ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸರಸಂಘಚಾಲಕರಾಗಿರುವ ಮೋಹನ್ ಭಾಗವತ್ ಅವರು ಭಾರತದಲ್ಲಿ ಮುಸ್ಲಿಂರಗಿ ಸಿಕ್ಕಿರುವಷ್ಟು ಪ್ರಾತಿನಿಧ್ಯತೆ ಬೇರೆ ಇಸ್ಲಾಮಿಕ್ ದೇಶಗಳಲ್ಲಿ ಇತರ ಧರ್ಮೀಯರಿಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಭಾರತದ ಸಂವಿಧಾನ ನಮ್ಮ ದೇಶದಲ್ಲಿ ಮುಸಿಂರಿಗೆ ಅವಕಾಶವನ್ನು ಕಲ್ಪಸಿಕೊಟ್ಟಿದೆ ಎಂದು ಹೇಳಿದ್ದಾರೆ.
“ಭಾರತದಲ್ಲಿ ಹಿಂದುಗಳು ಮಾತ್ರ ವಾಸಿಸಬಹುದು ಎಂದು ಸಂವಿಧಾನ ಹೇಳಲಿಲ್ಲ. ಇಲ್ಲಿ ಹಿಂದುಗಳ ಇಚ್ಚೆ ಮಾತ್ರ ನಡೆಯುತ್ತದೆ. ಹಿಂದುಗಳ ಹೊರತಾಗಿ ಬೇರೆ ಯಾರು ಇಲ್ಲಿ ವಾಸಿಸಬೇಕಾದರೂ, ಅವರು ಹಿಂದುಗಳ ಶ್ರೇಷ್ಠತೆಯನ್ನು ಒಪ್ಪಿಕೊಳ್ಳಬೇಕು ಎಂದು ಸಂವಿಧಾನ ಹೇಳಲಿಲ್ಲ,” ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದಲ್ಲಿ ಈ ರೀತಿಯ ಸಂವಿಧಾನ ಇಲ್ಲ. ಇತರ ಧರ್ಮೀಯರಿಗೆ ತಮ್ಮ ಧರ್ಮವನ್ನು ಪಾಲಿಸುವ ಅವಕಾಶವನ್ನೇ ನೀಡಲಿಲ್ಲ, ಎಂದು ʼವಿವೇಕ್ʼ ಎಂಬ ಹಿಂದಿ ಭಾಷೆಯ ವೃತ್ತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದೇಶದಲ್ಲಿರುವ ಒಗ್ಗಟ್ಟಿನ ಕುರಿತು ಮಾತನಾಡಿರುವ ಅವರು, “ದೇಶಭಕ್ತಿ ಮತ್ತು ದೇಶದ ಸಂಸ್ಕೃತಿಯ ಭಾವ ಜಾಗೃತವಾದಾಗ ಎಲ್ಲಾ ಧರ್ಮಗಳು ಮಾಯವಾಗಿ ಎಲ್ಲರೂ ಒಗ್ಗಟ್ಟಾಗುತ್ತಾರೆ,” ಎಂದು ಹೇಳಿದ್ದಾರೆ.
“ಮೇವಾಡ ರಾಜ ರಾಣಾ ಪ್ರತಾಪನೊಂದಿಗೆ ಹಲವು ಮುಸ್ಲಿಂ ಸೈನಿಕರು ಸೇರಿ ಮೊಘಲರ ವಿರುದ್ದ ಯುದ್ದ ಮಾಡಿದ್ದರು. ಭಾರತದ ಸಂಸ್ಕೃತಿಯ ಮೇಲೆ ದಾಳಿಯಾದಾಗ ಪ್ರತಿ ಬಾರಿಯೂ ಇಲ್ಲಿನ ಜನರು ಒಗ್ಗಟ್ಟಾಗಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.