ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ್ ಶಂಕರ್ ಜಯನಗರದ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದು ತಿಲಕ ನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಿಲಕನಗರದಲ್ಲಿ ವಾಸ್ತವ್ಯವಾಗಿದ್ದ ವಿಜಯ್ ಶಂಕರ್ ಇತ್ತೀಚೆಗಷ್ಟೇ ಜಯನಗರಕ್ಕೆ ತಮ್ಮ ನಿವಾಸ ಬದಲಾಯಿಸಿದ್ದರು.
ಐಎಮ್‌ಎ ಹಗರಣದಲ್ಲಿ 1.5 ಕೋಟಿ ಲಂಚ ಪಡೆದಿರುವುದಾಗಿ ವಿಶೇಷಾ ತನಿಖಾ ದಳ ಇವರನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣದಲ್ಲಿ ಇವರು ಜೈಲು ವಾಸವನ್ನೂ ಅನುಭವಿಸಿದ್ದರು. ಐಎಮ್‌ಎ ಹಗರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಓರ್ವರಾಗಿದ್ದ ವಿಜಯ್ ಶಂಕರ್ ಹೆಸರನ್ನು ಪೋಲಿಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದರು. ಇದೇ ವಿಚಾರದಲ್ಲಿ ಸಿಬಿಐ ಇವರಿಗೆ ನೋಟೀಸ್ ನೀಡಿತ್ತು. ಇದರಿಂದ ಕಳೆದ ಒಂದು ವಾರದಿಂದ ವಿಜಯ್ ಶಂಕರ್ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.
Also Read: ಐಎಂಎ ಪ್ರಕರಣ: ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ತನಿಖೆ ಯಾಕಿಲ್ಲ?
Also Read: ಐಎಂಎ ಪ್ರಕರಣ ಸಿಬಿಐಗೆ: ಕರ್ನಾಟಕದ `ಶಾರದಾ ಚಿಟ್ ಫಂಡ್’ ಆರಂಭ?
Also Read: ಐಎಂಎ ಪ್ರಕರಣ: ಜನರ ಹಣ ಮರಳಿ ದೊರೆಯುವ ಹಾದಿ ಕಠಿಣ