪಿಸಲಾದ ಭೀಮಾ ಕೋರೆಗಾಂವ್ ಕಮಿಷನ್ ಆಫ್ ಎನ್‌ಕ್ವೈರಿ, ಈ ವರ್ಷದ ಏಪ್ರಿಲ್‌ನಲ್ಲಿ ಹಠಾತ್ತನೆ ನಿಷ್ಕ್ರಿಯಗೊಂಡಿತು. ಇದು ಕಳೆದ ಮಾರ್ಚ್‌ನಲ್ಲಿ ತನ್ನ ಅಧಿಕಾರಾವಧಿಯನ್ನು ಆರು ತಿಂಗಳ ವಿಸ್ತರಣೆಯನ್ನು ಮಾಡುವಂತೆ ಕೋರಿದ್ದರೂ ಪ್ರಯೋಜನ ಶೂನ್ಯ. ಕನಿಷ್ಠ ನಮ್ಮ ಆಯೋಗವು ನಮ್ಮ ಅಹವಾಲು ಹೇಳಿಕೊಳ್ಳಲು ಒಂದು ವೇದಿಕೆಯಾಗಿತ್ತು. ಪೊಲೀಸರು ಮತ್ತು ನ್ಯಾಯಾಲಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಾಗ, ನಾವು ಕನಿಷ್ಠ ನಮ್ಮ ಪ್ರಕರಣವನ್ನು ಆಯೋಗದ ಮುಂದೆ ಹಾಜರುಪಡಿಸಬಹುದಿತ್ತು, ಆದರೆ ರಾಜ್ಯ ಸರ್ಕಾರವು ಆ ಪ್ರಕ್ರಿಯೆಯನ್ನು ಸಹ ನಿಲ್ಲಿಸಿತು ಎಂದು ಮೋರೆ ಹೇಳುತ್ತಾರೆ.

ರಾಜ್ಯ ಸರ್ಕಾರವು ತನ್ನ ಪಾದಗಳನ್ನು ಎಳೆಯುತ್ತಲೇ ಇದ್ದರೂ, ಕಾರ್ಯಕರ್ತರ ವಿರುದ್ಧ ಎಲ್ಗರ್ ಪರಿಷತ್ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಹೋಗಿದ್ದು, ಉಲ್ಬಣಗೊಂಡಿರುವ ಕೋವಿಡ್‌ 19 ಸಾಂಕ್ರಾಮಿಕ ರೋಗದ ನಡುವೆಯೂ ಹೆಚ್ಚಿನ ಜನರನ್ನು ಬಂಧಿಸಿದೆ. ಒಟ್ಟಾರೆಯಾಗಿ, 15 ಜನರು ಜೈಲಿನಲ್ಲಿ ಕೊಳೆಯುತಿದ್ದಾರೆ. ಎಡಪರ ಕಾರ್ಯಕರ್ತರನ್ನು ಗುರಿಯಾಗಿಸಲು ಮತ್ತು ಅಪರಾಧೀಕರಿಸುವ ಹಿಂದಿನ ಸರ್ಕಾರದ ಪ್ರಯತ್ನ ಮತ್ತು ಆ ಪ್ರಕರಣವನ್ನು ಪರಿಶೀಲಿಸಲು ಪ್ರಸ್ತುತ ಸರ್ಕಾರಕ್ಕೆ ಮನಸ್ಸಿಲ್ಲದಿರುವುದು ದಲಿತ ಸಮುದಾಯಕ್ಕೆ ನ್ಯಾಯದ ಅವಕಾಶವನ್ನು ನಿರಾಕರಿಸಿದಂತೆ ಆಗಿದೆ ಎಂದು ಸಾವಲೆ ಹೇಳುತ್ತಾರೆ.

Tags: ಭೀಮಾ ಕೋರೆಗಾಂವ್ಭೀಮಾ ಕೋರೆಗಾಂವ್ ಹೋರಾಟಭೀಮಾ ಕೋರೇಗಾಂವ್ ಪ್ರಕರಣಹಿಂದುತ್ವ
Previous Post

ಬಿಹಾರ ಚುನಾವಣೆ: ತಂತ್ರ-ಪ್ರತಿತಂತ್ರದ ರಾಜಕೀಯದಾಟ ಆರಂಭ

Next Post

ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಯಾವುದೇ ಸಭೆ ಕರೆದಿಲ್ಲ; NDAಯಿಂದ ಹೊರನಡೆದ SAD

Related Posts

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್
ಇದೀಗ

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

by ಪ್ರತಿಧ್ವನಿ
January 18, 2026
0

ಬೆಂಗಳೂರು : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚ ಹಗರಣದಲ್ಲಿ ಬೆಂಗಳೂರು ನಗರ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು...

Read moreDetails
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಯಾವುದೇ ಸಭೆ ಕರೆದಿಲ್ಲ; NDAಯಿಂದ ಹೊರನಡೆದ SAD

ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಯಾವುದೇ ಸಭೆ ಕರೆದಿಲ್ಲ; NDAಯಿಂದ ಹೊರನಡೆದ SAD

Please login to join discussion

Recent News

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು
Top Story

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

by ಪ್ರತಿಧ್ವನಿ
January 19, 2026
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

Daily Horoscope: ಇಂದು ಹೂಡಿಕೆಯಲ್ಲಿ ದಿಢೀರ್‌ ಲಾಭ ಗಳಿಸುವ ರಾಶಿಗಳಿವು

January 19, 2026
ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada